ಜೆರುಸಲೇಂ (ಇಸ್ರೇಲ್) : ಯಾವುದೇ ಸುಳಿವು ನೀಡದೇ ಪ್ಯಾಲೆಸ್ಟೀನ್ನ ಹಮಾಸ್ ಉಗ್ರರು ಶನಿವಾರ ಇಸ್ರೇಲ್ ಮೇಲೆ ಭೀಕರ ಸ್ವರೂಪದ ದಾಳಿ ಮಾಡಿದ್ದರು. ಇಸ್ರೇಲ್ನ ದಕ್ಷಿಣ ದಿಕ್ಕಿನಲ್ಲಿರುವ ಲಕ್ಷಾಂತರ ನಾಗರಿಕರು ಈ ಉಗ್ರರು ಹಾರಿಸಿದ ನೂರಾರು ರಾಕೆಟ್ಗಳ ಸದ್ದಿಗೆ ಕಂಗಾಲಾದರು. ವಾಯುದಾಳಿಯ ಸೈರನ್ಗಳು ಉತ್ತರದ ಟೆಲ್ ಅವೀವ್ನವರೆಗೂ ಕೇಳಿಸಿತ್ತು.
ಶಸ್ತ್ರಸಜ್ಜಿತ ಭಯೋತ್ಪಾದಕರು ಇಸ್ರೇಲ್ನ ಅತ್ಯಂತ ಭದ್ರ ಪ್ರದೇಶವನ್ನೂ ಸ್ಫೋಟಿಸಿದರು. ಸಮಯ ಕಳೆದಂತೆ ದಾಳಿಯಿಂದ ಸಾವಿನ ಸಂಖ್ಯೆ ಏರುತ್ತಲೇ ಹೋಯಿತು. ಇಸ್ರೇಲ್ ಅಧಿಕಾರಿಗಳು ಟೈಮ್ಸ್ ಆಫ್ ಇಸ್ರೇಲ್ ಪತ್ರಿಕೆಗೆ ನೀಡಿದ ಮಾಹಿತಿಯಂತೆ, ಅಂದಾಜು 1,590ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡರು. ನೂರಾರು ಮಂದಿ ಪ್ರಾಣ ಕಳೆದುಕೊಂಡರು.
1) ಇಸ್ರೇಲ್ನ ಭದ್ರತಾ ವೈಫಲ್ಯ : ಇಸ್ರೇಲ್ ಮೇಲಾದ ರಣಭೀಕರ ದಾಳಿಯು 1973 ರಲ್ಲಿ ಮಧ್ಯಪ್ರಾಚ್ಯ ಯುದ್ಧವನ್ನು ಮತ್ತೆ ನೆನಪಿಸಿತು. 50 ವರ್ಷಗಳ ಹಿಂದೆ ಈಜಿಪ್ಟ್-ಸಿರಿಯನ್ ಒಕ್ಕೂಟವು ಇಸ್ರೇಲ್ ಮೇಲೆ ಇದೇ ರೀತಿಯ ದಾಳಿ ಮಾಡಿತ್ತು. ಆಗ ಇಸ್ರೇಲ್ ಮಿಲಿಟರಿಗೆ ಈ ದಾಳಿ ದೊಡ್ಡ ಆಘಾತವನ್ನೇ ನೀಡಿತ್ತು. ಈ ಘಟನೆಯ ನಂತರ, ಇಷ್ಟು ವರ್ಷ ಕಳೆದ ಮೇಲೂ ಹಮಾಸ್ ಏಕಾಏಕಿ ನಡೆಸುವ ದಾಳಿ ಬಗ್ಗೆ ಸುಳಿವೇ ಇಲ್ಲದಷ್ಟು ಇಸ್ರೇಲ್ ಹಿಂದುಳಿಯಿತು.
