ಜೋಹಾನ್ಸ್‌ಬರ್ಗ್: ಚಂದ್ರಯಾನ-3ರ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡಿಂಗ್ ಆದ ಹಿನ್ನೆಲೆ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಬುಧವಾರ ಭಾರತವನ್ನು ಶ್ಲಾಘಿಸಿದ್ದಾರೆ. ''ಇದು ಬ್ರಿಕ್ಸ್‌ನ ಎಲ್ಲಾ ಪಾಲುದಾರರಿಗೆ ಸಂತಸ ಪಡುವ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಬುಧವಾರ ಸಂಜೆ ಬ್ರಿಕ್ಸ್ ರಾಷ್ಟ್ರ ನಾಯಕರು ಮಿಡ್ರಾಂಡ್‌ನಲ್ಲಿ ಸಾಂಸ್ಕೃತಿಕ ಪ್ರದರ್ಶನ ಮತ್ತು ರಾಜ್ಯ ಔತಣಕೂಟವನ್ನು ಆಯೋಜಿಸಿದ್ದ ರಾಮಫೋಸಾ ಅವರು, ಚಂದ್ರಯಾನ ಮಿಷನ್ ಯಶಸ್ವಿಯಾಗಿದ್ದಕ್ಕೆ ಸ್ವಾಗತಾರ್ಹ ಹೇಳಿಕೆ ನೀಡಿದರು. ಈ ವೇಳೆ ಆಫ್ರಿಕಾ ಮತ್ತು ಗ್ಲೋಬಲ್ ಸೌತ್‌ನ ಇತರ ನಾಯಕರು ಉಪಸ್ಥಿತರಿದ್ದರು.
-
South Africa | At the banquet dinner during the BRICS Summit in Johannesburg yesterday, several world leaders congratulated PM Narendra Modi on the success of #Chandrayaan3 pic.twitter.com/8Cs9zZqdL3
— ANI (@ANI) August 24, 2023 " class="align-text-top noRightClick twitterSection" data="
">South Africa | At the banquet dinner during the BRICS Summit in Johannesburg yesterday, several world leaders congratulated PM Narendra Modi on the success of #Chandrayaan3 pic.twitter.com/8Cs9zZqdL3
— ANI (@ANI) August 24, 2023South Africa | At the banquet dinner during the BRICS Summit in Johannesburg yesterday, several world leaders congratulated PM Narendra Modi on the success of #Chandrayaan3 pic.twitter.com/8Cs9zZqdL3
— ANI (@ANI) August 24, 2023
ರವೀಂದ್ರನಾಥ ಟ್ಯಾಗೋರ್ ಉಲ್ಲೇಖಿಸಿ ಪ್ರಶಂಸೆ ವ್ಯಕ್ತಪಡಿಸಿದ ರಮಾಫೋಸಾ: ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರನ್ನು ಉಲ್ಲೇಖಿಸಿದ ರಮಾಫೋಸಾ ಅವರು, "ನಾವು ಅಂತ್ಯವಿಲ್ಲದ ಅರಮನೆಯಲ್ಲಿದ್ದೇವೆ. ಆದರೆ, ನಾವು ಚಂದ್ರನನ್ನು ತಲುಪಿದ್ದೇವೆ. ಅದನ್ನು ಅನ್ವೇಷಿಸುವ ಮೂಲಕ ನಮ್ಮ ಸಂಬಂಧವನ್ನು ವಿಸ್ತರಿಸಿಕೊಂಡಿದ್ದೇವೆ. ಇದು ಮತ್ತು ಇತರ ಅನೇಕ ಸಾಧನೆಗಳು ಸಮೃದ್ಧಿ, ಪ್ರಗತಿ ಮತ್ತು ಶಾಂತಿಯತ್ತ ಮುನ್ನಡೆಯಲು ನಮಗೆ ಅನುವು ಮಾಡಿಕೊಡುತ್ತದೆ" ಎಂದು ಔತಣಕೂಟದಲ್ಲಿ ರಮಾಫೋಸಾ ಹೇಳಿದರು. "ಇಂದು ರಾತ್ರಿ ನಾವು ಬ್ರಿಕ್ಸ್ ಪಾಲುದಾರರಾಗಿ ಆಚರಿಸಲು ಇನ್ನೂ ಹೆಚ್ಚಿನ ಕಾರಣಗಳನ್ನು ಹೊಂದಿರುವ ರಾತ್ರಿಯಾಗಿದೆ. ಈ ಮಧ್ಯಾಹ್ನ ಕೆಲವು ಗಂಟೆಗಳ ಹಿಂದೆ, ಭಾರತವು ಮಾಡ್ಯೂಲ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸಿದ ಮೊದಲ ದೇಶವಾಗಿ ಇತಿಹಾಸವನ್ನು ನಿರ್ಮಿಸಿತು" ಎಂದು ಪ್ರಶಂಸೆ ವ್ಯಕ್ತಪಡಿಸಿದರು.
