ETV Bharat / international

ಅಣ್ವಸ್ತ್ರ ಪರೀಕ್ಷೆಗೆ ಉತ್ತರ ಕೊರಿಯಾ ಸಿದ್ಧತೆ.. ಟಾರ್ಗೆಟ್‌ ಅಮೆರಿಕ!? - ಕಿಂಗ್‌ ಜಾಂಗ್‌ ಉನ್‌

ಕಳೆದ ವಾರ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯೊಂದಿಗೆ ಉತ್ತರ ಕೊರಿಯಾ ಈ ವರ್ಷ ಇದುವರೆಗೆ ಒಟ್ಟು 12 ಪರೀಕ್ಷೆಗಳನ್ನು ನಡೆಸಿದೆ. ದೂರದ ಗುರಿಯನ್ನು ಮುಟ್ಟಬಲ್ಲ ಹ್ವಾಸಂಗ್-17 ಕ್ಷಿಪಣಿಯನ್ನು ಕಳೆದ ಶುಕ್ರವಾರ ಉಡಾವಣೆ ಮಾಡಲಾಗಿತ್ತು. ಇದು 6,248 ಕಿ.ಮೀ. ಎತ್ತರವನ್ನು ತಲುಪಿ 90 ಕಿ.ಮೀ ದೂರದಲ್ಲಿ ಗುರಿ ಮುಟ್ಟಿದೆ..

north koreas kim vows to develop more powerful means of attack
ಅಣ್ವಸ್ತ್ರ ಪರೀಕ್ಷೆಗೆ ಉತ್ತರ ಕೊರಿಯಾ ಸಿದ್ಧತೆ..! ಟಾರ್ಗೆಟ್‌ ಅಮೆರಿಕ..?
author img

By

Published : Mar 28, 2022, 5:32 PM IST

ಪ್ಯೊಂಗ್ಯಾಂಗ್ : ಶಸ್ತ್ರಾಸ್ತ್ರ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಹಿಂದೆ ಬೀಳುವುದೇ ಇಲ್ಲ ಎಂದು ಉತ್ತರ ಕೆೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಪುನರುಚ್ಚರಿಸಿದ್ದಾರೆ. ಯಾರೂ ವಿರೋಧಿಸಲು ಸಾಧ್ಯವಾಗದ ಅಪಾರ ಸೇನಾ ಸಾಮರ್ಥ್ಯ ಇದ್ದಾಗ ಮಾತ್ರ ಯುದ್ಧವನ್ನು ತಡೆಯಲು ಸಾಧ್ಯ ಎಂದಿದ್ದಾರೆ.

ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆ-ಕೆಸಿಎನ್‌ಎಗೆ ಮಾಹಿತಿ ನೀಡಿರುವ ಕಿಮ್‌, ಅಪಾರ ಸೇನಾ ಸಾಮರ್ಥ್ಯ ಇದ್ದಾಗ ಮಾತ್ರ ಸಾಮ್ರಾಜ್ಯ ಶಾಹಿಗಳ ಬೆದರಿಕೆಗಳನ್ನು ತಡೆಯಲು ಸಾಧ್ಯ ಎಂದು ಹೇಳಿದ್ದಾರೆ. ಕಿಮ್‌ ಅವರ ಈ ಹೇಳಿಕೆ ಅಮೆರಿಕಕ್ಕೆ ಪರೋಕ್ಷವಾಗಿ ಎಚ್ಚರಿಕೆ ಎನ್ನಲಾಗಿದೆ. ಉತ್ತರ ಕೊರಿಯಾ ಇತ್ತೀಚೆಗೆ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿತ್ತು. ಇದರಿಂದಾಗಿ ಉತ್ತರ ಕೊರಿಯಾ ಶೀಘ್ರದಲ್ಲೇ ಪರಮಾಣು ಪರೀಕ್ಷೆಯನ್ನು ಪ್ರಾರಂಭಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ವಾರ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯೊಂದಿಗೆ ಉತ್ತರ ಕೊರಿಯಾ ಈ ವರ್ಷ ಇದುವರೆಗೆ ಒಟ್ಟು 12 ಪರೀಕ್ಷೆಗಳನ್ನು ನಡೆಸಿದೆ. ದೂರದ ಗುರಿಯನ್ನು ಮುಟ್ಟಬಲ್ಲ ಹ್ವಾಸಂಗ್-17 ಕ್ಷಿಪಣಿಯನ್ನು ಕಳೆದ ಶುಕ್ರವಾರ ಉಡಾವಣೆ ಮಾಡಲಾಗಿತ್ತು. ಇದು 6,248 ಕಿ.ಮೀ. ಎತ್ತರವನ್ನು ತಲುಪಿ 90 ಕಿ.ಮೀ ದೂರದಲ್ಲಿ ಗುರಿ ಮುಟ್ಟಿದೆ.

ಜಪಾನ್ ಮತ್ತು ಕೊರಿಯನ್ ಪರ್ಯಾಯ ದ್ವೀಪದ ನಡುವಿನ ನೀರಿನಲ್ಲಿ 67 ನಿಮಿಷಗಳ ಕಾಲ ಪ್ರಯಾಣಿಸಿ ಗುರಿಯನ್ನು ಮುಟ್ಟಿದೆ. ಕ್ಷಿಪಣಿಯನ್ನು ಲಂಬವಾಗಿ ಉಡಾವಣೆ ಮಾಡಿದರೆ 15,000 ಕಿಲೋಮೀಟರ್‌ಗಳವರೆಗೆ ಚಲಿಸಬಹುದು. ಅಮೆರಿಕದ ಮುಖ್ಯ ಭೂಭಾಗದಲ್ಲಿ ಎಲ್ಲಿ ಬೇಕಾದರೂ ತಲುಪ ಬಹುದಾದ ಕ್ಷಿಪಣಿಯನ್ನು ಉತ್ತರ ಕೊರಿಯಾ ವಿನ್ಯಾಸಗೊಳಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2019ರಲ್ಲಿ ಪರಮಾಣು ನಿಶ್ಯಸ್ತ್ರೀಕರಣದ ಕುರಿತು ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರೊಂದಿಗೆ ಕಿಮ್ ಜಾಂಗ್‌ ಉನ್‌ ಮಾತುಕತೆ ಅರೆಮನಸ್ಸಿನಿಂದಲೇ ಅಂತ್ಯಗೊಂಡಿತ್ತು. ಜೋ ಬೈಡನ್‌ ಆಡಳಿತವು ಉತ್ತರ ಕೊರಿಯಾವನ್ನು ಬೇಷರತ್ತಾಗಿ ಮಾತುಕತೆಗೆ ಬರುವಂತೆ ಆಹ್ವಾನಿಸಿದೆ. ಆದರೆ, ಮೊದಲು ತನ್ನ ದೇಶದ ಮೇಲಿನ ಹಗೆತನವನ್ನು ಅಮೆರಿಕ ಬಿಡಬೇಕೆಂದು ಉತ್ತರ ಕೊರಿಯಾ ಹೇಳಿದೆ.

ಇದನ್ನೂ ಓದಿ: ರಷ್ಯಾ - ಉಕ್ರೇನ್​​ ಯುದ್ಧ: ಟರ್ಕಿಯಲ್ಲಿ ಮುಂದಿನ ಸುತ್ತಿನ ಶಾಂತಿ ಮಾತುಕತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.