ETV Bharat / international

Earth quake: ಉತ್ತರ ಚಿಲಿಯಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ - ರಿಂಗ್ ಆಫ್ ಫೈರ್

ಉತ್ತರ ಚಿಲಿಯಲ್ಲಿ ನಿನ್ನೆ ರಾತ್ರಿ (ಬುಧವಾರ) 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ, ಯಾವುದೇ ಪ್ರಾಣ ಹಾನಿ ಮತ್ತು ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Etv Bharat
Etv Bharat
author img

By ETV Bharat Karnataka Team

Published : Sep 7, 2023, 8:09 AM IST

ಸ್ಯಾಂಟಿಯಾಗೊ: ಉತ್ತರ ಚಿಲಿಯಲ್ಲಿ ಬುಧವಾರ 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ, ಯಾವುದೇ ಪ್ರಾಣ ಹಾನಿ ಹಾಗೂ ಆಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಭೂಕಂಪವು ಸ್ಥಳೀಯ ಸಮಯ ರಾತ್ರಿ 8:48ಕ್ಕೆ (00:48 GMT) ಸಂಭವಿಸಿದೆ.

ಭೂಕಂಪನದ ಕೇಂದ್ರಬಿಂದುವು ಚಿಲಿಯ ಕೊಕ್ವಿಂಬೊದಿಂದ ದಕ್ಷಿಣ-ನೈಋತ್ಯದಲ್ಲಿ 41 ಕಿಲೋ ಮೀಟರ್ ದೂರದಲ್ಲಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಭೂಕಂಪವು 41 ಕಿಲೋಮೀಟರ್ ಆಳದಲ್ಲಿ ಉಂಟಾಗಿದೆ. ಚಿಲಿಯ ರಾಷ್ಟ್ರೀಯ ತುರ್ತು ಕಚೇರಿಯು ಯಾವುದೇ ಹಾನಿ ಅಥವಾ ಸಾವು ನೋವುಗಳ ಬಗ್ಗೆ ವರದಿ ನೀಡಿಲ್ಲ.

ಚಿಲಿ ಪೆಸಿಫಿಕ್‌ನಲ್ಲಿ ರಿಂಗ್ ಆಫ್ ಫೈರ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಭಾಗದಲ್ಲಿ ಆಗಾಗ್ಗೆ ಭೂಕಂಪಗಳು ಅನುಭವಿಸುತ್ತವೆ. 2010 ರಲ್ಲಿ 8.8 ತೀವ್ರತೆಯ ಭೂಕಂಪ ಮತ್ತು ನಂತರದ ಸಂಭವಿಸಿದ ಸುನಾಮಿ 526 ಜೀವಗಳನ್ನು ಬಲಿ ತೆಗೆದುಕೊಂಡಿತ್ತು.

ಇತ್ತೀಚಿನ ಘಟನೆ, ಇಂಡೋನೇಷ್ಯಾದ ಬಾಲಿ, ಜಾವಾ ದ್ವೀಪಗಳಲ್ಲಿ ಪ್ರಬಲ ಭೂಕಂಪ: ಇಂಡೋನೇಷ್ಯಾದ ರೆಸಾರ್ಟ್ ದ್ವೀಪವಾದ ಬಾಲಿ ಹಾಗೂ ದೇಶದ ಇತರ ಭಾಗಗಳಲ್ಲಿ ಆಗಸ್ಟ್ 29ರಂದು ಪ್ರಬಲ ಭೂಕಂಪ ಸಂಭವಿಸಿತ್ತು. ಭೂಮಿ ಕಂಪಿಸಿದ್ದರಿಂದ ಜನರು ಭಯಗೊಂಡಿದ್ದರು. ಆದರೆ, ಯಾವುದೇ ಸಾವುನೋವಿನ ಬಗ್ಗೆ ವರದಿಯಾಗಿರಲಿಲ್ಲ. 513.5 ಕಿಲೋಮೀಟರ್ ಆಳದಲ್ಲಿ 7.1 ತೀವ್ರತೆಯ ಭೂಮಿ ಕಂಪಿಸಿತ್ತು. ಬಾಲಿಯ ಪಕ್ಕದಲ್ಲಿರುವ ಲೊಂಬಾಕ್ ದ್ವೀಪದ ಕರಾವಳಿಯ ಹತ್ತಿರವಿರುವ ಸಣ್ಣ ದ್ವೀಪವಾದ ಗಿಲಿ ಏರ್‌ನಿಂದ ಈಶಾನ್ಯಕ್ಕೆ 181 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿತ್ತು ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ತಿಳಿಸಿತ್ತು.

ಇಂಡೋನೇಷ್ಯಾದ ಹವಾಮಾನ ಹಾಗೂ ಭೂಭೌತಿಕ ಸಂಸ್ಥೆಯು ಸುನಾಮಿಯ ಅಪಾಯವಿಲ್ಲವೆಂದು ತಿಳಿಸಿತ್ತು. ಆದರೆ, ಸಂಭವನೀಯ ಆಘಾತಗಳ ಕುರಿತು ಎಚ್ಚರಿಕೆ ಕೊಟ್ಟಿತ್ತು. ಸಂಸ್ಥೆಯ ಪ್ರಾಥಮಿಕ ಪ್ರಮಾಣವು 7.4ರಷ್ಟು ತೀವ್ರತೆಯ ಭೂಕಂಪ ಆಗಿತ್ತು. ಕೆಲವು ನಿಮಿಷಗಳ ಬಳಿಕ ಬೆಳಗಿನ ಜಾವದ ಮೊದಲು ಅದೇ ಪ್ರದೇಶದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಪ್ರಬಲ ಭೂಕಂಪನದ ಬಳಿಕ, ಅನೇಕ ನಿವಾಸಿಗಳು ಹಾಗೂ ಪ್ರವಾಸಿಗರು ತಮ್ಮ ಮನೆಗಳು ಮತ್ತು ಹೋಟೆಲ್‌ಗಳಿಂದ ಎತ್ತರದ ಪ್ರದೇಶದತ್ತ ಧಾವಿಸಿದರು. ಆದರೆ, ಈ ಭೂಕಂಪವು ಸುನಾಮಿಯನ್ನು ಪ್ರಚೋದಿಸುವ ಸಾಮರ್ಥ್ಯ ಹೊಂದಿಲ್ಲ. ಇದರಿಂದ ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳಿತ್ತು. "ಹೋಟೆಲ್ ಗೋಡೆಗಳು ಕೆಳಗೆ ಬೀಳುತ್ತವೆ ಎಂದು ನಾನು ಭಾವಿಸಿದೆ" ಎಂದು ಆಸ್ಟ್ರೇಲಿಯಾದ ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಟರ್ಕಿ, ಸಿರಿಯಾದಲ್ಲಿ 'ಸಾವಿನ ಭೂಕಂಪ'.. 640 ಜನರ ಬಲಿ ಪಡೆದ ಪ್ರಕೃತಿ.. ಭಾರತದಿಂದ ನೆರವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.