ETV Bharat / international

ಭಾರತ- ಆಸ್ಟ್ರೇಲಿಯಾ 'ಮುಕ್ತ' ಸಂಬಂಧಗಳ ವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಕರೆ - PM Modi Australia meet

ಮೂರು ರಾಷ್ಟ್ರಗಳ ಪ್ರವಾಸದಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಆಗಮಿಸಿದ್ದು, ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕರೆ
ಪ್ರಧಾನಿ ನರೇಂದ್ರ ಮೋದಿ ಕರೆ
author img

By

Published : May 23, 2023, 9:18 AM IST

Updated : May 23, 2023, 10:16 AM IST

ನವದೆಹಲಿ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಆಸ್ಟ್ರೇಲಿಯಾದಲ್ಲಿದ್ದು, ಭಾರತೀಯ ಸಮುದಾಯದ ಜೊತೆಗೆ ಸಂವಾದ ನಡೆಸಲಿದ್ದಾರೆ. ಪ್ರಧಾನಿ ಆ್ಯಂಥೋನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ಸಿಡ್ನಿಗೆ ತೆರಳಿರುವ ಅವರು, ಉಭಯ ರಾಷ್ಟ್ರಗಳ ನಡುವಣ ಸಂಬಂಧಗಳ ವೃದ್ಧಿಗೆ ಹೆಚ್ಚಿನ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.

ಅಲ್ಲಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೋದಿ, ಇಂಡೋ-ಪೆಸಿಫಿಕ್ ಪ್ರದೇಶವು ಹವಾಮಾನ ಬದಲಾವಣೆ, ಭಯೋತ್ಪಾದನೆ, ಸಂವಹನದ ಮಾರ್ಗಗಳ ಭದ್ರತೆ ಮತ್ತು ಕಡಲ್ಗಳ್ಳತನದಂತಹ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಹಂಚಿಕೆಯ ಪ್ರಯತ್ನಗಳ ಮೂಲಕ ಮಾತ್ರ ಅವುಗಳನ್ನು ಪರಿಹರಿಸಬಹುದು ಎಂದು ಪ್ರತಿಪಾದಿಸಿದರು.

ಇಂಡೋ- ಪೆಸಿಫಿಕ್​ ಪ್ರದೇಶದ ಮುಕ್ತವಾಗಿರಲು ಆಸ್ಟ್ರೇಲಿಯಾದ ಜೊತೆಗಿನ ನಂಟನ್ನು ಇನ್ನಷ್ಟು ವಿಸ್ತರಿಸಬೇಕಿದೆ. ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಒಳಗೊಂಡಂತೆ ಆಸೀಸ್​​ನೊಂದಿಗಿನ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕಿದೆ. ಇದು ಇಷ್ಟಕ್ಕೆ ತೃಪ್ತನಾಗುವುದಿಲ್ಲ ಎಂದು ಮೋದಿ ಇದೇ ವೇಳೆ ಹೇಳಿದರು.

ಈ ಹಿಂದೆ ನೋಡಿದ ಮತ್ತು ಈಗಿನ ಪ್ರಧಾನಿ ಅಲ್ಬನೀಸ್​ ಅವರು ಒಂದೇ ಆಗಿದ್ದಾರೆ. ನಾವಿಬ್ಬರೂ ಮತ್ತೆ ಸಿಡ್ನಿಯಲ್ಲಿ ಒಟ್ಟಿಗೆ ಸೇರಿದ್ದೇವೆ. ಉಭಯ ರಾಷ್ಟ್ರಗಳ ಸಂಬಂಧಗಳನ್ನು ಮುಂದಿನ ಹಂತಕ್ಕೆ ಹೇಗೆ ಕೊಂಡೊಯ್ಯಬಹುದು, ಪೂರಕತೆಯ ಹೊಸ ಕ್ಷೇತ್ರಗಳನ್ನು ಹೇಗೆ ಗುರುತಿಸಬಹುದು ಮತ್ತು ವಿಸ್ತರಿಸಬಹುದು ಎಂಬುದರ ಬಗ್ಗೆ ಅನ್ವೇಷಿಸಲು ಇದು ಸದಾವಕಾಶವಗಿದೆ ಎಂಬುದು ನನ್ನ ವಿಶ್ವಾಸವಾಗಿದೆ. ಸಹಕಾರ ಮುಂದುವರಿಯುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಜಂಟಿ ಸಮರಾಭ್ಯಾಸ: ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಆಸ್ಟ್ರೇಲಿಯಾ ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್‌ ಮೇಲೆ ಹೆಚ್ಚಿನ ಆಸಕ್ತಿಯನ್ನು ಹೊಂದಿವೆ. ನಮ್ಮ ಕಾರ್ಯತಂತ್ರದ ದೃಷ್ಟಿಕೋನಗಳ ಹೊಂದಾಣಿಕೆಯೂ ಒಂದೇ ಆಗಿದೆ. ನಮ್ಮ ನಡುವಿನ ಉನ್ನತ ಮಟ್ಟದ ಪರಸ್ಪರ ನಂಬಿಕೆಯು ರಕ್ಷಣೆ ಮತ್ತು ಭದ್ರತಾ ವಿಷಯಗಳಲ್ಲಿ ಹೆಚ್ಚಿನ ಸಹಕಾರವನ್ನು ತಂದಿದೆ. ನಮ್ಮ ನೌಕಾಪಡೆಗಳು ಜಂಟಿ ನೌಕಾ ಅಭ್ಯಾಸಗಳಲ್ಲಿ ಭಾಗವಹಿಸುತ್ತಿವೆ ಎಂದು ಅವರು ತಿಳಿಸಿದರು.

