ಕ್ಯಾನ್‌ಬೆರಾ: ಸಮುದ್ರದ ದೈತ್ಯ ಜಲಚರವಾದ ಶಾರ್ಕ್ ಎಂದಿಗೂ ಅಪಾಯಕಾರಿ. ಈ ಮೀನುಗಳ ಕ್ರೂರತ್ವ ಮತ್ತು ದಾಳಿಯ ಬಗ್ಗೆ ಈಗಾಗಲೇ ಹಲವಾರು ಸರಣಿ ಸಿನಿಮಾಗಳು ಬಂದಿವೆ. ಇದರ ಮಧ್ಯೆಯೇ ಆಸ್ಟ್ರೇಲಿಯಾದ ಪರ್ತ್ನಲ್ಲಿ 16 ವರ್ಷದ ಬಾಲಕಿಯೊಬ್ಬಳು ಮೋಜಿಗಾಗಿ ಡಾಲ್ಫಿನ್ಗಳೊಂದಿಗೆ ಈಜಾಡುತ್ತಿದ್ದಾಗ ಪ್ರಾಣ ಕಳೆದುಕೊಂಡಿದ್ದಾಳೆ.
ಪರ್ತ್ನ ಉಪನಗರ ನಾರ್ತ್ ಪ್ರೀಮ್ಯಾಂಟಲ್ನಲ್ಲಿರುವ ಸ್ವಾನ್ ನದಿಯಲ್ಲಿ ಈಜಾಡುವಾಗ ಬಾಲಕಿಯ ಮೇಲೆ ದೈತ್ಯ ಶಾರ್ಕ್ಗಳು ದಾಳಿ ಮಾಡಿವೆ. ಬಾಲಕಿ ತನ್ನ ಸೇಹಿತರು, ಕುಟುಂಬಸ್ಥರ ಜೊತೆಗೂಡಿ ಸ್ವಾನ್ ನದಿಗೆ ವಿಹಾರಕ್ಕೆ ಬಂದಿದ್ದಳು. ಈ ವೇಳೆ ಅಲ್ಲಿದ್ದ ಡಾಲ್ಫಿನ್ಗಳ ಗುಂಪಿನೊಂದಿಗೆ ಆಟವಾಡಲು ನದಿಗಿಳಿದಿದ್ದಾಳೆ. ನದಿ ತಟಕ್ಕೆ ಶಾರ್ಕ್ಗಳು ಬಂದಿದ್ದವು. ಈಜಾಡುತ್ತಿದ್ದ ಬಾಲಕಿಯ ಮೈಮೇಲೆರಗಿದ ಅವು ಗಂಭೀರವಾಗಿ ಕಚ್ಚಿವೆ.
-
#Breaking: A young woman has been pulled from the Swan River after a suspected shark attack in North Fremantle | @cyndilavrencic pic.twitter.com/TnzAD0t3gd
— 10 News First Perth (@10NewsFirstPER) February 4, 2023 " class="align-text-top noRightClick twitterSection" data="
">#Breaking: A young woman has been pulled from the Swan River after a suspected shark attack in North Fremantle | @cyndilavrencic pic.twitter.com/TnzAD0t3gd
— 10 News First Perth (@10NewsFirstPER) February 4, 2023#Breaking: A young woman has been pulled from the Swan River after a suspected shark attack in North Fremantle | @cyndilavrencic pic.twitter.com/TnzAD0t3gd
— 10 News First Perth (@10NewsFirstPER) February 4, 2023
ಇದನ್ನು ಕಂಡ ಲೈಫ್ ಗಾರ್ಡ್ ಸಿಬ್ಬಂದಿ ತಕ್ಷಣವೇ ನದಿಗೆ ಧುಮುಕಿ ಬಾಲಕಿಯ ರಕ್ಷಣೆ ಮಾಡಿ, ದಡಕ್ಕೆ ಕರೆತಂದಿದ್ದಾರೆ. ಆದರೆ, ತೀವ್ರ ಗಾಯಗೊಂಡು ರಕ್ತಸ್ರಾವವಾದ ಕಾರಣ ಅಸುನೀಗಿದ್ದಾಳೆ. ಘಟನೆ ಪ್ರವಾಸಿಗರಲ್ಲಿ ಭೀತಿ ಮೂಡಿಸಿದೆ. ನದಿ ತಟದಲ್ಲಿ ಶಾರ್ಕ್ ಕಂಡುಬಂದಿದ್ದು ಅಚ್ಚರಿಯೂ ಆಗಿದೆ. ಈ ಭಾಗದಲ್ಲಿ ದೈತ್ಯ ಜಲಚರಗಳು ಕಾಣಸಿಗುವುದು ತೀರಾ ವಿರಳ ಎಂದೇ ಹೇಳಲಾಗುತ್ತಿದೆ.
ದಾಳಿ ಮಾಡಿದ ಶಾರ್ಕ್‌ನ ಬಗೆಯನ್ನು ಗುರುತಿಸಬೇಕಿದೆ. ನದಿಗೆ ಇಳಿಯುವಾಗ ಪ್ರವಾಸಿಗರು ಜಾಗೃತರಾಗಿರಿ, ಸರ್ಕಾರದ ಸೂಚನೆಗಳನ್ನು ಪಾಲಿಸಿ ಎಂದು ಎಚ್ಚರಿಕೆ ನೀಡಲಾಗಿದೆ. ದೇಶದಲ್ಲಿ ಈ ಹಿಂದೆ ಮನುಷ್ಯರ ಮೇಲೆ ಶಾರ್ಕ್ ದಾಳಿ ನಡೆದಿದ್ದು 1960ರಲ್ಲಿ. ಅಂದು ಸಿಡ್ನಿಯ ರೋಸ್‌ವಿಲ್ಲೆ ಸೇತುವೆಯಲ್ಲಿ 3.3 ಮೀಟರ್ ಉದ್ದದ ಬುಲ್ ಶಾರ್ಕ್ ದಾಳಿಯಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಅಂದಿನಿಂದ ಯಾವುದೇ ದಾಳಿ ನಡೆದ ವರದಿಯಾಗಿರಲಿಲ್ಲ.
ಇದನ್ನೂ ಓದಿ: ಗೂಢಾಚಾರಿಕೆ ನಡೆಸುತ್ತಿದ್ದ ಚೀನಾ ಬಲೂನ್ ಹೊಡೆದುರುಳಿಸಿದ ಅಮೆರಿಕ ಸೇನೆ