ETV Bharat / international

ಇಮ್ರಾನ್ ವಿರುದ್ಧ ತಿರುಗಿಬಿದ್ದ ಪಾಕ್ ಮಿಲಿಟರಿ; ಅದಕ್ಕಿವೆ 3 ಕಾರಣ!

author img

By

Published : May 28, 2023, 2:06 PM IST

ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಮತ್ತು ದೇಶದ ಮಿಲಿಟರಿ ಅಧಿಪತ್ಯ ನಡುವಿನ ಕಂದಕ ಈಗ ಬಹಳ ದೊಡ್ಡದಾಗಿದೆ. ಬಹುಶಃ ರಾಜಕೀಯವಾಗಿ ಮತ್ತೆ ಮೇಲೇಳುವುದು ಇಮ್ರಾನ್ ಅವರಿಗೆ ಕಷ್ಟಸಾಧ್ಯವೆಂದು ಹೇಳಲಾಗುತ್ತಿದೆ.

Why Pakistan's military establishment turned against its blue-eyed boy

ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಒಂದು ಸಮಯದಲ್ಲಿ ದೇಶದ ಮಿಲಿಟರಿ ಆಡಳಿತದೊಂದಿಗೆ ತುಂಬಾ ಸುಮಧುರ ಬಾಂಧವ್ಯ ಹೊಂದಿದ್ದರು. ಇಮ್ರಾನ್​ರನ್ನು ತನ್ನ ಮೆಚ್ಚಿನ ಬಂಟನನ್ನಾಗಿ ಮಾಡಿಕೊಂಡಿದ್ದ ಸೇನಾಪಡೆ ಅವರ ವಿರುದ್ಧವೇ ತಿರುಗಿ ಬಿದ್ದಿದ್ದು ಯಾಕೆ ಎಂಬ ವಿಷಯ ಬಹಳ ಕುತೂಹಲಕರವಾಗಿದೆ. ಇಮ್ರಾನ್ ಖಾನ್ ಮಿಲಿಟರಿಯೊಂದಿಗೆ ಎಷ್ಟು ಉತ್ತಮ ಬಾಂಧವ್ಯ ಹೊಂದಿದ್ದರೋ ಈಗ ಅದರೊಂದಿಗೆ ಅಷ್ಟೇ ತೀವ್ರಮಟ್ಟದ ದ್ವೇಷದ ಸಂಬಂಧ ಹೊಂದಿದ್ದಾರೆ.

ಒಂದೊಮ್ಮೆ ಇಮ್ರಾನ್ ಖಾನ್ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಇಡೀ ಮಿಲಿಟರಿ ಅಧಿಪತ್ಯವು ಅವರ ಬೆಂಬಲಿಗೆ ನಿಂತಿತ್ತು. ಇಮ್ರಾನ್​ರನ್ನು ತನ್ನ ನೀಲಿಗಣ್ಣಿನ ಹುಡುಗನನ್ನಾಗಿ ಮಿಲಿಟರಿ ಪರಿಗಣಿಸಿತ್ತು. ಆದರೆ ಕಾಲಚಕ್ರ ತಿರುಗಿದ್ದು, ಈಗ ಅದೇ ಮಿಲಿಟರಿ ಇಮ್ರಾನ್​ರನ್ನು ಎಲ್ಲ ರೀತಿಯಿಂದಲೂ ಮುಗಿಸಲು ನೋಡುತ್ತಿದೆ. ಪಾಕಿಸ್ತಾನದ ರಾಜಕೀಯ ಇತಿಹಾಸ ಬಲ್ಲವರಿಗೆ ಇದು ಆಶ್ಚರ್ಯದ ವಿಷಯ ಅನಿಸುವುದಿಲ್ಲ.

