ETV Bharat / international

ಬ್ರಿಟನ್​ ಪ್ರಧಾನಿಯಾಗಿ ರಿಷಿ ಸುನಕ್​ ಮೊದಲ ಭಾರತ ಭೇಟಿ; ಅದ್ದೂರಿ ಸ್ವಾಗತಕ್ಕೆ ಸಿದ್ಧತೆ - ರಧಾನಿ ಸುನಕ್ ಅಧಿಕೃತ ಭೇಟಿಗಾಗಿ ಭಾರತಕ್ಕೆ

ಬ್ರಿಟನ್ ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿರುವ ರಿಷಿ ಸುನಕ್​ ಅವರಿಗೆ ಅದ್ದೂರಿ ಸ್ವಾಗತ ಕೋರಲು ಅವರ ಕುಟುಂಬಸ್ಥರು ಸಜ್ಜಾಗಿದ್ದಾರೆ.

Family to welcome Rishi Sunak's first India visit by hosting feast in his honour

author img

By ETV Bharat Karnataka Team

Published : Sep 6, 2023, 2:26 PM IST

ಲಂಡನ್ : ಬ್ರಿಟನ್ ಪ್ರಧಾನಿಯಾಗಿ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಲಿರುವ ರಿಷಿ ಸುನಕ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಅವರ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ವಾರ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಸುನಕ್ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಭಾರತೀಯ ಮೂಲದವರಾದ ಸುನಕ್ ಅವರ ಆಗಮನದ ಸಂದರ್ಭದಲ್ಲಿ ಅದ್ದೂರಿ ಔತಣಕೂಟ ನಡೆಸಲು ಯೋಜಿಸಲಾಗಿದೆ.

ಸುನಕ್ ಅವರ ಸಂಬಂಧಿಕರು ಗುರುವಾರ ಅಥವಾ ಶುಕ್ರವಾರ ನವದೆಹಲಿಯಲ್ಲಿ ಪುಷ್ಪಗುಚ್ಛಗಳು ಮತ್ತು ನಿರಂತರ ಪಂಜಾಬಿ ನೃತ್ಯದೊಂದಿಗೆ ಔತಣಕೂಟವನ್ನು ಆಯೋಜಿಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಸುನಕ್ ಅವರ ಸೋದರಮಾವ ಗೌತಮ್ ದೇವ್ ಸೂದ್, ಪ್ರಧಾನಿಯವರ ಆಗಮನವನ್ನು ಆಚರಿಸಲು ಎಲ್ಲ ಸಂಬಂಧಿಕರು ದೆಹಲಿಯಲ್ಲಿ ಸೇರುವಂತೆ ತಿಳಿಸಲಾಗಿದೆ. ಸುನಕ್ ಅವರ ಮೂರು ದಿನಗಳ ಪ್ರವಾಸದಲ್ಲಿ ಪತ್ನಿ ಅಕ್ಷತಾ ಕೂಡ ಆಗಮಿಸಬಹುದು ಎಂದು ಹೇಳಿದರು.

ಔತಣಕೂಟದ ಮೆನು ಉತ್ತರ ಮತ್ತು ದಕ್ಷಿಣ ಭಾರತದ ಆಹಾರಗಳ ಮಿಶ್ರಣವನ್ನು ಒಳಗೊಂಡಿರುತ್ತದೆ. ಸುನಕ್ ತಮ್ಮ ಪೂರ್ವಜರ ಭೂಮಿಗೆ ಭೇಟಿ ನೀಡುತ್ತಿರುವುದು ನಮಗೆ ದೊಡ್ಡ ಗೌರವವಾಗಿದೆ ಎಂದು ಸೂದ್ ಹೇಳಿದರು. "ಸುನಕ್ ಅವರಿಗೆ ಸ್ವಾಗತ ಸಮಾರಂಭದ ನಿಖರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಆದರೆ ಪ್ರಧಾನಿಯನ್ನು ಸ್ವಾಗತಿಸುವ ಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ. ಸಾಂಪ್ರದಾಯಿಕ ಪಂಜಾಬಿ ಸಂಗೀತದ ಉತ್ಸಾಹಭರಿತ ಸಂಗೀತದೊಂದಿಗೆ ನೃತ್ಯ ರಾತ್ರಿಗೆ ಸಜ್ಜಾಗುತ್ತಿದ್ದೇವೆ. ಅಲ್ಲದೆ ಕೆಲ ಇಂಗ್ಲಿಷ್ ಹಾಡುಗಳನ್ನು ಸಹ ಕೇಳಿಸಲಾಗುವುದು" ಎಂದು ಸುನಕ್ ಅವರ ತಂದೆಯ ಚಿಕ್ಕಪ್ಪ ಸುಭಾಷ್ ಬೆರ್ರಿ ಹೇಳಿದರು.

