ETV Bharat / international

ಟರ್ಕಿ, ಸಿರಿಯಾದಲ್ಲಿ 'ಸಾವಿನ ಭೂಕಂಪ'.. 640 ಜನರ ಬಲಿ ಪಡೆದ ಪ್ರಕೃತಿ.. ಭಾರತದಿಂದ ನೆರವು! - ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಕೃತಿ ತಾಂಡವ

ಟರ್ಕಿ ಸಿರಿಯಾದಲ್ಲಿ ಪ್ರಬಲ ಭೂಕಂಪನ- 640 ಕ್ಕೂ ಹೆಚ್ಚು ಜನರು ಪ್ರಕೃತಿ ಮುನಿಸಿಗೆ ಬಲಿ- 7.8 ತೀವ್ರತೆಯ ಕಂಪನ ದಾಖಲು

powerful-quake-in-turkey-syria
ಟರ್ಕಿ ಸಿರಿಯಾದಲ್ಲಿ ಭೂಕಂಪ
author img

By

Published : Feb 6, 2023, 12:27 PM IST

Updated : Feb 6, 2023, 3:40 PM IST

ಟರ್ಕಿ ಸಿರಿಯಾದಲ್ಲಿ ಪ್ರಬಲ ಭೂಕಂಪನ

ಅಂಕಾರಾ: ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಕೃತಿ ತಾಂಡವವಾಡಿದೆ. ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಉಭಯ ರಾಷ್ಟ್ರಗಳು ತತ್ತರಿಸಿ ಹೋಗಿವೆ. 7.8 ತೀವ್ರತೆಯ ಭೂಕಂಪನದಲ್ಲಿ 640 ಕ್ಕೂ ಅಧಿಕ ಜನರು ಈವರೆಗೂ ಸಾವನ್ನಪ್ಪಿದ್ದಾರೆ. ಟರ್ಕಿಯೊಂದರಲ್ಲೇ 284 ಜನರು ಸಾವನ್ನಪ್ಪಿದ್ದಾರೆ. ಸಿರಿಯಾದಲ್ಲೂ ಇಷ್ಟೇ ಪ್ರಮಾಣದ ಜನರು ಅಸುನೀಗಿದ್ದಾರೆ.

ರಕ್ಷಣಾ ಪಡೆಗಳಿಂದ ಕಾರ್ಯಾಚರಣೆ
ರಕ್ಷಣಾ ಪಡೆಗಳಿಂದ ಕಾರ್ಯಾಚರಣೆ

ಪ್ರಕೃತಿಯ ಮುನಿಸಿನಿಂದಾಗಿ 2300 ಕ್ಕೂ ಹೆಚ್ಚು ಜನರು ಗಾಯಗೊಂಡರೆ, 1700 ಕ್ಕೂ ಅಧಿಕ ಕಟ್ಟಡಗಳು ನೆಲಕ್ಕುರುಳಿ ಬಿದ್ದಿವೆ. ಭೂಕಂಪದಿಂದ ಎರಡು ರಾಷ್ಟ್ರಗಳ 10 ಪ್ರಾಂತ್ಯಗಳು ತೀವ್ರ ಬಾಧಿತವಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜನರು ಅವಶೇಷಗಳಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದಲ್ಲಿ ಉರುಳಿ ಬಿದ್ದ ಕಟ್ಟಡಗಳು
ಭೂಕಂಪದಲ್ಲಿ ಉರುಳಿ ಬಿದ್ದ ಕಟ್ಟಡಗಳು