ಇಮ್ರಾನ್ ತಾವು ಪ್ರಧಾನಿಯಾಗುವ ಮುನ್ನ ಆಗಿನ ಸರ್ಕಾರದ ವಿರುದ್ಧ ವಿವಿಧ ರೀತಿಗಳಲ್ಲಿ ಪ್ರಬಲ ಹೋರಾಟ ನಡೆಸಿದ್ದರು. ಇಡೀ ದೇಶದಲ್ಲಿ ರ್ಯಾಲಿಗಳು, ಪ್ರತಿಭಟನೆಗಳು ಹಾಗೂ ರಾಜಕೀಯ ಸಭೆಗಳು ಹೀಗೆ ಹಲವಾರು ಹಂತಗಳಲ್ಲಿ ಇಮ್ರಾನ್ ಹೋರಾಟ ಮಾಡಿದ್ದರು. ಆಗ ಅವರ ಈ ಎಲ್ಲ ಹೋರಾಟಗಳಿಗೆ ಸ್ವತಃ ಮಿಲಿಟರಿ ಅಧಿಪತ್ಯ ಹಿಂದೆ ನಿಂತು ಅಗತ್ಯವಾದ ಎಲ್ಲ ರೀತಿಯ ಬೆಂಬಲವನ್ನು ನೀಡಿತ್ತು. ಇದೆಲ್ಲದರ ಪರಿಣಾಮದಿಂದ ಇಮ್ರಾನ್ ದೇಶದ ಹೀರೊ ಆಗಿಬಿಟ್ಟರು. ಇಮ್ರಾನ್ ಬಿಟ್ಟರೆ ಇನ್ನಾರೂ ದೇಶದ ಉದ್ಧಾರ ಮಾಡಲು ಸಾಧ್ಯವೇ ಇಲ್ಲ ಎಂದು ಜನ ನಂಬಿದರು. ಆದರೆ ಮಿಲಿಟರಿ ಬೆಂಬಲವಿಲ್ಲದಿದ್ದರೆ ಇದಾವುದೂ ಸಾಧ್ಯವಾಗುತ್ತಿರಲಿಲ್ಲ ಎಂಬುದು ಕೂಡ ಸತ್ಯ.

2018ರಲ್ಲಿ ಚುನಾವಣೆಗಳಲ್ಲಿ ಅಭೂತಪೂರ್ವ ಜಯ ಸಾಧಿಸಿದ ಇಮ್ರಾನ್ ದೇಶದ ಪ್ರಧಾನಿ ಹುದ್ದೆಯ ಚುಕ್ಕಾಣಿ ಹಿಡಿದರು. ಆದರೆ ವಿರೋಧ ಪಕ್ಷಗಳು ಇಮ್ರಾನ್​ ಅವರನ್ನು ಸೆಲೆಕ್ಟೆಡ್ ಪ್ರಧಾನಿ (ಸೇನೆಯಿಂದ ಆಯ್ಕೆಯಾದ ಪ್ರಧಾನಿ) ಎಂದು ಅಪಹಾಸ್ಯ ಮಾಡಿದವು. ಆಗಿನ ಹಾಲಿ ಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ಕಮರ್ ಜಾವೇದ್ ಬಜ್ವಾ, ಗುಪ್ತಚರ ಸಂಸ್ಥೆಗಳು ಮತ್ತು ಇಡೀ ಸೇನಾಧಿಪತ್ಯದ ಬೆಂಬಲ ತಮಗಿತ್ತು ಎಂದು ಇಮ್ರಾನ್ ಸ್ವತಃ ಅನೇಕ ಬಾರಿ ಹೇಳಿಕೊಂಡಿದ್ದರು.

ಆದರೆ ಖಾನ್ ಅವರ ಸರ್ಕಾರದ ಸಮಯದಲ್ಲಿ, ಅವರ ಕೆಲವು ನಿರ್ಧಾರಗಳು ಮಿಲಿಟರಿ ಅಧಿಪತ್ಯ ಮತ್ತು ಅವರ ನಡುವೆ ದೊಡ್ಡ ಬಿರುಕುಗಳನ್ನು ಸೃಷ್ಟಿಸಿದವು. ಇದರಿಂದ ಮಿಲಿಟರಿ ಅಧಿಪತ್ಯವು ಅವರ ವಿರುದ್ಧ ತಿರುಗಿ ಬೀಳಲು ಕಾರಣವಾಯಿತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಖಾನ್ ಸರ್ಕಾರದ ಇಂಥ ನಿರ್ಧಾರಗಳ ಬಗ್ಗೆ ನೋಡುವುದಾದರೆ, ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC)ನಲ್ಲಿನ ಅನೇಕ ಯೋಜನೆಗಳನ್ನು ರದ್ದುಗೊಳಿಸುವ ಒಂದು ನಿರ್ಧಾರ ಬಹಳ ಪ್ರಮುಖವಾಗಿ ಕಂಡು ಬರುತ್ತದೆ. ಪಾಕಿಸ್ತಾನದ ಕಷ್ಟದ ಆರ್ಥಿಕ ಸಮಯದಲ್ಲಿ ಅದರ ಕೈಹಿಡಿದ ಚೀನಾ ಇದರಿಂದ ವ್ಯಗ್ರಗೊಂಡಿತು.

