ETV Bharat / international

ಬೆಂಗಳೂರು ಸೇರಿ ಭಾರತದ 7 ನಗರಗಳಿಗೆ ಭೇಟಿ ನೀಡಿ ಗೂಢಚಾರಿಕೆ ನಡೆಸಿದ್ದ ಪಾಕ್‌ ಪತ್ರಕರ್ತ! - ಪಾಕ್​ ಪತ್ರಕರ್ತನಿಂದ ಭಾರತದಲ್ಲಿ ಬೇಹುಗಾರಿಕೆ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಐಎಸ್‌ಐ ಪರ ಬೇಹುಗಾರಿಕೆ ನಡೆಸಿದ್ದೆ ಎಂದು ಸ್ವತ: ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಹೇಳಿದ್ದಾರೆ.

Pakistan journalist confesses to spying for ISI on India  Pak Journalist spying for ISI on India visits during UPA govt  Pakistan journalist Nusarat Mirza news  ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಐಎಸ್​ಐ ಪರ ಬೇಹುಗಾರಿಕೆ ನಡೆಸಿ್ದ್ದ ಪಾಕ್ ಪರ್ತಕರ್ತ್​ ಪಾಕ್​ ಪತ್ರಕರ್ತನಿಂದ ಭಾರತದಲ್ಲಿ ಬೇಹುಗಾರಿಕೆ  ಪಾಕ್​ ಪರ್ತಕರ್ತ ನುಸ್ರಾತ್​ ಮಿರ್ಜಾ ಸುದ್ದಿ
ಕೃಪೆ: Twitter
author img

By

Published : Jul 13, 2022, 10:28 AM IST

Updated : Jul 13, 2022, 10:35 AM IST

ಇಸ್ಲಾಮಾಬಾದ್(ಪಾಕಿಸ್ತಾನ): ಪಾಕಿಸ್ತಾನದ ಪತ್ರಕರ್ತರೊಬ್ಬರು ಭಾರತಕ್ಕೆ ಭೇಟಿ ನೀಡಿದಾಗಲೆಲ್ಲ ಅವರು ನಡೆಸಿರುವ ಬೇಹುಗಾರಿಕೆಯ ಸಂಗತಿ ಇದೀಗ ಬಯಲಾಗಿದೆ. ನುಸ್ರತ್ ಮಿರ್ಜಾ ಎಂಬ ಪತ್ರಕರ್ತ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದ ಸಂದರ್ಭದಲ್ಲಿ ಹಲವು ಸಲ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಹಂಚಿಕೊಂಡಿರುವುದಾಗಿ ಅವರೇ ಬಹಿರಂಗಪಡಿಸಿದ್ದಾರೆ.

ರಾಜಕೀಯ ವಿಶ್ಲೇಷಕ ಶಕೀಲ್ ಚೌಧರಿ ನಡೆಸಿದ ಯೂಟ್ಯೂಬ್‌ ಸಂದರ್ಶನದಲ್ಲಿ ಅಂಕಣಕಾರ ನುಸ್ರತ್ ಮಿರ್ಜಾ ಮಾತನಾಡಿ, "ಭಾರತಕ್ಕೆ ಭೇಟಿ ನೀಡಲು ನಾನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ ವಿಶೇಷ ಪ್ರಯೋಜನಗಳನ್ನು ಪಡೆದಿದ್ದೇನೆ. ಸಾಮಾನ್ಯವಾಗಿ ಭಾರತಕ್ಕೆ ಆಗಮಿಸಲು ವೀಸಾಗೆ ಅರ್ಜಿ ಸಲ್ಲಿಸುವಾಗ 3 ಸ್ಥಳಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆದರೆ 2002ರಿಂದ 2007ರವರೆಗೆ ಪಾಕಿಸ್ತಾನದಲ್ಲಿ ಖುರ್ಷಿದ್ ಕಸೂರಿ ವಿದೇಶಾಂಗ ಸಚಿವರಾಗಿದ್ದಾಗ 7 ನಗರಗಳಿಗೆ ಭೇಟಿ ನೀಡಲು ನಾನು ವೀಸಾ ಪಡೆದಿದ್ದೆ" ಎಂದು ತಿಳಿಸಿದ್ದಾರೆ.

