ETV Bharat / international

ಗುಂಡಿನ ದಾಳಿ ನಡೆದ ಸ್ಥಳದಿಂದಲೇ ಯಾತ್ರೆ ಪುನಾರಂಭ: ಇಮ್ರಾನ್​ ಖಾನ್​

author img

By

Published : Nov 6, 2022, 8:16 PM IST

ಹತ್ಯೆಗೆ ಗುಂಡಿನ ದಾಳಿ ನಡೆದ ವಜೀರಾಬಾದ್​ನಿಂದಲೇ ಯಾತ್ರೆ ಪುನಾರಂಭಿಸಲಾಗುವುದು ಎಂದು ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್ ಹೇಳಿದ್ದಾರೆ.

pak-ex-pm-imran-khan-march-resume
ಇಮ್ರಾನ್​ ಖಾನ್​

ಇಸ್ಲಾಮಾಬಾದ್: ಹತ್ಯೆ ಮಾಡಲು ಯತ್ನಿಸಿ ಗುಂಡು ಹಾರಿಸಲಾದ ಜಾಗದಿಂದಲೇ ಯಾತ್ರೆಯನ್ನು ಮರು ಆರಂಭಿಸಲು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಸಜ್ಜಾಗಿದ್ದಾರೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಇಮ್ರಾನ್​ ಮಂಗಳವಾರದಿಂದ ಯಾತ್ರೆಗೆ ಮರು ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ.

ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಇಮ್ರಾನ್​ ಖಾನ್​ ಲಾಹೋರ್​ನಿಂದ ಇಸ್ಲಾಮಾಬಾದ್​ಗೆ ಯಾತ್ರೆ ಆರಂಭಿಸಿದ್ದಾರೆ. ಪಾಕಿಸ್ತಾನದ ಪಂಜಾಬ್​ನ ವಜೀರಾಬಾದ್​ನಲ್ಲಿ ರ‍್ಯಾಲಿ ಸಾಗುತ್ತಿದ್ದಾಗ 2 ದಿನಗಳ ಹಿಂದೆ ದುಷ್ಕರ್ಮಿಯೊಬ್ಬ ಇಮ್ರಾನ್​ ಮೇಲೆ ಗುಂಡಿನ ದಾಳಿ ನಡೆಸಿದ್ದ. ಇದರಿಂದ 4 ಗುಂಡುಗಳು ಇಮ್ರಾನ್​ ಕಾಲು ಹೊಕ್ಕು, ಆಪ್ತ ಸಹಾಯಕ ಕೂಡ ಗಾಯಗೊಂಡಿದ್ದ. ಅಲ್ಲದೇ, ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಗಾಯಗೊಂಡಿರುವ ಇಮ್ರಾನ್​ ಖಾನ್​ ನನ್ನ ಹತ್ಯೆಗೆ ಸರ್ಕಾರವೇ ರೂಪಿಸಿದ ಸಂಚಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಮಂಗಳವಾರದಿಂದ ರ‍್ಯಾಲಿ ಪುನಾರಂಭ: ಇನ್ನು ದಾಳಿ ನಡೆದ ವಜೀರಾಬಾದ್​ನಿಂದಲೇ ಯಾತ್ರೆಯನ್ನು ಮಂಗಳವಾರದಿಂದ ಪುನಾರಂಭಿಸಲಾಗುವುದು. ಮುಂದಿನ 10ರಿಂದ 14 ದಿನಗಳಲ್ಲಿ ನಮ್ಮ ಯಾತ್ರೆಯು ವೇಗ ಪಡೆದು ರಾವಲ್ಪಿಂಡಿ ತಲುಪಲಿದೆ ಎಂಬ ಇಮ್ರಾನ್​ ಖಾನ್ ಹೇಳಿಕೆಯನ್ನು ಪಕ್ಷ ಟ್ವಿಟರ್​​ನಲ್ಲಿ ಹಂಚಿಕೊಂಡಿದೆ.

ಶಾಂತಿ-ರಕ್ತಸಿಕ್ತ ಕ್ರಾಂತಿ: ಪಾಕಿಸ್ತಾನದ ಜನರಿಗೆ ಕೇವಲ ಎರಡು ಆಯ್ಕೆಗಳಿವೆ. ಒಂದು ಶಾಂತಿಯುತ, ಮತ್ತೊಂದು ರಕ್ತಸಿಕ್ತ ಕ್ರಾಂತಿ. ಇದು ಬಿಟ್ಟು ಮೂರನೇ ಆಯ್ಕೆಯಿಲ್ಲ. ಜನರು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲಿ. ನಮ್ಮ ಪಕ್ಷ ಜನರ ಮತದಾನದಿಂದ ಆಯ್ಕೆಯಾಗಿ ಶಾಂತಿಯುತವಾಗಿ ಅಧಿಕಾರ ನಡೆಸಲಿದೆ. ಶ್ರೀಲಂಕಾ, ಇರಾನ್​ನಲ್ಲಿ ನಡೆದ ದಂಗೆಗಳು ಪಾಕಿಸ್ತಾನದಲ್ಲಿ ನಡೆಯುವ ಕಾಲ ಸನ್ನಿಹಿತವಾಗಿದೆ ಎಂದು ಇಮ್ರಾನ್ ಖಾನ್ ಭಾಷಣದಲ್ಲಿ ಹೇಳಿದ್ದಾರೆ.

ದೇಶದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ರಾಜಕೀಯ ಬದಲಾವಣೆ ತರುವುದು ಅನಿವಾರ್ಯವಾಗಿದೆ. ಈಗಿನ ಸರ್ಕಾರ ರಕ್ತಸಿಕ್ತ ಕ್ರಾಂತಿಗೆ ನಾಂದಿ ಹಾಡಿದೆ. ಅದನ್ನು ನಮ್ಮ ಪಕ್ಷ ವಿರೋಧಿಸುತ್ತಿದೆ. ಜನರು ಯಾವ ಕಡೆ ಸೇರಬೇಕು ಎಂಬುದನ್ನು ನಿರ್ಧರಿಸಿ ಎಂದಿದ್ದಾರೆ.

ಓದಿ: ಪ್ರಧಾನಿ ನಿರ್ದೇಶನದ ಮೇಲೆ ನನ್ನ ಹತ್ಯೆ ಯತ್ನ: ಇಮ್ರಾನ್​ ಖಾನ್​ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.