ಆದಾಗ್ಯೂ ಸುನಕ್ ಅವರ ಕಾರ್ಯಕ್ರಮ ಪಟ್ಟಿಯಲ್ಲಿ ಗುರುವಾರ ಅಥವಾ ಶುಕ್ರವಾರ ನಡೆಯಲಿರುವ ಔತಣಕೂಟದ ಪ್ರಸ್ತಾಪವಿಲ್ಲ. ಭಾರತದಲ್ಲಿ ಒಂದಾದ ಮೇಲೊಂದು ಅಧಿಕೃತ ಕಾರ್ಯಕ್ರಮಗಳಲ್ಲಿ ಸುನಕ್ ಪಾಲ್ಗೊಳ್ಳಬೇಕಿರುವುದರಿಂದ ಅವರು ಔತಣಕೂಟದಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಪಂಜಾಬ್​ನಲ್ಲಿ ತನ್ನ ಪೂರ್ವಜರ ಮೂಲ ಹೊಂದಿರುವ, ಅಮೆರಿಕದ ಸೌತಾಂಪ್ಟನ್​ನಲ್ಲಿ ಭಾರತೀಯ ಪೋಷಕರಿಗೆ ಜನಿಸಿದ 42 ವರ್ಷದ ಸುನಕ್​ ಯುಕೆ ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ.

ದ್ವಿಪಕ್ಷೀಯ ಸಹಕಾರದ ಎಲ್ಲಾ ಕ್ಷೇತ್ರಗಳಲ್ಲಿ ಭಾರತವು ಯುಕೆಯ ಅವಿಭಾಜ್ಯ ಪಾಲುದಾರ ಎಂದು ಸುನಕ್ ಬಣ್ಣಿಸಿದ್ದಾರೆ. ಭಾರತ ಮತ್ತು ಯುಕೆ ಮಧ್ಯದ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲು ಅವರು ಉತ್ಸುಕರಾಗಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ಸುನಕ್ ಮದುವೆಯಾಗಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ರಿಷಿ ಸುನಕ್ 2022 ರ ಅಕ್ಟೋಬರ್ 25 ರಂದು ಬ್ರಿಟನ್​ ಪ್ರಧಾನಿಯಾದರು. ಇದಕ್ಕೂ ಮುನ್ನ ಅವರು 13 ಫೆಬ್ರವರಿ 2020 ರಿಂದ 5 ಜುಲೈ 2022 ರವರೆಗೆ ಖಜಾನೆಯ ಚಾನ್ಸಲರ್ ಆಗಿ ಸೇವೆ ಸಲ್ಲಿಸಿದ್ದಾರೆ. 24 ಜುಲೈ 2019 ರಿಂದ 13 ಫೆಬ್ರವರಿ 2020 ರವರೆಗೆ ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿದ್ದರು ಮತ್ತು 9 ಜನವರಿ 2018 ರಿಂದ 24 ಜುಲೈ 2019 ರವರೆಗೆ ವಸತಿ, ಸಮುದಾಯಗಳು ಮತ್ತು ಸ್ಥಳೀಯ ಸರ್ಕಾರದ ಸಚಿವಾಲಯದಲ್ಲಿ ಸಂಸದೀಯ ಅಧೀನ ಕಾರ್ಯದರ್ಶಿಯಾಗಿದ್ದರು.

ಇದನ್ನೂ ಓದಿ : ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್​ನಿಂದ ಹೊರಬರಲು ಇಟಲಿ ಚಿಂತನೆ: ಇಕ್ಕಟ್ಟಿನಲ್ಲಿ ಚೀನಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.