ನವದೆಹಲಿ: ಸಿಖ್ ಸಮುದಾಯಕ್ಕೆ ಸೇರಿದ್ದ 12 ಬ್ರಿಟಿಷ್ ಸೇನಾ ತಂಡ ಮತ್ತು ರಾಯಲ್ ಏರ್ಪೋರ್ಸ್(RAF) ಅಧಿಕಾರಿಗಳ ನಿಯೋಗ ಜೂನ್ 28ರಂದು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಎಕ್ಸ್ ನಂಕಾನಾ 2022(Ex Nankana 2022) ಎಂಬ ಹೆಸರಿನಲ್ಲಿ ಪಾಕ್ ಪ್ರವಾಸ ಕೈಗೊಂಡು, ಅಲ್ಲಿನ ಸೇನಾ ಮುಖ್ಯಸ್ಥರ ಭೇಟಿ ಮಾಡಿದೆ ಎಂದು ಭದ್ರತಾ ಸಂಸ್ಥೆಯ ಉನ್ನತ ಮೂಲ ಈಟಿವಿ ಭಾರತ್ಗೆ ಮಾಹಿತಿ ನೀಡಿದೆ.
ಈಟಿವಿ ಭಾರತ್ಗೆ ಮಾಹಿತಿ ನೀಡಿರುವ ಉನ್ನತ ಮೂಲದ ಅಧಿಕಾರಿಗಳ ಪ್ರಕಾರ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಬಾಜ್ವಾ ಅವರೊಂದಿಗೆ ನಿಯೋಗ ಸಂವಾದ ನಡೆಸಿದ್ದು, ಈ ವೇಳೆ ಪಾಕಿಸ್ತಾನದಲ್ಲಿ ಎಲ್ಲ ಧರ್ಮಗಳಿಗೆ ಗೌರವವಿದೆ ಎಂಬ ಮಾತು ಆಡಿರುವುದಾಗಿ ತಿಳಿದು ಬಂದಿದೆ.
ಹಿಂದೂಗಳು, ಸಿಖ್ಖರು ಮತ್ತು ಕ್ರಿಶ್ಚಿಯನ್ನರಂತಹ ಅಲ್ಪಸಂಖ್ಯಾತರ ವಿರುದ್ಧ ವ್ಯಾಪಕವಾದ ಹಿಂಸಾಚಾರದ ಘಟನೆಗಳ ಬಗ್ಗೆ ಮಾತನಾಡದಿರುವಲ್ಲಿ ಪಾಕಿಸ್ತಾನ ಈಗಾಗಲೇ ಹೊಸ ಪ್ರವೃತ್ತಿಗೆ ಒಳಗಾಗಿದೆ ಎಂದು ಹೇಳಿದೆ.
ಇದನ್ನೂ ಓದಿರಿ: ನ್ಯೂಸ್ ಚಾನೆಲ್ನ ಆ್ಯಂಕರ್ ರೋಹಿತ್ ರಂಜನ್ ಅರೆಸ್ಟ್
1897ರ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ 21 ಸಿಖ್ರ ಸೈನಿಕರ ಶೌರ್ಯ ಸ್ಮರಿಸಿದ್ದು, ನಿಯೋಗ ಇಂಡೋ-ಪಾಕ್ ಗಡಿಯ ಸಮೀಪವಿರುವ ಅನೇಕ ಸ್ಥಳ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿತು. ಇದರಲ್ಲಿ ಕರ್ತಾರ್ಪುರ ಕಾರಿಡಾರ್, ಲಾಹೋರ್ ಕೋಟೆ, ಅಲ್ಲಾಮಾ ಇಕ್ಬಾಲ್ ಸಮಾಧಿ, ಬಾದ್ಶಾಹಿ ಮಸೀದಿ, ಗುರುದ್ವಾರ್ ದರ್ಬಾರ್ ಸಾಹಿಬ್ ಮತ್ತು ಖೈಬರ್ ಪಖ್ತುನ್ ಖ್ವಾ ಸಹ ಸೇರಿಕೊಂಡಿದೆ.
ಜೂನ್ ತಿಂಗಳು ಸಿಖ್ಖರಿಗೆ ನೋವಿನ ತಿಂಗಳಾಗಿದ್ದು, 1984ರ ಜೂನ್ ತಿಂಗಳಲ್ಲಿ ನಡೆದ ಕಹಿ ಘಟನೆ ನೆನಪಿಸಿಕೊಳ್ಳುತ್ತಾರೆ.