ETV Bharat / international

ಪತ್ನಿ ಅಕ್ಷತಾ ಜೊತೆ ದೇವಸ್ಥಾನಕ್ಕೆ ರಿಷಿ ಸುನಕ್ ಭೇಟಿ: ಮನೆಯಲ್ಲಿ ಕೃಷ್ಣಜನ್ಮಾಷ್ಟಮಿ ಸಂಭ್ರಮ - ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಬ್ರಿಟನ್​ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್​ ಇಂದು ತಮ್ಮ ಪತ್ನಿ ಅಕ್ಷತಾ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರ ನಿವಾಸದಲ್ಲಿ ಕೃಷ್ಣಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ.

Rishi Sunak Visits Temple
Rishi Sunak Visits Temple
author img

By

Published : Aug 18, 2022, 9:23 PM IST

ವ್ಯಾಟ್‌ಫೋರ್ಡ್(ಲಂಡನ್​​): ಯುಕೆ ಪ್ರಧಾನಮಂತ್ರಿ ಹುದ್ದೆಯ ಪ್ರಬಲ ಸ್ಪರ್ಧಿ ರಿಷಿ ಸುನಕ್​ ಅವರ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ಪತ್ನಿ ಅಕ್ಷತಾ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿರುವ ಅವರು, ದೇವರ ದರ್ಶನ ಪಡೆದುಕೊಂಡಿದ್ದಾರೆ.

ಭಾರತೀಯ ಸಾಫ್ಟ್‌ವೇರ್ ಉದ್ಯಮಿ ಎನ್‌ಆರ್ ನಾರಾಯಣ ಮೂರ್ತಿ ಅವರ ಪುತ್ರಿಯನ್ನು ವರಿಸಿರುವ ಸುನಕ್​ ಬ್ರಿಟನ್​​ ಪ್ರಧಾನಿ ಆಕಾಂಕ್ಷಿಯಾಗಿದ್ದು, ಅಂತಿಮ ರೇಸ್​​​ನಲ್ಲಿದ್ದಾರೆ. ಇಂದು ಬಿಡುವು ಪಡೆದುಕೊಂಡಿರುವ ಅವರು, ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟರು.

ಇನ್​​​ಸ್ಟಾಗ್ರಾಂನಲ್ಲಿ ಫೋಟೋ ಶೇರ್​: ಶ್ರೀಕೃಷ್ಣನ ಜನ್ಮಾಷ್ಟಮಿ ಅಂಗವಾಗಿ ಇಂದು ನನ್ನ ಪತ್ನಿ ಅಕ್ಷತಾ ಅವರೊಂದಿಗೆ ಭಕ್ತಿವೇದಾಂತ್ ಮೇನರ್​ ದೇವಾಲಯಕ್ಕೆ ಭೇಟಿ ನೀಡಿದ್ದೇನೆ. ಕೃಷ್ಣ ಜನ್ಮಾಷ್ಟಮಿ ಹಿಂದೂ ಹಬ್ಬವಾಗಿದ್ದು, ಭಗವಾನ್ ಕೃಷ್ಣನ ಜನ್ಮದಿನ ಆಚರಿಸಲಾಗುತ್ತದೆ ಎಂದು ರಿಷಿ ಸುನಕ್ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬ್ರಿಟನ್​ ಪಿಎಂ ಅಭ್ಯರ್ಥಿ ರಿಷಿ ಸುನಕ್​ಗೆ ಅಮೆರಿಕದ ಭಾರತೀಯ ಸಂಸ್ಥೆ ಬೆಂಬಲ

ಅಕ್ಷತಾ ಮೂರ್ತಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ MBA ಓದುತ್ತಿದ್ದಾಗ ಇಬ್ಬರು ಭೇಟಿಯಾಗಿದ್ದರು. 2006 ರಲ್ಲಿ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಲಂಡನ್ ಪ್ರಧಾನಿ ಹುದ್ದೆಯ ರೇಸ್​​ನಲ್ಲಿ ರಿಷಿ ಸುನಕ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್​ ಇದ್ದು, ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಂತಿಮ ಫಲಿತಾಂಶ ಸೆಪ್ಟೆಂಬರ್ 5 ರಂದು ಪ್ರಕಟವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.