ವಾಷಿಂಗ್ಟನ್(ಅಮೆರಿಕ): ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಬೆಂಬಲದೊಂದಿಗೆ ಉಕ್ರೇನ್ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲ ಪಡೆದ ನಂತರ, ರಷ್ಯಾ ತನ್ನ ಗಮನವನ್ನು ದೇಶದ ಪೂರ್ವ ಮತ್ತು ದಕ್ಷಿಣಕ್ಕೆ ಹರಿಸುತ್ತಿದೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಎಚ್ಚರಿಸಿದ್ದಾರೆ. 'ಉಕ್ರೇನ್ ಸರ್ಕಾರಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳು ಬೆಂಬಲ ನೀಡುತ್ತಿರುವುದು ರಷ್ಯಾಗೆ ತಿಳಿದಿದೆ. ಆದರೂ ಅದು ತನ್ನ ಆಕ್ರಮಣವನ್ನು ಮುಂದುವರೆಸುವ ಸಾಧ್ಯತೆಯಿದೆ' ಎಂದು ಅವರು ಪುನರುಚ್ಚರಿಸಿದ್ದಾರೆ.
ಭದ್ರತಾ ಮಂಡಳಿ ಉದ್ದೇಶಿಸಿ ಜೆಲೆನ್‌ಸ್ಕಿ ಭಾಷಣ: ದೇಶದ ಉಳಿದ ಭಾಗಗಳಲ್ಲಿ ಭಯೋತ್ಪಾದನೆ ಮತ್ತು ಆರ್ಥಿಕ ಹಾನಿ ಉಂಟುಮಾಡಲು ಕೀವ್ ಮತ್ತು ಪಶ್ಚಿಮದಲ್ಲಿರುವ ನಗರ ಎಲ್ವಿವ್ನಲ್ಲಿ ರಷ್ಯಾ ವಾಯು ಮತ್ತು ಕ್ಷಿಪಣಿ ದಾಳಿಗಳನ್ನು ಮುಂದುವರೆಸುವ ಸಾಧ್ಯತೆ ಇದೆ ಎಂದೂ ಅವರು ಹೇಳಿದರು. ರಷ್ಯಾ-ಉಕ್ರೇನ್ 41ನೇ ದಿನಕ್ಕೆ ಕಾಲಿಟ್ಟಿದ್ದು, ಭೀತಿ ತಗ್ಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉದ್ದೇಶಿಸಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಮಾತನಾಡಲಿದ್ದು, ಜಗತ್ತಿನ ಗಮನ ಸೆಳೆಯಲಿದ್ದಾರೆ.
ಇದನ್ನೂ ಓದಿ: ಕೀವ್ ಬಳಿ 410 ನಾಗರಿಕರ ಮೃತದೇಹ ಪತ್ತೆ: 'ಜನಾಂಗೀಯ ಹತ್ಯೆ' ಎಂದ ಉಕ್ರೇನ್ ಅಧ್ಯಕ್ಷ