ETV Bharat / international

ಮೋದಿ ಕಾಲು ಮುಟ್ಟಿ ಆಶೀರ್ವಾದ ಪಡೆದ ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ!- ವಿಡಿಯೋ

ಪಪುವಾ ನ್ಯೂಗಿನಿ ದೇಶದ ಪ್ರಧಾನಿ ಜೇಮ್ಸ್ ಮರಾಪೆ ಅವರು ಪಿಎಂ ಮೋದಿಯವರ ಕಾಲು ಮುಟ್ಟಿ ಆಶೀರ್ವಾದ ಪಡೆದರು.

Papua New Guinea
ಜೇಮ್ಸ್ ಮರಾಪೆ
author img

By

Published : May 22, 2023, 7:19 AM IST

ಪೋರ್ಟ್ ಮೊರೆಸ್ಬಿ ವಿಮಾನ ನಿಲ್ದಾಣದಲ್ಲಿ ಅಪರೂಪದ ದೃಶ್ಯ!

ಪಪುವಾ ನ್ಯೂಗಿನಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪಪುವಾ ನ್ಯೂಗಿನಿ (ಪಿಎನ್​ಜಿ) ದೇಶಕ್ಕೆ ಆಗಮಿಸುತ್ತಿದ್ದಂತೆ ಪೋರ್ಟ್ ಮೊರೆಸ್ಬಿ ವಿಮಾನ ನಿಲ್ದಾಣದಲ್ಲಿ ಅಪರೂಪದ ದೃಶ್ಯವೊಂದು ಕಂಡುಬಂತು. ಪಿಎನ್​ಜಿ ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ಅವರು ನರೇಂದ್ರ ಮೋದಿ ಪಾದಗಳನ್ನು ಸ್ಪರ್ಶಿಸಿ, ಆಶೀರ್ವಾದ ಪಡೆಯುವ ಮೂಲಕ ಸರಳತೆ ಮೆರೆದರು.

ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ (ಜಪಾನ್​, ಪಪುವಾ ನ್ಯೂಗಿನಿ, ಆಸ್ಟ್ರೇಲಿಯಾ) ಪ್ರವಾಸದ ಭಾಗವಾಗಿ ನಿನ್ನೆ ಪಪುವಾ ನ್ಯೂಗಿನಿಗೆ ಭೇಟಿ ನೀಡಿದ್ದಾರೆ. ಮೋದಿ ಆಗಮನದ ನಂತರ ಭಾರತದ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಈ ವೇಳೆ ಇಬ್ಬರೂ ಪ್ರಧಾನ ಮಂತ್ರಿಗಳು ನಿಂತು ಗೌರವ ವಂದನೆ ಸ್ವೀಕರಿಸಿದರು. ಇದು ಪಿಎನ್‌ಜಿಗೆ ಪಿಎಂ ಮೋದಿಯವರ ಮೊದಲ ಪ್ರವಾಸವಾಗಿದ್ದು, ಹಾಗೆಯೇ ಇಂಡೋ-ಪೆಸಿಫಿಕ್ ದೇಶಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ.

ಸಾಮಾನ್ಯವಾಗಿ, ಸೂರ್ಯಾಸ್ತದ ನಂತರ ಪಪುವಾ ನ್ಯೂಗಿನಿಗೆ ಬರುವ ಯಾವುದೇ ದೇಶದ ನಾಯಕನಿಗೆ ಅದ್ಧೂರಿ ಸ್ವಾಗತ ನೀಡಲಾಗುವುದಿಲ್ಲ. ಆದರೆ, ಮೋದಿಗೆ ವಿಶೇಷ ವಿನಾಯಿತಿ ನೀಡಿ ಬಹಳ ವಿನಮ್ರತೆಯಿಂದ ಬರಮಾಡಿಕೊಳ್ಳಲಾಯಿತು. ಭಾರತದ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಹೊರಗೆ ಸಾಂಪ್ರದಾಯಿಕ ಜಾನಪದ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

  • #WATCH | Prime Minister Narendra Modi reaches Papua New Guinea, receives ceremonial welcome.

    PM Modi's visit is the first-ever visit by the Indian PM to Papua New Guinea. pic.twitter.com/E0srfABHAv

    — ANI (@ANI) May 21, 2023 " class="align-text-top noRightClick twitterSection" data=" ">

ಮೋದಿ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರದ ವೇದಿಕೆಯ (ಎಫ್‌ಐಪಿಐಸಿ III ಶೃಂಗಸಭೆ) 3 ನೇ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದಾರೆ. FIPIC ಶೃಂಗಸಭೆಯಲ್ಲಿ 14 ದೇಶಗಳ ನಾಯಕರು ಭಾಗವಹಿಸುತ್ತಿದ್ದು, ಸಾಮಾನ್ಯವಾಗಿ ಸಂಪರ್ಕ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ : ನಾಳೆಯಿಂದ ಮೋದಿ ವಿದೇಶ ಪ್ರವಾಸ: ಜಪಾನ್, ಪಪುವಾ ನ್ಯೂಗಿನಿ, ಆಸ್ಟ್ರೇಲಿಯಾ ಭೇಟಿ

2014 ರಲ್ಲಿ ಪ್ರಧಾನಿ ಮೋದಿ ಫಿಜಿ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎಫ್‌ಐಪಿಐಸಿ ಅನ್ನು ಪ್ರಾರಂಭಿಸಲಾಯಿತು. FIPIC ಶೃಂಗಸಭೆಯ ಹೊರತಾಗಿಯೂ ಮೋದಿ ಪಪುವಾ ನ್ಯೂಗಿನಿ ಗವರ್ನರ್ ಜನರಲ್ ಸರ್ ಬಾಬ್ ದಾಡೆ, ಪ್ರಧಾನ ಮಂತ್ರಿ ಮರಾಪೆ ಮತ್ತು ಶೃಂಗಸಭೆಯಲ್ಲಿ ಭಾಗವಹಿಸುವ ಇತರೆ ಕೆಲವು ಪಿಐಸಿ (PIC) ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಆಟೋಗ್ರಾಫ್ ಕೇಳಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್!

ಪಪುವಾ ನ್ಯೂಗಿನಿ ಪ್ರವಾಸದ ನಂತರ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ಮೋದಿ ಸಿಡ್ನಿಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಮೇ 23 ರಂದು ಸಿಡ್ನಿಯಲ್ಲಿ ಹಮ್ಮಿಕೊಂಡಿರುವ ಸಮುದಾಯದ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೇ 24 ರಂದು ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದು, ಆಸ್ಟ್ರೇಲಿಯಾದ ಸಿಇಒಗಳು ಮತ್ತು ವ್ಯಾಪಾರ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ : ಮೂರು ದೇಶಗಳ ಪ್ರವಾಸದ ವೇಳೆ ಪ್ರಧಾನಿ ಮೋದಿಗೆ ವಿಶೇಷ ಗೌರವ: ಏನೇನು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.