ಟರ್ಕಿ, ಸಿರಿಯಾ ಮಾತ್ರವಲ್ಲದೇ, ಈಜಿಪ್ಟ್​​ನ ಕೈರೋದವರೆಗೂ ಭೂಕಂಪನ ಅನುಭವವಾಗಿದೆ. ಭೂಮಿ ನಡುಕದಿಂದ ದೊಡ್ಡ ದೊಡ್ಡ ಕಟ್ಟಡಗಳು ಉರುಳಿಬಿದ್ದಿವೆ. ಅದರಡಿ ಸಿಲುಕಿದ ಜನರು ಕೂಗಾಟ, ಚೀರಾಟ ಕರುಳು ಹಿಂಡುತ್ತಿದೆ. ಇನ್ನಷ್ಟು ಕಟ್ಟಡಗಳು ಅಪಾಯಕಾರಿ ಮಟ್ಟದಲ್ಲಿ ವಾಲಿಕೊಂಡಿದ್ದು, ಬೀಳುವ ಹಂತದಲ್ಲಿವೆ. ಸಿರಿಯಾದ ರಾಜಧಾನಿಯಿಂದ ಸುಮಾರು 90 ಕಿಲೋಮೀಟರ್ ದೂರವಿರುವ ಗಾಜಿಯಾಂಟೆಪ್ ನಗರದ ಉತ್ತರದಲ್ಲಿ ಭೂಕಂಪನದ ಅಲೆಗಳು ಎದ್ದಿವೆ.

ಭೂಕಂಪದಲ್ಲಿ ಉರುಳಿ ಬಿದ್ದ ಕಟ್ಟಡಗಳು
ಭೂಕಂಪದಲ್ಲಿ ಉರುಳಿ ಬಿದ್ದ ಕಟ್ಟಡಗಳು

ಇದು ಸುತ್ತಲಿನ 330 ಕಿಮೀ ವ್ಯಾಪ್ತಿಯಲ್ಲಿ ನಡುಕ ಉಂಟು ಮಾಡಿದೆ. ಹಲವಾರು ನಗರಗಳ ಜೊತೆಗೆ ಸಿರಿಯಾ ಯುದ್ಧದಲ್ಲಿ ವಲಸೆ ಬಂದು ನೆಲೆಸಿರುವ ನಿರಾಶ್ರಿತ ಪ್ರದೇಶದಲ್ಲೂ ಪ್ರಕೃತಿ ಮುನಿಸಿಕೊಂಡು ವೈಪರೀತ್ಯ ಸೃಷ್ಟಿಸಿದೆ. ಸಿರಿಯಾದ ಗಡಿಯಲ್ಲಿರುವ ಟರ್ಕಿ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಸಿರಿಯನ್ ನಿರಾಶ್ರಿತರನ್ನು ಹೊಂದಿದೆ. ಹಲವು ವರ್ಷಗಳ ಕಾಲ ನಡೆದ ಯುದ್ಧದಲ್ಲಿ ನಿರಾಶ್ರಿತರಾಗಿ, ಆರೋಗ್ಯ ವ್ಯವಸ್ಥೆ ಹದಗೆಟ್ಟ ಪ್ರದೇಶದಲ್ಲಿ ಭೂಕಂಪನ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಿರಾಶ್ರಿತರು ನೆಲೆಸಿರುವ ಪಟ್ಟಣವೊಂದರಲ್ಲೇ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನಷ್ಟು ಜನರು ಸಮಾಧಿಯಾಗಿರುವ ಸಾಧ್ಯತೆ ಇದೆ. ಸಾವಿನ ಸಂಖ್ಯೆ ನೂರಕ್ಕೆ ತಲುಪಲಿದೆ. ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯ ಭಾಗದಲ್ಲಿಯೂ ತೀವ್ರ ಹಾನಿಯುಂಟಾಗಿದೆ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು, ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶೋಧ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಟ್ವೀಟ್​ ಮಾಡಿ ತಿಳಿಸಿದ್ದಾರೆ.

