ವ್ಯಾಟಿಕನ್ ಸಿಟಿ: ಏಸುವಿನ ಜನ್ಮದಿನದ ಸಂಭ್ರಮವಾದ ಕ್ರಿಸ್ಮಸ್ ವಿಶ್ವದಾದ್ಯಂತ ಕಳೆಗಟ್ಟಿದೆ. ಈ ಸಂತಸದ ನಡುವೆ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧವನ್ನು ಪೋಪ್ ಫ್ರಾನ್ಸಿಸ್ ಬುದ್ಧಿಹೀನ ನಡೆ ಎಂದು ಟೀಕಿಸಿ, ಬೇಗನೇ ತಿಕ್ಕಾಟವನ್ನು ಕೊನೆಗೊಳಿಸುವಂತೆ ಮನವಿ ಮಾಡಿದರು.
ಹಬ್ಬದ ಹಿನ್ನೆಲೆಯಲ್ಲಿ ಸಂದೇಶ ನೀಡಿದ ಪೋಪ್ ಪ್ರಾನ್ಸಿಸ್ ಅವರು, ನಡೆಯುತ್ತಿರುವ ಮಾರಣಹೋಮವನ್ನು ತಕ್ಷಣವೇ ನಿಲ್ಲಿಸಬೇಕು. ಒಗ್ಗಟ್ಟು ಬಲಪಡಿಸಿ, ಸಂತ್ರಸ್ತರಿಗೆ ನೆರವಾಗಬೇಕಿದೆ. ಯುದ್ಧವನ್ನು ಕೊನೆಗಾಣಿಸುವುದೇ ಕ್ರಿಸ್ಮಸ್ನ ನಿಜವಾದ ಸಂಭ್ರಮ ಎಂದು ಸಂದೇಶ ಸಾರಿದರು.
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ಸೆನ್ಸ್ಲೆಸ್(ಬುದ್ಧಿಹೀನ) ಆಗಿದೆ. ಲೆಕ್ಕವಿಲ್ಲದಷ್ಟು ಜೀವಗಳ ಬಲಿಪಡೆದ ಆಕ್ರಮಣವನ್ನು ಇಲ್ಲಿಗೆ ನಿಲ್ಲಿಸಬೇಕು. ಆಯುಧಗಳ ಸದ್ದು ಅಡಗಬೇಕು, ನೊಂದ ಹೃದಯಗಳಿಗೆ ಒಗ್ಗಟ್ಟಾಗಿ ನೆರವು ನೀಡುವ ಮನಸ್ಸನ್ನು ಭಗವಂತ ನೀಡಬೇಕು. ಕ್ರಿಸ್ಮಸ್ ಮನಸುಗಳನ್ನು ಬೆಳಗಲಿ ಎಂದು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪೋಪ್ ಹೇಳಿದರು.
ಓದಿ: ಆಮೆ ಆ‘ಲಿಂಗ’ನ.. ಭಗವಂತ ಮಹಾದೇವ-ವಿಷ್ಣು ಭೇಟಿ ಕ್ಯಾಮರಾದಲ್ಲಿ ಸೆರೆ