ಕೌಲಾಲಂಪುರ್ (ಮಲೇಷ್ಯಾ) : ಎರಡು ಬಾರಿ ಒಲಿಂಪಿಕ್ ಪದಕ ಪಡೆದ ವಿಜೇತೆ ಶಟ್ಲರ್ ಪಿವಿ ಸಿಂಧು ಅವರು ತಮ್ಮ ಎದುರಾಳಿ ತೈ ತ್ಸು ಯಿಂಗ್ ಅವರನ್ನು ಸದೆಬಡಿಯಲು ಸಾಧ್ಯವಾಗದೇ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಟೂರ್ನಮೆಂಟ್ ನ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡಿದ್ದಾರೆ.
ಪಿವಿ ಸಿಂಧು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರಾದರೂ ಯಶಸ್ವಿಯಾಗಲಿಲ್ಲ. ಇದರೊಂದಿಗೆ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಭಾರತದ ಸ್ಟಾರ್ ಷಟ್ಲರ್ ಮಲೇಷ್ಯಾ ಮಾಸ್ಟರ್ಸ್‌ನಿಂದ ಹೊರಬಿದ್ದಿದ್ದಾರೆ.
ಪಿವಿ ಸಿಂಧು ವಾರದ ಹಿಂದೆ ಮಲೇಷ್ಯಾ ಓಪನ್‌ನಲ್ಲಿ ತೈ ತ್ಸು ಯಿಂಗ್ ವಿರುದ್ಧ ಸೋತಿದ್ದರು. ಇದು ತೈ ತ್ಸು ಯಿಂಗ್‌ಗೆ ಪಿವಿ ಸಿಂಧು ಅವರ ವೃತ್ತಿಜೀವನದ 17 ನೇ ಸೋಲಾಗಿದೆ. ತನ್ನ ಕೊನೆಯ ಏಳು ಪಂದ್ಯಗಳಲ್ಲಿ ಚೈನೀಸ್ ತೈಪೆ ಆಟಗಾರ್ತಿಯನ್ನು ಸೋಲಿಸಲು ವಿಫಲರಾಗಿದ್ದಾರೆ.
ಇನ್ನು ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಅವರು ಬಾಸೆಲ್‌ನಲ್ಲಿ ನಡೆದ 2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಾಯ್ ತ್ಸು ಯಿಂಗ್ ಅವರನ್ನು ಕೊನೆಯ ಬಾರಿ ಸೋಲಿಸಿದ್ದರು.
ಪಿ ವಿ ಸಿಂಧು ನಂತರ ಫೈಸನಲ್‌ನಲ್ಲಿ ಜಪಾನ್‌ನ ನವೋಮಿ ಒಕುಹರಾ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿದ್ದರು. ಪಿವಿ ಸಿಂಧು ಮತ್ತು ತೈ ತ್ಸು ಯಿಂಗ್ ನಡುವೆ ಇದುವರೆಗೆ 22 ಪಂದ್ಯಗಳು ನಡೆದಿವೆ. ಈ ಪೈಕಿ ಸಿಂಧು 5ರಲ್ಲಿ ಮಾತ್ರ ಗೆದ್ದಿದ್ದಾರೆ. ಮಲೇಷ್ಯಾ ಮಾಸ್ಟರ್ಸ್ 2022 ಏಳನೇ ಶ್ರೇಯಾಂಕದ ಪಿವಿ ಸಿಂಧು ತೈ ತ್ಸು ಯಿಂಗ್ ವಿರುದ್ಧದ ಪಂದ್ಯದಲ್ಲಿ 13-21 21-12 12-21 ರಲ್ಲಿ ಸೋಲು ಅನುಭವಿಸಿದ್ದಾರೆ.
ಇದನ್ನೂ ಓದಿ : ಆ ರೀತಿಯ ನಿವೇಶನ, ಮನೆಗಳನ್ನು ಹಂಚಿಕೆ ಮಾಡುವ ಜವಾಬ್ದಾರಿಯಿಂದ ಹಿಂದೆ ಸರಿದ ಸರ್ಕಾರ: ಕಾರಣ?