ವಾಷಿಂಗ್ಟನ್: ಮಿಸ್ಸಿಸ್ಸಿಪ್ಪಿಯ ಟುಪೆಲೋದಲ್ಲಿರುವ ಸ್ಥಳೀಯ ವಾಲ್‌ಮಾರ್ಟ್‌ಗೆ ವಿಮಾನವನ್ನು ಉದ್ದೇಶಪೂರ್ವಕವಾಗಿ ಅಪ್ಪಳಿಸುವ ಬೆದರಿಕೆಯನ್ನು ಹಾಕಿದ್ದಾರೆ ಎಂದು ವರದಿಯಾಗಿದೆ.
ವಿಮಾನದ ಪೈಲಟ್ ಅಂಗಡಿಗೆ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ ನಂತರ ಟುಪೆಲೋದಲ್ಲಿನ ವಾಲ್‌ಮಾರ್ಟ್ ಅನ್ನು ಸ್ಥಳಾಂತರಿಸಲಾಯಿತು ಎಂದು ಟುಪೆಲೋ ಪೊಲೀಸರು ತಿಳಿಸಿದ್ದಾರೆ. ಬೆಳಗಿನ ಜಾವ ಐದು ಗಂಟೆಗೆ ವಿಮಾನವೊಂದರ ಪೈಲಟ್ ಟುಪೆಲೋ ಮೇಲೆ ಹಾರುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು ಎಂದು ಪೊಲೀಸರು ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಟುಪೆಲೋ ಪೊಲೀಸ್ ಇಲಾಖೆ ವಿಮಾನದ ಪೈಲಟ್ E911 ನೊಂದಿಗೆ ಸಂಪರ್ಕ ಸಾಧಿಸಿದೆ. ಅಷ್ಟೇ ಅಲ್ಲ ವೆಸ್ಟ್ ಮೇನ್‌ನಲ್ಲಿರುವ ವಾಲ್‌ಮಾರ್ಟ್‌ಗೆ ಉದ್ದೇಶಪೂರ್ವಕವಾಗಿ ಅಪ್ಪಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ಪೈಲಟ್ನ ಈ ಬೆದರಿಕೆ ಹಿನ್ನೆಲೆಯಲ್ಲಿ ವಾಲ್-ಮಾರ್ಟ್ ವೆಸ್ಟ್ ಮತ್ತು ವೆಸ್ಟ್ ಮೇನ್‌ನಲ್ಲಿರುವ ಅಂಗಡಿಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಂಡಿದೆ.
ಯಾವುದೇ ಸ್ಥಿತಿಯನ್ನು ಎದುರಿಸಲು ಪೊಲೀಸರು ಎಲ್ಲ ಕ್ರಮಗಳಿಗೆ ಸಿದ್ಧತೆ ಮಾಡಿಕೊಂಡಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುವುದಾಗಿ ಟುಪೆಲೋ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:ರೈಲ್ವೆ ನಿಲ್ದಾಣದ ಹೊಸ ವಿನ್ಯಾಸದ ಫೋಟೋಸ್ ವೈರಲ್: ನೆಟಿಜನ್ಗಳ ಪ್ರತಿಕ್ರಿಯೆ ಹೇಗಿದೆ ನೋಡಿ