ETV Bharat / international

ಪಾಕ್‌ ಸಂಸತ್ತಿನಲ್ಲಿಂದು ಅವಿಶ್ವಾಸ ನಿರ್ಣಯದ ಮತ: ಇಮ್ರಾನ್‌ ಹಣೆಬರಹ ನಿರ್ಧಾರ​

ಇಂದು ಪಾಕಿಸ್ತಾನದ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆಯಲಿದೆ. ಇಮ್ರಾನ್​ ಖಾನ್​ಗೆ ಪಾಕ್​ ಸಂಸತ್​ನಲ್ಲಿ ಸಂಖ್ಯಾಬಲದ ಕೊರತೆ ಇದ್ದು, ಇಂದೇ ಅವರ ರಾಜಕೀಯ ಭವಿಷ್ಯ ನಿರ್ಧಾರ​ವಾಗಲಿದೆ.

author img

By

Published : Apr 3, 2022, 11:47 AM IST

ಇಮ್ರಾನ್​ ಖಾನ್
ಇಮ್ರಾನ್​ ಖಾನ್

ಪಾಕಿಸ್ತಾನ: ಪಾಕಿಸ್ತಾನದ ನ್ಯಾಶನಲ್ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ನಿರ್ಣಯದ ಪರ-ವಿರೋಧದ ಮತ ಚಲಾವಣೆ ನಡೆಯಲಿದ್ದು, ಇಮ್ರಾನ್​ ಖಾನ್​ ಸರ್ಕಾರ ಮುಂದುವರಿಯಬೇಕೇ? ಅಥವಾ ಬೇಡವೇ? ಎಂಬುದು ನಿರ್ಧಾರವಾಗಲಿದೆ.

ಪಾಕಿಸ್ತಾನದ ಸಂಸತ್​​​​ನ ಒಟ್ಟಾರೆ ಬಲ 342. ಹಾಲಿ ಸರ್ಕಾರದ ಪತನಕ್ಕೆ 172 ಮತಗಳು ಬಂದರೆ ಸಾಕು. ಅವಿಶ್ವಾಸ ನಿರ್ಣಯ ಮಂಡಿಸಿರುವ ಪ್ರತಿಪಕ್ಷಗಳ ಬಲ 164 ಇದೆ. ಆದರೆ ಅವುಗಳು ತಮ್ಮ ಬಲವನ್ನು ಈಗ 175ಕ್ಕೆ ಹೆಚ್ಚಿಸಿಕೊಂಡಿವೆ. ಪ್ರತಿಪಕ್ಷಗಳ ಯೋಜನೆ​ಯನ್ನು ತಲೆಕೆಳಗಾಗಿಸಲು ಇಮ್ರಾನ್​ಗೂ 172 ಮತಗಳ ಅವಶ್ಯಕತೆ ಇದೆ. ವಿರೋಧ ಪಕ್ಷಗಳು ಈಗಾಗಲೇ ಆಡಳಿತಾರೂಢ ಪಿಟಿಐನ ಮಿತ್ರಪಕ್ಷಗಳ ಬೆಂಬಲವನ್ನೂ ಪಡೆದುಕೊಂಡಿವೆ. ಅಷ್ಟೇ ಅಲ್ಲದೆ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ನಿಂದ ಪಕ್ಷಾಂತರಗೊಂಡವರು ಅವಿಶ್ವಾಸ ನಿರ್ಣಯದ ಪರ ಮತ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ, ಇಮ್ರಾನ್​ಖಾನ್ ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: ಧ್ವನಿವರ್ಧಕ ತೆಗೆಯದಿದ್ದರೆ ಮಸೀದಿಗಳ ಮುಂದೆ ಹನುಮಾನ್ ಚಾಲೀಸಾ ಹಾಕ್ತೇವೆ: ರಾಜ್ ಠಾಕ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.