ವಾಷಿಂಗ್ಟನ್: 50 ವರ್ಷಗಳ ಬಳಿಕ ಚಂದ್ರನಲ್ಲಿಗೆ ತೆರಳಲು ಸಿದ್ಧವಾಗಿದ್ದ ನಾಸಾದ ಬಹು ಮಹತ್ವಾಕಾಂಕ್ಷಿ ಯೋಜನೆ ಆರ್ಟೆಮಿಸ್ ರಾಕೆಟ್ ಉಡ್ಡಯನಕ್ಕೆ ಮತ್ತೆ ಅಡ್ಡಿ ಉಂಟಾಗಿದೆ.
ಆರ್ಟೆಮಿಸ್1 ರಾಕೆಟ್ ಉಡ್ಡಯನವನ್ನು ಮುಂದೂಡಲಾಗಿದೆ. ರಾಕೆಟ್‌ನಲ್ಲಿ ಇಂಧನ ಲೀಕೇಜ್ ಅನ್ನು ತಡೆಯಲು ಸಾಧ್ಯವಾಗದೇ ಇರುವುದರಿಂದ ಹಾಗೂ ಸಮಸ್ಯೆಯನ್ನು ಗುರುತಿಸಿ ಸರಿಪಡಿಸುವಲ್ಲಿ ವಿಫಲವಾಗಿರುವುದರಿಂದ ಬಾಹ್ಯಾಕಾಶ ನೌಕೆಯ ಉಡ್ಡಯನವನ್ನು ಮುಂದೂಡಲಾಗಿದೆ ಎಂದು ನಾಸಾ ತಿಳಿಸಿದೆ.
ಮತ್ತೆ ಯಾವಾಗಾ ಆರ್ಟೆಮಿಸ್ -1 ರಾಕೆಟ್ ಉಡ್ಡಯನ ಮಾಡಲಾಗುತ್ತದೆ ಎಂಬುದರ ಬಗ್ಗೆ ನಾಸಾ ಯಾವುದೇ ಮಾಹಿತಿ ನೀಡಿಲ್ಲ. ಆಗಸ್ಟ್ 29 ರಂದು ಫ್ಲೋರಿಡಾದಲ್ಲಿರುವ ನಾಸಾ ಕೆನೆಡಿ ಬಾಹ್ಯಾಕಾಶ ಲ್ಯಾಂಚ್‌ಪ್ಯಾಡ್ ನಿಂದ ರಾಕೆಟ್ ಉಡ್ಡಯನಕ್ಕೆ ಯೋಜಿಸಲಾಗಿತ್ತು.
ಆದರೆ ರಾಕೆಟ್‌ನಲ್ಲಿ ಇಂಧನ ಸೋರಿಕೆ ಪತ್ತೆಯಾಗಿದ್ದರಿಂದ ಉಡ್ಡಯನವನ್ನು ತಡೆ ಹಿಡಿಯಲಾಗಿತ್ತು. ಸೂಪರ್ ಕೋಲ್ಡ್ ಹೈಡ್ರೋಜನ್, ಆಮ್ಲಜನಕ ಲೀಕ್ ಆಗಿದ್ದರಿಂದ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸುವ ರಾಕೆಟ್ ಉಡ್ಡಯನ ಮುಂದೂಡಲಾಯಿತು.
ಇದನ್ನು ಓದಿ:ಚಂದಿರನ ಅಂಗಳಕ್ಕೆ ಹಾರಲು NASA ಪ್ರಯತ್ನ: ತಾಂತ್ರಿಕ ಸಮಸ್ಯೆಯಿಂದ ಮೇಲೇಳದ ರಾಕೆಟ್