ಹಾಗಾದರೆ, ಹಮಾಸ್ ಹೇಗೆ ಈ ಮಟ್ಟಿಗೆ ವೈಮಾನಿಕ ದಾಳಿ ನಡೆಸಲು ಸಾಧ್ಯವಾಯಿತು? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ರಾಜಕೀಯ ವಿಶ್ಲೇಷಕರು ವೈಫಲ್ಯಕ್ಕಾಗಿ ಬೆಂಜಮಿನ್ ನೆತನ್ಯಾಹುರನ್ನು ಟೀಕಿಸಲು ಆರಂಭಿಸಿದ್ದಾರೆ. ಒಂದೆಡೆ ಯುದ್ಧ ವೈಫಲ್ಯ ಮತ್ತೊಂದೆಡೆ ಸಾವು-ನೋವುಗಳ ಸಂಖ್ಯೆ ಏರುತ್ತಲೇ ಇದೆ. ಪರಿಣಾಮ ನೆತನ್ಯಾಹು ತನ್ನ ಸರ್ಕಾರ ಮತ್ತು ದೇಶದ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.
2) ಒಳನುಸುಳುವಿಕೆ : ಹಮಾಸ್ ಸಂಘಟನೆ ಹಲವಾರು ಇಸ್ರೇಲಿಗಳನ್ನು ಸೆರೆಹಿಡಿದಿದ್ದು ಒತ್ತೆಯಾಳಾಗಿ ಇರಿಸಿಕೊಂಡಿದೆ. ಈ ಉಗ್ರರು ಇಸ್ರೇಲ್ ಸೈನಿಕರನ್ನು ಎಳೆದುಕೊಂಡು ಹೋಗಿದ್ದು, ಅವರ ಮೃತದೇಹಗಳ ಮೇಲೆ ನಿಂತಿರುವ ಭೀಕರ ವೀಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ. ಹೀಗೆ ಸೆರೆಯಾದವರಲ್ಲಿ ಹಿರಿಯ ಇಸ್ರೇಲಿ ಸೇನಾ ಅಧಿಕಾರಿಗಳೂ ಇದ್ದಾರೆ ಎಂದು ಹಮಾಸ್ ಹೇಳಿದೆ. ಇದಕ್ಕೂ ಮುನ್ನ ಯಾವುದೇ ಭಯವಿಲ್ಲದ ಹಮಾಸ್ 2006ರಲ್ಲಿ ಸೈನಿಕ ಗಿಲಾಡ್ ಶಾಲಿತ್ನನ್ನು ಎಂಬವನನ್ನು ಗಡಿಯಾಚೆಗಿನ ದಾಳಿಯಲ್ಲಿ ವಶಪಡಿಸಿಕೊಂಡಿದ್ದರು. ಈ ಮೂಲಕ 1,000 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡುವಂತೆ ಬೇಡಿಕೆಯೊಡ್ಡಿತ್ತು.
ಈ ವಿನಿಮಯ ಒಪ್ಪಂದಕ್ಕಾಗಿ ಹಮಾಸ್ ಐದು ವರ್ಷಗಳ ಕಾಲ ಶಾಲಿತ್ನನ್ನು ತಮ್ಮ ವಶದಲ್ಲಿಯೇ ಇಟ್ಟುಕೊಂಡಿತ್ತು. ಇಸ್ರೇಲ್ ದೇಶದೊಳಗೆ ಹಮಾಸ್ ಪ್ಯಾರಾಗ್ಲೈಡರ್ಗಳನ್ನು ಸಹ ಕಳುಹಿಸಿತ್ತು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. 1980ರ ದಶಕದ ಉತ್ತರಾರ್ಧದಲ್ಲಿ ಪ್ಯಾಲೆಸ್ಟೀನಿಯನ್ ಉಗ್ರಗಾಮಿಗಳು ಲೆಬನಾನ್ನಿಂದ ಉತ್ತರ ಇಸ್ರೇಲ್ಗೆ ಹ್ಯಾಂಗ್-ಗ್ಲೈಡರ್ಗಳ ಮೂಲಕ ಹಾರಿದ್ದ ಆರು ಇಸ್ರೇಲಿ ಸೈನಿಕರನ್ನು ಕೊಂದಿತ್ತು. ಗಡಿ ಭಾಗ ಗಾಜಾದಲ್ಲಿ ಹಮಾಸ್ ಇಸ್ರೇಲ್ ಸೈನಿಕರನ್ನು ಮತ್ತು ನಾಗರಿಕರನ್ನು ಒತ್ತೆಯಾಳಾಗಿಸಿಕೊಳ್ಳುತ್ತಿದೆ ಎಂದು ಇಸ್ರೇಲಿ ಸೈನ್ಯವು ತಡವಾಗಿ ದೃಢಪಡಿಸಿತ್ತು. ಆದರೆ ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿತು.