ಭೀಕರ ದುರಂತದ ದೃಶ್ಯ
ಭೀಕರ ದುರಂತದ ದೃಶ್ಯ

ಕಟ್ಟಡಗಳು ಧರಾಶಾಯಿ: ಟರ್ಕಿ, ಸಿರಿಯಾದಲ್ಲಿ ಉಂಟಾದ ಪ್ರಬಲ ಭೂಕಂಪನದಲ್ಲಿ ನೂರಾರು ಕಟ್ಟಡಗಳು ಧರೆಗೆ ಉರುಳಿಬಿದ್ದು, ನಾಮಾವಶೇಷಗೊಂಡಿವೆ. ಟರ್ಕಿಯ ಮತಾತ್ಯ ಪ್ರಾಂತ್ಯವೊಂದರಲ್ಲೇ 130 ಕಟ್ಟಡಗಳು ನಾಶವಾಗಿದ್ದರೆ, ಉಭಯ ರಾಷ್ಟ್ರಗಳಲ್ಲಿ 1700 ಕಟ್ಟಡಗಳು ಉರುಳಿಬಿದ್ದಿವೆ. ವಾಯುವ್ಯ ಸಿರಿಯಾದ ಸಿರಿಯನ್ ಸಿವಿಲ್ ಡಿಫೆನ್ಸ್ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶ "ವಿನಾಶಕಾರಿ ಪರಿಸ್ಥಿತಿ"ಗೆ ತಲುಪಿದೆ. ಕಟ್ಟಡಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ತುರ್ತು ಕೇಂದ್ರಗಳಲ್ಲಿ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಪಡೆಗಳೊಂದಿಗೆ ಜನರು ಸಹಕರಿಸಿ ಎಂದು ಅಲ್ಲಿನ ಅಧ್ಯಕ್ಷಗಳು ಕರೆ ನೀಡಿದ್ದಾರೆ.

ಭೂಕಂಪನದ ತೀವ್ರತೆ ಹೀಗಿದೆ: ಟರ್ಕಿಯ ಪ್ರಮುಖ ನಗರವಾದ ಗಾಜಿಯಾಂಟೆಪ್‌ನಿಂದ 30 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಅಲೆಗಳು ಎದ್ದಿವೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಇದು 18 ಕಿಲೋಮೀಟರ್ (11 ಮೈಲಿ) ಆಳದಲ್ಲಿ ಕಂಡುಬಂದಿದೆ. ಸುಮಾರು 10 ನಿಮಿಷಗಳ ನಂತರ 7.8 ತೀವ್ರತೆಯಲ್ಲಿ ಪ್ರಬಲವಾದ ಅಲೆಗಳು ದೊಡ್ಡ ಸದ್ದಿನೊಂದಿಗೆ ಭೂಮಿಯನ್ನು ನಡುಗಿಸಿವೆ. ಇದರಿಂದ ಅಲೆಪ್ಪೊ ಮತ್ತು ಹಮಾ, ಡಮಾಸ್ಕಸ್‌ ನಗರ ಸೇರಿದಂತೆ 30 ಕಿಮೀ ವ್ಯಾಪ್ತಿಯಲ್ಲಿ ಕಟ್ಟಡಗಳು ಕುಸಿದಿವೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

  • Anguished by the loss of lives and damage of property due to the Earthquake in Turkey. Condolences to the bereaved families. May the injured recover soon. India stands in solidarity with the people of Turkey and is ready to offer all possible assistance to cope with this tragedy. https://t.co/vYYJWiEjDQ

    — Narendra Modi (@narendramodi) February 6, 2023 " class="align-text-top noRightClick twitterSection" data=" ">

ಟರ್ಕಿಗಿದೆ ಭೂಕಂಪದ ಶಾಪ: ಟಿರ್ಕಿಯು ಭೌಗೋಳಿಕವಾಗಿಯೇ ಅಪಾಯಕಾರಿ ಸ್ಥಳದಲ್ಲಿದೆ. ಈ ಪ್ರದೇಶ ದೋಷಯುಕ್ತ ರೇಖೆಗಳ ಭಾಗದಲ್ಲಿ ಇರುವ ಕಾರಣ ಇಲ್ಲಿ ಆಗಾಗ್ಗೆ ಭೂಮಿ ನಡುಗುತ್ತದೆ. 1999 ರಲ್ಲಿ ವಾಯುವ್ಯ ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಗಳಲ್ಲಿ ಸುಮಾರು 18,000 ಜನರು ಬಲಿಯಾಗಿದ್ದು, ಇತಿಹಾದಲ್ಲಿಯೇ ಭೀಕರ ದುರಂತವಾಗಿದೆ. ಮೂರು ವರ್ಷಗಳ ಹಿಂದೆ ಅಂದರೆ 2000 ನೇ ಇಸ್ವಿಯಲ್ಲಿ ಉಂಟಾದ 6.8 ತೀವ್ರತೆಯ ಭೂಕಂಪನದಲ್ಲಿ 40 ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದರು.

ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪನಕ್ಕೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಆ ದೇಶಗಳಿಗೆ ನೆರವು ನೀಡುವುದಾಗಿ ಹೇಳಿದೆ. ಪರಿಹಾರ ಮತ್ತು ರಕ್ಷಣಾ ತಂಡಗಳನ್ನು(ಎನ್​ಡಿಆರ್​ಎಫ್​) ಅಲ್ಲಿಗೆ ಕಳುಹಿಸುತ್ತಿದೆ. ಪ್ರಕೃತಿ ವೈಪರೀತ್ಯವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ.

ಟರ್ಕಿಗೆ ಭಾರತದ ರಕ್ಷಣಾ ಪಡೆ ರವಾನೆ: ಭೂಕಂಪ ಪೀಡಿತ ಟರ್ಕಿಗೆ ಎನ್‌ಡಿಆರ್‌ಎಫ್ ಮತ್ತು ವೈದ್ಯಕೀಯ ಮತ್ತು ರಕ್ಷಣಾ ತಂಡಗಳನ್ನು ಪರಿಹಾರ ಸಾಮಗ್ರಿಗಳೊಂದಿಗೆ ತಕ್ಷಣವೇ ರವಾನಿಸಲು ನಿರ್ಧರಿಸಲಾಗಿದೆ. ವಿಶೇಷ ತರಬೇತಿ ಪಡೆದ ಶ್ವಾನದಳಗಳು ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಗಳನ್ನು ಒಳಗೊಂಡಿರುವ ಎನ್‌ಡಿಆರ್‌ಎಫ್‌ನ ಎರಡು ತಂಡಗಳು ಭೂಕಂಪ ಪೀಡಿತ ಪ್ರದೇಶಕ್ಕೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹೋಗಲಿವೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

ವೈದ್ಯಕೀಯ ತಂಡಗಳು, ತರಬೇತಿ ಪಡೆದ ವೈದ್ಯರು ಮತ್ತು ಅರೆವೈದ್ಯರೊಂದಿಗೆ ಅಗತ್ಯ ಔಷಧಿಗಳೊಂದಿಗೆ ಸಿದ್ಧವಾಗಿವೆ. ಟರ್ಕಿಯಲ್ಲಿ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾನ್‌ಬುಲ್‌ನಲ್ಲಿರುವ ಕಾನ್ಸುಲೇಟ್ ಜನರಲ್ ಕಚೇರಿಯ ಸಮನ್ವಯದಲ್ಲಿ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗುವುದು ಎಂದು ಪಿಎಂಒ ತಿಳಿಸಿದೆ.

"ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಿಂದ ದುಃಖವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ" ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಭಾರತ ಟರ್ಕಿಯ ಜನರೊಂದಿಗೆ ನಿಲ್ಲುತ್ತದೆ. ದುರಂತವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರಿಗೆ ಟ್ಯಾಗ್​ ಮಾಡಿದ್ದಾರೆ.

ಇತ್ತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕೂಡ ಭೂಕಂಪದಿಂದಾದ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ. "ಟರ್ಕಿಯಲ್ಲಿನ ಭೂಕಂಪದಲ್ಲಿ ಜೀವಹಾನಿ ಮತ್ತು ಹಾನಿಯಿಂದ ತೀವ್ರ ದುಃಖಿತವಾಗಿದೆ. ಈ ಕಷ್ಟದ ಸಮಯದಲ್ಲಿ ನೆರವು ನೀಡಲಾಗುವುದು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಓದಿ: ಪ್ರಬಲ ಭೂಕಂಪನಕ್ಕೆ ನಲುಗಿದ ಟರ್ಕಿ.. ರಿಕ್ಟರ್​ ಮಾಪಕದಲ್ಲಿ 7.8 ತೀವ್ರತೆ ದಾಖಲು

Last Updated : Feb 6, 2023, 3:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.