ETV Bharat / international

ಸಾರಾಯಿ ಕುಡಿದು ದೇಶ ಉದ್ಧರಿಸಿ: ಜಪಾನ್​​ ಸರ್ಕಾರದಿಂದ ಕುಡಿತಕ್ಕೆ ಪ್ರಚೋದನೆ - ಜಪಾನ್ ಸಾರಾಯಿ

ಜಪಾನ್​ನಲ್ಲಿ ಸಾರಾಯಿ ಮಾರಾಟ ಕುಸಿತ. ಕೊರೊನಾ ವೈರಸ್​ ನಂತರ ದೇಶಕ್ಕೆ ಅಲ್ಕೊಹಾಲ್ ಮಾರಾಟದಿಂದ ಬರುತ್ತಿದ್ದ ಆದಾಯವೂ ಕುಸಿತ. ಕುಡಿತ ಹೆಚ್ಚಿಸಲು ಜಪಾನ್ ಸರ್ಕಾರದಿಂದ ವಿಶೇಷ ಅಭಿಯಾನ.

alcohol
alcohol
author img

By

Published : Aug 18, 2022, 5:33 PM IST

ಟೋಕಿಯೊ (ಜಪಾನ್): ಹೆಚ್ಚೆಚ್ಚು ಸಾರಾಯಿ ಸೇವಿಸುವಂತೆ ಜಪಾನ್ ಸರ್ಕಾರ ತನ್ನ ಯುವಕರನ್ನು ಪ್ರಚೋದಿಸುತ್ತಿದೆ. ಅಲ್ಕೊಹಾಲ್​ನಿಂದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ ಕಡಿಮೆಯಾಗುತ್ತಿರುವ ಕಾರಣದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಜನಸಂಖ್ಯಾ ನಿಬಿಡತೆಯಲ್ಲಿನ ಬದಲಾವಣೆ, ಜೀವನಶೈಲಿಯಲ್ಲಿನ ಬದಲಾವಣೆ ಮತ್ತು ಕೊರೊನಾವೈರಸ್​​ನಿಂದ ಉಂಟಾದ ಜೀವನ ಶೈಲಿಯ ಬದಲಾವಣೆಗಳಿಂದ ಅಲ್ಕೊಹಾಲ್​ನಿಂದ ಬರುತ್ತಿದ್ದ ಆದಾಯ ಕಡಿಮೆಯಾಗಿದೆ. ಈ ಆದಾಯದ ಹೆಚ್ಚಳಕ್ಕಾಗಿ ಸರ್ಕಾರವೇ ಖುದ್ದಾಗಿ ಹೆಚ್ಚೆಚ್ಚು ಮದ್ಯ ಸೇವಿಸುವುದನ್ನು ಪ್ರಚೋದಿಸುವ ಸ್ಪರ್ಧೆಗಳನ್ನು ಏರ್ಪಡಿಸುತ್ತಿದೆ.

ರಾಷ್ಟ್ರದ ತೆರಿಗೆ ಇಲಾಖೆಯು ಸೇಕ್ ವಿವಾ! (Sake Viva!) ಹೆಸರಿನಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದು, ಇದು ಸೆಪ್ಟೆಂಬರ್ 9ರವರೆಗೆ ನಡೆಯಲಿದೆ. ಯುವಜನರು ಹೆಚ್ಚು ಮದ್ಯ ಸೇವಿಸಲು ಏನು ಮಾಡಬೇಕೆಂಬ ಬಗ್ಗೆ ಹೊಸ ಉತ್ಪನ್ನ ಮತ್ತು ವಿನ್ಯಾಸಗಳ ಬಗ್ಗೆ ಐಡಿಯಾಗಳನ್ನು ನೀಡುವಂತೆ 20 ರಿಂದ 39ರ ವಯೋಮಾನದ ಜನರಿಗೆ ಈ ಅಭಿಯಾನದ ಮೂಲಕ ಸ್ಪರ್ಧೆ ಏರ್ಪಡಿಸಲಾಗಿದೆ. ಜಪಾನ್​ನ ಅಲ್ಕೊಹಾಲಿಕ್ ಪಾನೀಯಗಳಾದ ಸೇಕ್ (ಅಕ್ಕಿ ವೈನ್), ಬಿಯರ್, ವಿಸ್ಕಿ ಮತ್ತು ವೈನ್​ಗಳ ಸೇವನೆಯನ್ನು ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ.

ಜನನ ಪ್ರಮಾಣ ಇಳಿಕೆ ಮತ್ತು ವಯಸ್ಸಾದ ಜನಸಂಖ್ಯೆಯಲ್ಲಿನ ಹೆಚ್ಚಳದಿಂದ ಜನಸಂಖ್ಯಾ ನಿಬಿಡತೆ ಬದಲಾಗುತ್ತಿದೆ. ಇದರಿಂದ ಸ್ಥಳೀಯ ಅಲ್ಕೊಹಾಲ್ ಮಾರುಕಟ್ಟೆ ಚಿಕ್ಕದಾಗುತ್ತಿದೆ. ಅಲ್ಲದೆ ಕೊರೊನಾವೈರಸ್​ನಿಂದ ಜೀವನಶೈಲಿಯ ಬದಲಾವಣೆಯಿಂದಲೂ ಅಲ್ಕೊಹಾಲ್ ಬಳಕೆ ಕಡಿಮೆಯಾಗಿದೆ ಎಂದು ತೆರಿಗೆ ಇಲಾಖೆಯ ಅಭಿಯಾನದ ವೆಬ್​ಸೈಟ್​ನಲ್ಲಿ ಹೇಳಲಾಗಿದೆ.

ಈ ಯೋಜನೆಯಲ್ಲಿ ಯುವಜನರು ತಮ್ಮದೇ ಆದ ವ್ಯಾಪಾರ ವ್ಯವಹಾರ ಯೋಜನೆಗಳನ್ನು ಪ್ರಸ್ತಾಪಿಸಲು ಕೇಳುವ ಮೂಲಕ, ನಾವು ಜಪಾನಿನ ಆಲ್ಕೊಹಾಲಿಕ್ ಪಾನೀಯಗಳ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಯುವಜನರಿಗೆ ಮನವಿ ಮಾಡುತ್ತಿದ್ದೇವೆ. ಅದೇ ಸಮಯದಲ್ಲಿ ನಾವು ಅಲ್ಕೊಹಾಲ್ ಉದ್ಯಮವನ್ನು ಪುನಶ್ಚೇತನಗೊಳಿಸುತ್ತಿದ್ದೇವೆ ಎಂದು ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ.

ಆಲ್ಕೋಹಾಲ್ ಉತ್ಪನ್ನಗಳ ಮೇಲಿನ ತೆರಿಗೆ ಸಂಗ್ರಹಗಳು 1980 ರಲ್ಲಿ ದೇಶದ ಒಟ್ಟು ಆದಾಯದ ಶೇ 5ರಷ್ಟಿತ್ತು. ಆದರೆ 2020 ರಲ್ಲಿ ಇದು ಕೇವಲ ಶೇ 1.7ಕ್ಕೆ ಕುಗ್ಗಿದೆ. ಕೊರೊನಾ ನಂತರ ವರ್ಕ್ ಫ್ರಮ್ ಹೋಮ್ ಮಾದರಿ ಹೆಚ್ಚಾಗಿದೆ. ಈ ಸಮಯದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲು ಕುಡಿಯುವುದು ಅಗತ್ಯವಾಗಿದೆಯಾ ಎಂದು ಜನ ವಿಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.