''ಚಂದ್ರಯಾನ-3 ಮಿಷನ್‌ನ ಯಶಸ್ಸಿಗಾಗಿ ನಾವು ಪ್ರಧಾನಿ ಮೋದಿ, ಸರ್ಕಾರ ಮತ್ತು ಭಾರತದ ಜನರು ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಅಭಿನಂದಿಸುತ್ತೇವೆ. ವೈಜ್ಞಾನಿಕ ಪ್ರಯತ್ನದ ಗಡಿಗಳನ್ನು ಮುಂದಕ್ಕೆ ಕೊಂಡೊಯ್ಯುವುದು ಮಾನವನ ಪ್ರಗತಿಗೆ ಅವಿಭಾಜ್ಯವಾಗಿದೆ ಎಂದು ರಮಾಫೋಸಾ ಹೇಳಿದರು.
ಬ್ರಿಕ್ಸ್ ಬಾಹ್ಯಾಕಾಶ ಪರಿಶೋಧನಾ ಆಯೋಗ ಸ್ಥಾಪಿಸಬೇಕು: "ಈ ಮಹಾನ್ ಸಾಧನೆಯ ನಿರೀಕ್ಷೆಯಲ್ಲಿ, ಪ್ರಧಾನಿ ಮೋದಿಯವರು ಇಂದು ಮಧ್ಯಾಹ್ನ ನಮ್ಮ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಸ್ತಾಪಿಸಿದರು, ಬ್ರಿಕ್ಸ್ ಬಾಹ್ಯಾಕಾಶ ಪರಿಶೋಧನಾ ಆಯೋಗವನ್ನು ಸ್ಥಾಪಿಸಬೇಕು. ಅಲ್ಲಿ ಬ್ರಿಕ್ಸ್ ದೇಶಗಳಾಗಿ ನಾವು ಜ್ಞಾನ ಮತ್ತು ಅನುಭವಗಳನ್ನು ಹಂಚಿಕೊಳ್ಳಬಹುದು. ನಾವು ವಾಸಿಸುವ ಈ ಪ್ರಪಂಚದ ಬಗ್ಗೆ ನಾವು ಹೆಚ್ಚು ಕಲಿಯುತ್ತೇವೆ. ಮತ್ತು ಅದರಾಚೆಗೆ, ಸಂಶೋಧನೆ ಕೈಗೊಳ್ಳಲು ಮತ್ತು ಮಾನವ ಸ್ಥಿತಿಯನ್ನು ಉನ್ನತೀಕರಿಸಲು ನಮ್ಮ ಸಾಮರ್ಥ್ಯವು ಕೂಡಾ ಹೆಚ್ಚಾಗುತ್ತದೆ'' ಎಂದು ರಮಾಫೋಸಾ ಹೇಳಿದರು.
ನಮ್ಮ ವೈವಿಧ್ಯತೆಯೇ ದೊಡ್ಡ ಶಕ್ತಿ- ರಮಾಫೋಸಾ: ''ಬ್ರಿಕ್ಸ್ ದೇಶಗಗಳು ಗುಂಪು ಮೂರು ಶತಕೋಟಿಗೂ ಹೆಚ್ಚು ಜನರನ್ನು ಹೊಂದಿದ್ದು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಒಳಗೊಂಡಿದೆ. ನಮ್ಮ ದೃಷ್ಟಿ ಮತ್ತು ಗುರಿಗಳಿಂದ ನಾವು ಒಂದಾಗಿದ್ದೇವೆ. ನಮ್ಮ ವೈವಿಧ್ಯತೆಯೇ ದೊಡ್ಡ ಶಕ್ತಿಯಾಗಿದೆ'' ಎಂದರು. ಬ್ರಿಕ್ಸ್‌ನ ಸ್ವರೂಪ ಮತ್ತು ಉದ್ದೇಶವನ್ನು ಪ್ರತಿಬಿಂಬಿಸುವ ಅಂತರ್ಗತ ರಾಷ್ಟ್ರದ ಅಡಿಪಾಯವಾಗಿ ದಕ್ಷಿಣ ಆಫ್ರಿಕಾದ ಅನೇಕ ವಿಭಿನ್ನ ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ಭಾಷೆಗಳ ಹೆಣೆಯುವಿಕೆಗೆ ಹೋಲಿಸಿದ ಅವರು, ಇದು ಮುಕ್ತತೆ ಮತ್ತು ಒಗ್ಗಟ್ಟಿನ ಉತ್ಸಾಹದಲ್ಲಿ ಪಾಲುದಾರಿಕೆ ಮತ್ತು ಸಹಕಾರವನ್ನು ಗೌರವಿಸುತ್ತದೆ'' ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಮಾಫೋಸಾ ವಿಶ್ವಾಸ ವ್ಯಕ್ತಪಡಿಸಿದರು. (ಪಿಟಿಐ)
ಇದನ್ನೂ ಓದಿ: ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವ!