ETV Bharat / international

ವಿಡಿಯೋ: ರನ್‌ ವೇಯಿಂದ ಸ್ಕಿಡ್‌ ಆದ ಟಿಬೆಟ್‌ ವಿಮಾನಕ್ಕೆ ಬೆಂಕಿ; 25 ಮಂದಿಗೆ ಗಾಯ

ಚೀನಾದ ಟಿಬೆಟ್ ಏರ್‌ಲೈನ್ಸ್​ಗೆ ಸಂಬಂಧಿಸಿದ ಪ್ರಯಾಣಿಕ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 25 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Plane in China skids off runway, catches fire;  25 injured
ಸ್ಕಿಡ್ ಆಗಿ ವಿಮಾನಕ್ಕೆ ಬೆಂಕಿ: 25 ಮಂದಿಗೆ ಗಾಯ
author img

By

Published : May 12, 2022, 9:05 AM IST

ಬೀಜಿಂಗ್(ಚೀನಾ): ವಿಮಾನವೊಂದು ಟೇಕಾಫ್ ಆಗುವಾಗ ರನ್​ವೇಯಿಂದ ಸ್ಕಿಡ್ ಆಗಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಚೀನಾದ ನೈರುತ್ಯ ಚಾಂಗ್​ಕಿಂಗ್ ನಗರದಲ್ಲಿ ಗುರುವಾರ ನಡೆದಿದೆ. ಟಿಬೆಟ್ ಏರ್‌ಲೈನ್ಸ್​ಗೆ ಸಂಬಂಧಿಸಿದ ಪ್ರಯಾಣಿಕ ವಿಮಾನ ಅವಘಡಕ್ಕೀಡಾಗಿದ್ದು, 25 ಮಂದಿ ಗಾಯಗೊಂಡರು ಎಂದು ಚೀನಾದ ಸರ್ಕಾರದ ಸುದ್ದಿಸಂಸ್ಥೆ ತಿಳಿಸಿದೆ.

ಚಾಂಗ್‌ಕಿಂಗ್ ನಗರದ ಜಿಯಾಂಗ್‌ಬೀ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಟಿಬೆಟ್ ಏರ್‌ಲೈನ್ಸ್ ವಿಮಾನದ ಫ್ಯೂಸ್‌ಲೇಜ್​ನಲ್ಲಿ (ಸಿಬ್ಬಂದಿ ಮತ್ತು ಪ್ರಯಾಣಿಕರಿರುವ ವಿಮಾನದ ಮುಖ್ಯಭಾಗ) ಬೆಂಕಿಯ ಜ್ವಾಲೆ ಮತ್ತು ದಟ್ಟ ಕಪ್ಪು ಹೊಗೆ ಕಾಣಿಸಿಕೊಂಡಿರುವ ವಿಡಿಯೋ ಬಹಿರಂಗವಾಗಿದೆ.

ವಿಮಾನದ ಹಿಂದಿನ ಬಾಗಿಲಿನ ಮೂಲಕ ಜನರು ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ನೋಡಬಹುದು. ವಿಮಾನಕ್ಕೆ ಆವರಿಸುತ್ತಿದ್ದ ಬೆಂಕಿಯನ್ನು ನಂದಿಸಲಾಗಿದೆ ಮತ್ತು ರನ್‌ವೇಯನ್ನು ಮುಚ್ಚಲಾಗಿದೆ. ವಿಮಾನವು ಟಿಬೆಟ್‌ನ ನೈಂಗ್‌ಚಿಗೆ ಹೊರಡಬೇಕಿತ್ತು. ಅಪಘಾತಕ್ಕೆ ಕಾರಣವೇನು ಎಂಬ ಕುರಿತು ತನಿಖೆ ನಡೆಯುತ್ತಿದೆ.

ಮಾರ್ಚ್ 12ರಂದು ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಬೋಯಿಂಗ್ 737 ವಿಮಾನವು ಗುವಾಂಗ್‌ಕ್ಸಿ ಜುವಾಂಗ್ ಸ್ವಾಯತ್ತ ಪ್ರದೇಶದ ಟೆಂಗ್‌ಕ್ಸಿಯಾನ್ ಕೌಂಟಿಯಲ್ಲಿ ಪತನಗೊಂಡಿತ್ತು. ಒಂಬತ್ತು ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 132 ಜನರು ಸಾವನ್ನಪ್ಪಿದರು.

ಇದನ್ನೂ ಓದಿ: ಇಸ್ರೇಲ್​​ ಸೇನಾ ದಾಳಿಗೆ ಅಲ್ ​- ಜಜೀರಾ ಜನಪ್ರಿಯ ಪತ್ರಕರ್ತೆ ಶಿರೀನ್​ ಅಬು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.