3) ಅಲ್-ಅಕ್ಸಾ ಮಸೀದಿಗಾಗಿ ಮನಸ್ತಾಪ: ಮುಸ್ಲಿಮರು ಮತ್ತು ಯಹೂದಿಗಳಿಬ್ಬರಿಗೂ ಅಲ್-ಅಕ್ಸಾ ಮಸೀದಿ ತುಂಬಾ ಪವಿತ್ರ. ಆದರೆ ಈ ಮಸೀದಿ ವಿಚಾರದಲ್ಲೂ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ವಿವಾದ, ಉದ್ವಿಗ್ನತೆ ದೀರ್ಘಕಾಲದಿಂದಲೂ ಇದೆ. 2021ರಲ್ಲಿ ಟೆಂಪಲ್ ಮೌಂಟ್ ಎಂದು ಕರೆಯಲ್ಪಡುವ ಈ ಅಲ್-ಅಕ್ಸಾ ಮಸೀದಿ ಕುರಿತಾದ ಹಕ್ಕುಗಳಿಗೆ ಇಬ್ಬರ ನಡುವೆ ರಕ್ತಸಿಕ್ತ 11 ದಿನಗಳ ಯುದ್ಧ ನಡೆದಿತ್ತು. ಅಲ್-ಅಕ್ಸಾ ಮಸೀದಿ ಇಸ್ರೇಲ್ನ ಜೆರುಸಲೇಂನಲ್ಲಿದೆ.
ಇತ್ತೀಚೆಗೆ ಪ್ಯಾಲೇಸ್ಟೀನಿಗಳು ಇಲ್ಲಿ ನಿಯೋಜಿಲ್ಪಟ್ಟಿದ್ದ ಇಸ್ರೇಲ್ನ ಪೊಲೀಸ್ ಅಧಿಕಾರಿಗಳ ಮೇಲೆ ಹಿಂಸಾಚಾರವೆಸಗಿದ್ದರು. ಹಮಾಸ್ ಉಗ್ರರಿಗೆ ಮೆಕ್ಕಾ, ಮದೀನಾ ಬಳಿಕ ಜೆರುಸಲೇಂನ ಅಲ್-ಅಕ್ಸಾ ಮಸೀದಿಯೇ ಪವಿತ್ರವಾದುದು. ಹೀಗಾಗಿ ಮಸೀದಿ ಯುದ್ಧಕ್ಕೆ ಕಾರಣವಾಗಿದೆ. ಯಹೂದಿಗಳು ನಮ್ಮ ಒಪ್ಪಂದವನ್ನು ಉಲ್ಲಂಘಿಸಿ ನಮ್ಮ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಪ್ಯಾಲೆಸ್ಟೀನ್ ಮಾಡುತ್ತಲೇ ಇದೆ. 2007ರಲ್ಲಿ ಉಗ್ರಗಾಮಿ ಗುಂಪು ಹಮಾಸ್ ಗಾಜಾವನ್ನು ತನ್ನ ವಶಕ್ಕೆ ಪಡೆದಕೊಂಡಿತು. ಇದರ ಪರಿಣಾಮ ಇಸ್ರೇಲ್ ಮತ್ತು ಹಮಾಸ್ ನಾಲ್ಕು ಯುದ್ಧಗಳನ್ನು ನಡೆಸಿದೆ.
ಇದನ್ನೂ ಓದಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರ ಅಟ್ಟಹಾಸ: ಮೃತರ ಸಂಖ್ಯೆ 300ಕ್ಕೆ ಏರಿಕೆ