ETV Bharat / international

ಜಪಾನ್ ಮಾಜಿ ಪಿಎಂ ಶಿಂಜೊ ಅಬೆ ಅಂತ್ಯಕ್ರಿಯೆ.. ಅಗಲಿದ ಸ್ನೇಹಿತನಿಗೆ ಮೋದಿ ಹೃದಯಪೂರ್ವಕ ಸಂತಾಪ

ಭಾರತವು ಶಿಂಜೊ ಅಬೆ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಭಾರತೀಯರು ಅಬೆ ಹಾಗೂ ಜಪಾನ್ ಇಬ್ಬರನ್ನೂ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಜಪಾನ್ ಪ್ರಧಾನಿಯೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ ಮೋದಿ ಹೇಳಿದರು.

author img

By

Published : Sep 27, 2022, 11:15 AM IST

ಟೋಕಿಯೋದಲ್ಲಿ ಪ್ರಧಾನಿ ಮೋದಿ: ಮಾಜಿ ಪ್ರಧಾನಿ ಶಿಂಜೊ ಅಬೆ ಅಂತ್ಯಕ್ರಿಯೆಯಲ್ಲಿ ಭಾಗಿ
PM Modi extends heartfelt condolences to his dear friend Abe San

ಟೋಕಿಯೊ (ಜಪಾನ್): ತಮ್ಮ ಆತ್ಮೀಯ ಗೆಳೆಯ, ಜಪಾನಿನ ದಿವಂಗತ ಪ್ರಧಾನಿ ಶಿಂಜೊ ಅಬೆ (Japanese Prime Minister Shinzo Abe) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಪೂರ್ವಕ ಸಂತಾಪ ಸೂಚಿಸಿದ್ದಾರೆ. ಟೋಕಿಯೊದಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ (Fumio Kishida ) ಅವರನ್ನು ಭೇಟಿ ಮಾಡಿದ ಮೋದಿ, ಅಬೆ ತಮ್ಮ ಆತ್ಮೀಯ ಗೆಳೆಯರಾಗಿದ್ದು ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ನಷ್ಟವಾಗಿದೆ ಎಂದು ತಿಳಿಸಿದರು.

ಇಂದು ನಾವು ದುಃಖದ ಸಮಯದಲ್ಲಿ ಭೇಟಿಯಾಗುತ್ತಿದ್ದೇವೆ. ಕಳೆದ ಬಾರಿ ನಾನಿಲ್ಲಿಗೆ ಬಂದಾಗ ಮಾಜಿ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದೆ. ಭಾರತವು ಶಿಂಜೊ ಅಬೆ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಭಾರತೀಯರು ಅಬೆ ಹಾಗೂ ಜಪಾನ್ ಇಬ್ಬರನ್ನೂ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಜಪಾನ್ ಪ್ರಧಾನಿಯೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ ಮೋದಿ ಸ್ಮರಿಸಿದರು.

ಅಬೆ ಭಾರತ ಮತ್ತು ಜಪಾನ್ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು ಮತ್ತು ಅದನ್ನು ಇತರ ಹಲವು ಕ್ಷೇತ್ರಗಳಿಗೆ ವಿಸ್ತರಿಸಿದರು. ಜಾಗತಿಕ ದೃಷ್ಟಿಕೋನದ ಬೆಳವಣಿಗೆಯಲ್ಲಿ ನಮ್ಮ ಸ್ನೇಹವು ಪ್ರಮುಖ ಪಾತ್ರ ವಹಿಸಿದೆ. ಅವರು ಮಾಡಿದ ಎಲ್ಲಾ ಉತ್ತಮ ಕೆಲಸಗಳಿಗಾಗಿ ಭಾರತದ ಜನರು ಅಬೆ ಸಾನ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ನಿಮ್ಮ ನಾಯಕತ್ವದಲ್ಲಿ (ಕಿಶಿಡಾ) ಕೂಡ ಭಾರತ-ಜಪಾನ್ ಸಂಬಂಧಗಳು (India-Japan ties) ಬಲವಾಗಿ ಬೆಳೆದು ಹೊಸ ಎತ್ತರಕ್ಕೆ ತಲುಪಲಿವೆ ಮತ್ತು ವಿಶ್ವದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾನು ನಂಬುತ್ತೇನೆ ಎಂದು ಭಾರತದ ಪ್ರಧಾನಿ ಮೋದಿ ಹೇಳಿದರು.

ಅಬೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಪಾನ್ ಪ್ರಧಾನಿ ಕಿಶಿಡಾ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. ಪಿಎಂ ಮೋದಿ, ಪಿಎಂ ಅಬೆ ಅವರೊಂದಿಗೆ ಭಾರತ-ಜಪಾನ್ ಬಾಂಧವ್ಯವನ್ನು ಬಲಪಡಿಸಿದ್ದಾರೆ ಎಂದರು.

ಜುಲೈ 8 ರಂದು ನಾರಾ ನಗರದಲ್ಲಿ ಪ್ರಚಾರ ಭಾಷಣದ ವೇಳೆ ದಾಳಿಗೊಳಗಾದ ಅಬೆ ನಂತರ ನಿಧನರಾಗಿದ್ದರು. ಇಂದು ನಡೆಯಲಿರುವ ಅಬೆ ಅವರ ಅಂತಿಮ ಸಂಸ್ಕಾರದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಜುಲೈ 8 ರಂದು ಅಬೆ ಅವರ ಮೇಲೆ ದಾಳಿ ನಡೆದ ನಂತರ ಜಪಾನ್​ನಲ್ಲಿ ಹೊಸ ಭದ್ರತಾ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಪೊಲೀಸ್ ಶ್ವಾನಗಳ ಗಸ್ತು ಹಾಕಲಾಗಿದೆ. ಟೋಕಿಯೊ ಪ್ರದೇಶದ ವಿಮಾನ ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಜಪಾನ್​ನ ರಾಜಮನೆತನ ಕೂಡ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ನಮನ ಸಲ್ಲಿಸಲಿದೆ. ಆದರೆ ಸಂಪ್ರದಾಯದ ಪ್ರಕಾರ ಚಕ್ರವರ್ತಿ ನರುಹಿಟೊ (Emperor Naruhito) ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ.

ಇದನ್ನೂ ಓದಿ: ಹಿಂದಿನಿಂದ ಬಂದು ಜಪಾನಿನ ಮಾಜಿ ಪ್ರಧಾನಿ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ; ಬಂದೂಕು ನಿಯಂತ್ರಣ ರಾಷ್ಟ್ರಗಳಲ್ಲಿ ದಿಗ್ಭ್ರಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.