ETV Bharat / international

ಹಜ್ ಯಾತ್ರಿಗಳ ಸಂಖ್ಯೆ, ವಯಸ್ಸಿನ ಮಿತಿ ನಿರ್ಬಂಧ ತೆಗೆದುಹಾಕಿದ ಸೌದಿ ಅರೇಬಿಯಾ

ಹಜ್ ಯಾತ್ರಾರ್ಥಿಗಳಿಗೆ ಇದ್ದ ನಿರ್ಬಂಧ ತೆರವು- ಯಾತ್ರಿಗಳ ಸಂಖ್ಯೆ ಮತ್ತು ವಯಸ್ಸಿನ ಮಿತಿ ಸಡಿಲಿಕೆ - ಸೌದಿ ಅರೇಬಿಯಾದಿಂದ ಮಹತ್ವದ ಆದೇಶ

Saudi Arabia
ಹಜ್ ಯಾತ್ರೆ
author img

By

Published : Jan 10, 2023, 12:39 PM IST

ರಿಯಾದ್(ಸೌದಿ ಅರೇಬಿಯಾ): ಈ ಬಾರಿ ವಿಶ್ವದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈ ವರ್ಷದ ಹಜ್‌ ಯಾತ್ರಿಕರ ಸಂಖ್ಯೆಯಲ್ಲಿ ಯಾವುದೇ ಮಿತಿಯಿಲ್ಲ ಎಂದು ಸೌದಿ ಅರೇಬಿಯಾ ಸೋಮವಾರ ಘೋಷಿಸಿದೆ ಎಂದು ದೇಶದ ಹಜ್ ಮತ್ತು ಉಮ್ರಾ ಸಚಿವ ತೌಫಿಕ್ ಅಲ್-ರಬಿಯಾ ಅವರನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಜ್ ಎಕ್ಸ್‌ಪೋ-2023ರಲ್ಲಿ ಮಾತನಾಡಿದ ತೌಫಿಕ್ ಅಲ್-ರಬಿಯಾ ಅವರು, ಈ ವರ್ಷದ ಹಜ್‌ನಲ್ಲಿ ಭಾಗವಹಿಸುವ ಯಾತ್ರಿಗಳ ಸಂಖ್ಯೆಯು ಕೋವಿಡ್​ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಮರಳುತ್ತದೆ ಮತ್ತು ಈ ವರ್ಷ ಹಜ್ ಯಾತ್ರಾರ್ಥಿಗಳಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂದು ಹೇಳಿದರು.

ಕೋವಿಡ್​ ಸೋಂಕಿನಿಂದ ಹೇರಿದ್ದ ಮಿತಿ.. ಈ ಹಿಂದೆ ಕೆಲ ವರ್ಷಗಳ ಕಾಲ ಕೋವಿಡ್​​ ಕಾರಣದಿಂದ ಹಜ್ ಯಾತ್ರೆಗೆ ಜನರ ಸಂಖ್ಯೆಗೆ ಮಿತಿ ಹೇರಲಾಗಿತ್ತು. 2019ರಲ್ಲಿ ಸುಮಾರು 2.5 ಮಿಲಿಯನ್ ಜನರು ತೀರ್ಥಯಾತ್ರೆಯಲ್ಲಿ ಭಾಗವಹಿಸಿದ್ದರು ಎಂದು ಅರಬ್ ನ್ಯೂಸ್ ವರದಿ ಮಾಡಿದೆ. ಕೋವಿಡ್​​ ಬಳಿಕ ಎರಡು ವರ್ಷಗಳವರೆಗೆ ಯಾತ್ರಿಕರ ಸಂಖ್ಯೆ ಕಡಿಮೆಯಾಗಿತ್ತು ಎಂದು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಟ್ವೀಟ್ ಮಾಡಿದೆ.

ವಯಸ್ಸಿನ ನಿರ್ಬಂಧ: ಅರಬ್ ನ್ಯೂಸ್ ವರದಿಯ ಪ್ರಕಾರ, ಈ ವರ್ಷ ಹಜ್ ಯಾತ್ರೆಗೆ ತೆರಳಲು ಬಯಸುವ ದೇಶದಲ್ಲಿ ವಾಸಿಸುವ ಜನರು ತೀರ್ಥ ಯಾತ್ರೆಗೆ ಅರ್ಜಿ ಸಲ್ಲಿಸಬಹುದು ಎಂದು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯ ಮೊದಲು ಜನವರಿ 5 ರಂದು ಘೋಷಿಸಿತ್ತು. ಸ್ಥಳೀಯ ನಿವಾಸಿಗಳಿಗೆ ನಾಲ್ಕು ವರ್ಗದ ಹಜ್ ಪ್ಯಾಕೇಜ್‌ಗಳು ಲಭ್ಯವಿರುತ್ತವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಹಜ್​ ಯಾತ್ರಿಗಳಿಗೆ ಅರ್ಜಿ ಸಲ್ಲಿಕೆಗೆ ಇರುವ ನಿಯಮಗಳೇನು? ತೀರ್ಥಯಾತ್ರೆಗೆ ಅರ್ಜಿ ಸಲ್ಲಿಸುವ ಜನರು ಜುಲೈ ಮಧ್ಯದವರೆಗೆ ಮಾನ್ಯವಾಗಿರುವ ರಾಷ್ಟ್ರೀಯ ಅಥವಾ ನಿವಾಸಿ ಗುರುತನ್ನು ಹೊಂದಿರಬೇಕು. ಯಾತ್ರಾರ್ಥಿಗಳು ಕೋವಿಡ್​ ಲಸಿಕೆ ಪಡೆದಿರಬೇಕು. ಅವರು ಪವಿತ್ರ ಸ್ಥಳಗಳಿಗೆ ಆಗಮಿಸುವ ಕನಿಷ್ಠ 10 ದಿನಗಳ ಮೊದಲು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಪಡೆಯಬೇಕು. ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಎಲ್ಲಾ ಅರ್ಜಿದಾರರನ್ನು ತನ್ನ ವೆಬ್‌ಸೈಟ್ ಮೂಲಕ ನೇರವಾಗಿ ನೋಂದಾಯಿಸಲು ಮತ್ತು ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್‌ಗಳಿಗೆ ಒಂದೇ ಮೊಬೈಲ್ ಸಂಖ್ಯೆಯನ್ನು ಬಳಸದಂತೆ ತಿಳಿಸಿದೆ.

ಹಜ್ ಯಾತ್ರೆ ಎಂದರೇನು? ಇಸ್ಲಾಂ ಧರ್ಮದ ಪ್ರಮುಖ ಯಾತ್ರೆ ಹಜ್ ಆಗಿದೆ. ಇಸ್ಲಾಂ ಧರ್ಮದಲ್ಲಿ ಜೀವನದಲ್ಲಿ ಮೆಕ್ಕಾ-ಮದೀನಾಕ್ಕೆ ಹೋಗಿ ಹಜ್ ಕರ್ಮಗಳನ್ನು ಮುಗಿಸಬೇಕೆಂಬುದು ಪ್ರತಿಯೊಬ್ಬ ಮುಸಲ್ಮಾನರ ಆಸೆ. ಹಜ್ ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಈ ವರ್ಷ 10 ಲಕ್ಷ ಹಜ್​ ಯಾತ್ರಾರ್ಥಿಗಳಿಗೆ ಭಾಗವಹಿಸಲು ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.