ಉಕ್ರೇನ್​ ಮೇಲಿನ ರಷ್ಯಾ ಯುದ್ಧವನ್ನು ಕಟುವಾಗಿ ಟೀಕಿಸುವ ಆಸ್ಟ್ರೇಲಿಯಾ ಮತ್ತು ನಯವಾಗಿ ಟೀಕಿಸುವ ಭಾರತದ ಸಂಬಂಧಗಳ ಮೇಲೆ ಇದ್ಯಾವುದೂ ಯಾವುದೇ ಪರಿಣಾಮ ಬೀರುವುದಿಲ್ಲ. ಉತ್ತಮ ಸ್ನೇಹಿತರಾಗಿರುವುದರ ಪ್ರಯೋಜನವೆಂದರೆ ಮುಕ್ತವಾಗಿ ಚರ್ಚಿಸಬಹುದು. ಪರಸ್ಪರರ ದೃಷ್ಟಿಕೋನವನ್ನು ಮನಗಾಣಬಹುದು. ಆಸ್ಟ್ರೇಲಿಯಾವು ಭಾರತದ ಸ್ಥಾನವನ್ನು ಅರ್ಥಮಾಡಿಕೊಳ್ಳುತ್ತದೆ. ಇದು ನಮ್ಮ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಮೋದಿ ಹೇಳಿದರು.

ಹೊಸ ತಂತ್ರಜ್ಞಾನ, ಶುದ್ಧ ಇಂಧನ, ಖನಿಜಗಳು, ಗಣಿಗಾರಿಕೆ, ಸೈಬರ್ ಸ್ಪೇಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಹೊಸ ಮಜಲನ್ನು ಆರಂಭಿಸಲು ಎರಡೂ ದೇಶಗಳಿಗೆ ಇಂತಹ ಭೇಟಿ ಮುಕ್ತ ಅವಕಾಶ ನೀಡುತ್ತದೆ. ಇದರ ನಂತರ ವಾರ್ಷಿಕ ಶೃಂಗಸಭೆಗಳು, ಆರ್ಥಿಕ ಸಹಕಾರ, ವ್ಯಾಪಾರ ಒಪ್ಪಂದ ಮತ್ತು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ದ್ವಿಪಕ್ಷೀಯ ಸಂಬಂಧಗಳು ಮೂಲಭೂತವಾಗಿ ಇನ್ನಷ್ಟು ಗಟ್ಟಿಯಾಗಲಿವೆ ಎಂದು ಮೋದಿ ಅಭಿಪ್ರಾಯಪಟ್ಟರು.

ಭಾರತೀಯರ ಜೊತೆ ಸಂವಾದ: ಮೋದಿ ಅವರು ಮೂರು ರಾಷ್ಟ್ರಗಳ ಪ್ರವಾಸದ ಕೊನೆಯಲ್ಲಿ ಆಸ್ಟ್ರೇಲಿಯಾಕ್ಕೆ ಬಂದಿದ್ದು, ಮೂರು ದಿನ ಅಲ್ಲೇ ಇರಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದಲ್ಲದೇ, ವಲಸಿಗ ಭಾರತೀಯರ ಜೊತೆಗೂ ಸಂವಾದ ನಡೆಸಲಿದ್ದಾರೆ.

ಆಸ್ಟ್ರೇಲಿಯಾದಲ್ಲಿ 'ಲಿಟಲ್ ಇಂಡಿಯಾ': ಇದೇ ವೇಳೆ ಪರಮಟ್ಟ ಎಂಬಲ್ಲಿರುವ ಹ್ಯಾರಿಸ್ ಪಾರ್ಕ್ ಪ್ರದೇಶಕ್ಕೆ 'ಲಿಟಲ್ ಇಂಡಿಯಾ' ಎಂದು ಘೋಷಣೆ ಮಾಡಲಿದ್ದಾರೆ. ಹ್ಯಾರಿಸ್ ಪಾರ್ಕ್ ಪ್ರದೇಶದಲ್ಲಿ ಭಾರತೀಯ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ನೆಲೆಯೂರಿದೆ. ಈ ಪ್ರದೇಶ ಭಾರತೀಯರ ಒಡೆತನದಲ್ಲಿದೆ. ಹೀಗಾಗಿ ಈ ಪ್ರದೇಶವನ್ನು ಅನೌಪಚಾರಿಕವಾಗಿ 'ಲಿಟಲ್ ಇಂಡಿಯಾ' ಎಂದು ಕರೆಯಲಾಗುತ್ತದೆ. ಇದನ್ನೀಗ ಪ್ರಧಾನಿ ಮೋದಿ ಅವರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ಇದನ್ನೂ ಓದಿ: ಮೂರು ದೇಶಗಳ ಪ್ರವಾಸದ ವೇಳೆ ಪ್ರಧಾನಿ ಮೋದಿಗೆ ವಿಶೇಷ ಗೌರವ: ಏನೇನು ಗೊತ್ತಾ?

Last Updated : May 23, 2023, 10:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.