ಹಮೀದ್ ಅನ್ಸಾರಿ ಆಹ್ವಾನ: ಆಗಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ನೀಡಿದ ಆಹ್ವಾನದ ಮೇರೆಗೂ ಭಾರತಕ್ಕೆ ಬಂದಿದ್ದೆ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ಹಮೀದ್ ಅನ್ಸಾರಿ 2007 ರಿಂದ 2017 ರವರೆಗೆ ಭಾರತದ ಉಪ ರಾಷ್ಟ್ರಪತಿಯಾಗಿದ್ದರು. ಈ ಸಂದರ್ಭದಲ್ಲಿ ದೆಹಲಿ, ಬೆಂಗಳೂರು, ಚೆನ್ನೈ, ಪಾಟ್ನಾ ಮತ್ತು ಕೋಲ್ಕತ್ತಾ ಸೇರಿ ಐದು ಸ್ಥಳಗಳಿಗೆ ಭೇಟಿ ನೀಡಿದ್ದಾರೆ ಎಂದು ನುಸ್ರತ್ ಮಿರ್ಜಾ ಬಾಯ್ಬಿಟ್ಟಿದ್ದಾರೆ.

ದೆಹಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಭೇಟಿ: ನುಸ್ರತ್ ಹೇಳುವಂತೆ, 2011ರಲ್ಲಿ ಅವರು ದೆಹಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಫರುಲ್ ಇಸ್ಲಾಂ ಖಾನ್​ರನ್ನು ಭೇಟಿಯಾಗಿದ್ದರು.

ಇದನ್ನೂ ಓದಿ: ಲೈವ್​ ವರದಿ ಮಾಡುತ್ತಿದ್ದಾಗ ದುರ್ವರ್ತನೆ; ಬಾಲಕನ ಕೆನ್ನೆಗೆ ಬಾರಿಸಿದ ಪತ್ರಕರ್ತೆ

"ಭಾರತ ಮತ್ತು ಅದರ ದೃಷ್ಟಿಕೋನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೆ. ಆದರೆ ನಾಯಕತ್ವದ ಸಮಸ್ಯೆಯಿಂದಾಗಿ ಪಾಕಿಸ್ತಾನ ನಾನು ನೀಡಿದ ಮಾಹಿತಿಯ ಬಗ್ಗೆ ಗಮನ ಹರಿಸಿಲ್ಲ" ಎಂದು ಸಂದರ್ಶದನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಅವರೆಲ್ಲರೂ ನನ್ನ ಸ್ನೇಹಿತರು!: "ನಾನು ಭಾರತೀಯ ಮುಸ್ಲಿಮರು ವಾಸಿಸುವ ಪರಿಸ್ಥಿತಿಗಳನ್ನು ಅಧ್ಯಯನ ಮಾಡಿದ್ದೇನೆ. ಭಾರತದಲ್ಲಿ ಉರ್ದು ಪತ್ರಿಕೆಗಳ ಎಲ್ಲಾ ಸಂಪಾದಕರು ನನ್ನ ಸ್ನೇಹಿತರು. ಅನೇಕ ಸುದ್ದಿ ವಾಹಿನಿಗಳ ಮಾಲೀಕರೂ ಕೂಡಾ ಒಳ್ಳೆಯ ಸ್ನೇಹಿತರು. ನಾನು ಭಾರತಕ್ಕೆ ಹೋದಾಗಲೆಲ್ಲ ಅನೇಕ ಸಂದರ್ಶನಗಳನ್ನು ನೀಡಿದ್ದೇನೆ" ಎಂದು ಹೇಳಿದ್ದಾರೆ.

Last Updated : Jul 13, 2022, 10:35 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.