ಸೇನೆಯು ಖಾನ್ ವಿರುದ್ಧ ತಿರುಗಿ ಬೀಳಲು ಎರಡನೇ ಕಾರಣವೆಂದರೆ ಅರಬ್ ರಾಷ್ಟ್ರಗಳ ಬಗ್ಗೆ ವಿಶೇಷವಾಗಿ ಸೌದಿ ಅರೇಬಿಯಾ ಬಗ್ಗೆ ಅವರು ತೋರಿದ ಅಸಡ್ಡೆ. ಮುಸ್ಲಿಂ ಜಗತ್ತನ್ನು ಪ್ರತಿನಿಧಿಸಲು ಟರ್ಕಿ ಮತ್ತು ಮಲೇಷ್ಯಾದೊಂದಿಗೆ ಜಂಟಿ ಮೈತ್ರಿಯನ್ನು ರಚಿಸುವ ಖಾನ್ ಅವರ ಘೋಷಣೆಯಿಂದ ಪಾಕಿಸ್ತಾನದ ಮಿಲಿಟರಿ ಅಧಿಪತ್ಯ ಕೆರಳಿ ಕೆಂಡವಾಯಿತು. ಸೌದಿ ಅರೇಬಿಯಾ ಈ ವಿಷಯದ ಬಗ್ಗೆ ಪ್ರಬಲವಾದ ನಿಲುವು ತೆಗೆದುಕೊಂಡಿತು ಮತ್ತು ಅಂಥ ಯಾವುದೇ ಪ್ರಯತ್ನಗಳನ್ನು ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಖಾನ್​​ಗೆ ಎಚ್ಚರಿಕೆ ನೀಡಿತು.

ಮೂರನೇ ಕಾರಣವೆಂದರೆ ಪ್ರತಿಪಕ್ಷಗಳು ಮೈತ್ರಿ ಮಾಡಿಕೊಂಡು ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅವರನ್ನು ಪದಚ್ಯುತಗೊಳಿಸಲು ನಿರ್ಧರಿಸಿದ ಸಮಯದಲ್ಲಿ ಖಾನ್ ಅವರ ಅಹಂಕಾರದ ವರ್ತನೆ.

ತಮ್ಮ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದನ್ನು ತಡೆಗಟ್ಟಬೇಕೆಂದು ಬಾಜ್ವಾ ಅವರಿಗೆ ಖಾನ್ ಕೇಳಿಕೊಂಡಿದ್ದರು. ಆದರೆ ಪ್ರತಿಪಕ್ಷಗಳೊಂದಿಗೆ ಸೌಹಾರ್ದಯುತವಾಗಿ ಮಾತನಾಡಿ ವಿಷಯ ಪರಿಹರಿಸಿಕೊಳ್ಳುವಂತೆ ಬಾಜ್ವಾ ಹೇಳಿದ್ದರು. ಆದರೆ ಇದಕ್ಕೊಪ್ಪದ ಖಾನ್ ವಿಪಕ್ಷಗಳೊಂದಿಗೆ ಮಾತುಕತೆಗೆ ಮುಂದಾಗಲಿಲ್ಲ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಮಿಲಿಟರಿಯನ್ನೇ ಅವಲಂಬಿಸಿದರು. ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆಯಾಗದಂತೆ ತಡೆದರೆ ಅನಿರ್ದಿಷ್ಟಾವಧಿಗೆ ಸೇನಾಪಡೆ ಮುಖ್ಯಸ್ಥನನ್ನಾಗಿ ಸೇವಾ ವಿಸ್ತರಣೆ ನೀಡುವುದಾಗಿ ಬಾಜ್ವಾರಿಗೆ ಖಾನ್ ಆಮಿಷ ಒಡ್ಡಿದರು. ಆದರೆ ಇದಕ್ಕೆ ವಿಫಲವಾದಲ್ಲಿ ಬಾಜ್ವಾರನ್ನು ಹುದ್ದೆಯಿಂದ ಪದಚ್ಯುತಗೊಳಿಸುವುದಾಗಿಯೂ ಅವರಿಗೆ ಬೆದರಿಕೆ ಹಾಕಿದ್ದರು.

ಆಗ ಬಾಜ್ವಾ ಅವರು ಖಾನ್‌ರಿಂದ ದೂರವಾಗಿದ್ದು ಮಾತ್ರವಲ್ಲದೆ, ಸಮ್ಮಿಶ್ರ ಸರ್ಕಾರದ ಪಕ್ಷಗಳು ಪಕ್ಷಾಂತರಗೊಳ್ಳುವುದರೊಂದಿಗೆ ಅವರ ಪಕ್ಷವು ತುಂಡುಗಳಾಗಿ ಒಡೆಯಲು ಅವಕಾಶ ನೀಡುವ ಮೂಲಕ ಖಾನ್ ಅವರನ್ನು ಮತ್ತಷ್ಟು ದುರ್ಬಲಗೊಳಿಸಿದರು. ಇದರ ಪರಿಣಾಮವಾಗಿ ಅವಿಶ್ವಾಸ ನಿರ್ಣಯದ ಯಶಸ್ವಿ ಮತದಾನವು ಅವರನ್ನು ಅಧಿಕಾರದಿಂದ ಹೊರಹಾಕಿತು. ಈಗ ಬಾಜ್ವಾ ನಿವೃತ್ತಿ ಹೊಂದುವುದರೊಂದಿಗೆ ಮತ್ತು ಜನರಲ್ ಅಸಿಮ್ ಮುನೀರ್ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಸೇನಾ ಅಧಿಪತ್ಯದೊಂದಿಗೆ ಯಾವುದೇ ವಿಶ್ವಾಸದ ಒಪ್ಪಂದ ಮಾಡಿಕೊಳ್ಳುವ ಖಾನ್ ಅವರ ಭರವಸೆ ಕೊನೆಗೊಂಡಿದೆ.

ಸದ್ಯದ ಸೇನಾಪಡೆ ಮುಖ್ಯಸ್ಥ ಅಸೀಮ್ ಮುನೀರ್ ಅವರೊಂದಿಗಿನ ದೀರ್ಘಕಾಲದ ಭಿನ್ನಾಭಿಪ್ರಾಯಗಳು, ಮುನೀರ್ ಅವರ ನೇಮಕಕ್ಕೆ ತಡೆ ಒಡ್ಡಿದ್ದು ಮತ್ತು ತೀರಾ ಇತ್ತೀಚೆಗೆ ಮೇ 9 ರಂದು ಇಮ್ರಾನ್ ಬೆಂಬಲಿಗರು ಸೇನಾಪಡೆಯ ಕಚೇರಿಗಳ ಮೇಲೆ ದಾಳಿ ಮಾಡಿದ ಘಟನೆಗಳು ಇಮ್ರಾನ್ ಖಾನ ಅವರ ರಾಜಕೀಯ ಜೀವನದ ಅಂತ್ಯಕ್ಕೆ ಮುನ್ನುಡಿ ಎಂದೇ ಹೇಳಬಹುದು. ಈಗ ಒಬ್ಬಂಟಿಯಾಗುತ್ತಿರುವ ಇಮ್ರಾನ್ ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಸಲು ಬಯಸುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ ಇದಾವುದೂ ಫಲ ನೀಡುತ್ತಿಲ್ಲ.

ಖಾನ್ ಅವರು ಮಿಲಿಟರಿ ಅಧಿಪತ್ಯದ ಅತ್ಯುತ್ತಮ ರಾಜಕೀಯ ಮುಖವಾಡವಾಗಿದ್ದರು... ಆದರೆ ಅವರನ್ನು ಆಯ್ಕೆ ಮಾಡಿದ್ದು ಮಿಲಿಟರಿಯ ಬಹುದೊಡ್ಡ ತಪ್ಪು ನಿರ್ಧಾರವೂ ಆಗಿತ್ತು.

ಇದನ್ನೂ ಓದಿ : ಬಹಿರಂಗವಾಗಿ ಕಾಣಿಸಿಕೊಂಡ ಕಿಮ್ ಜಾಂಗ್​​ ಪುತ್ರಿ: ಮುಂದಿನ ಉತ್ತರಾಧಿಕಾರಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.