ETV Bharat / international

ಪಾಕ್​ನ ಯಾವೊಬ್ಬ ಪ್ರಧಾನಿಯೂ ಅಧಿಕಾರವಧಿ ಪೂರ್ಣಗೊಳಿಸಿಲ್ಲ! ಈ ಪಟ್ಟಿ ಸೇರ್ತಾರಾ ಇಮ್ರಾನ್ ಖಾನ್‌? - No Pakistan prime minister Completed A Full Term.

ಪಾಕಿಸ್ತಾನದಲ್ಲಿ ರಾಜಕೀಯ ಹೊಯ್ದಾಟ ನಡೆಯುತ್ತಿದೆ. ಪ್ರಧಾನಿ ಇಮ್ರಾನ್​ ಖಾನ್​ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ. ಇದರ ಹೊರತಾಗಿಯೂ ಕೂಡಾ, ಈವರೆಗೂ ಪಾಕ್​ನಲ್ಲಿ ಯಾವೊಬ್ಬ ಪ್ರಧಾನಿಯೂ ತನ್ನ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ ಅನ್ನೋದು ಇಲ್ಲಿ ಗಮನಾರ್ಹ.

pakistan-prime-minister
ಇಮ್ರಾನ್​ ಖಾನ್
author img

By

Published : Mar 31, 2022, 7:34 PM IST

ನವದೆಹಲಿ: ಪಾಕಿಸ್ತಾನ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಈಗ ರಾಜಕೀಯವಾಗಿಯೂ ನರಳುತ್ತಿದೆ. ಈಗಿನ ಪ್ರಧಾನಿ ಇಮ್ರಾನ್​ ಖಾನ್​ ಸರ್ಕಾರ ಭಾರಿ ಪ್ರಮಾಣದ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದು, ಇಮ್ರಾನ್​ ಅಧಿಕಾರ ಕಳೆದುಕೊಳ್ಳುವ ಅಂಚಿನಲ್ಲಿದ್ದಾರೆ. ಹೀಗೊಂದು ವೇಳೆ ಹಾಲಿ ಪ್ರಧಾನಿ ಅಧಿಕಾರದಿಂದ ಪದಚ್ಯುತಗೊಂಡಲ್ಲಿ ವಿಶೇಷ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಅದೇನೆಂದರೆ, ಪಾಕಿಸ್ತಾನ ಅಸ್ತಿತ್ವಕ್ಕೆ ಬಂದ ಬಳಿಕ ಈವರೆಗೂ ಯಾವೊಬ್ಬ ಪ್ರಧಾನಿಯೂ ತಮ್ಮ ಪೂರ್ಣಾವಧಿಯನ್ನು ಮುಗಿಸಿಲ್ಲ!. ಇಮ್ರಾನ್​ ಖಾನ್​ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ.

ಪಾಕಿಸ್ತಾನ ಈವರೆಗೂ 4 ಬಾರಿ ಪ್ರಜಾಪ್ರಭುತ್ವ ಆಡಳಿತವನ್ನು ಕಳೆದುಕೊಂಡು ಸೇನಾಡಳಿತಕ್ಕೆ ಒಳಪಟ್ಟಿದೆ. ಅಲ್ಲದೇ ಈವರೆಗೂ 19 ಪ್ರಧಾನಿಗಳನ್ನು ಕಂಡಿದೆ. ಆದರೆ, ಯಾರೂ ಕೂಡ ಅವರ ಅಧಿಕಾರವನ್ನು ಪೂರ್ಣವಾಗಿ ಮುಗಿಸಿಲ್ಲ ಎಂಬುದೇ ಸೋಜಿಗದ ಸಂಗತಿ.

1947ರಲ್ಲಿ ಭಾರತದಿಂದ ಇಬ್ಭಾಗವಾಗಿ ಪ್ರತ್ಯೇಕ ರಾಷ್ಟ್ರವಾದ ಪಾಕಿಸ್ತಾನದ ಮೊದಲ ಪ್ರಧಾನಿಯಾಗಿ ಲಿಯಾಖತ್​ ಅಲಿ ಖಾನ್​ ಆಯ್ಕೆಯಾದರು. ಅವರು 4 ವರ್ಷ 63 ದಿನಗಳು ಪ್ರಧಾನಿಯಾಗಿ ಆಳ್ವಿಕೆ ಮಾಡಿದ್ದಾರೆ. ಇದಾದ ಬಳಿಕ ಸೇನಾ ಅಧಿಪತ್ಯ ಮುಂದುವರೆದು ಯಾವೊಬ್ಬ ಪ್ರಧಾನಿಯೂ ಸುಭಿಕ್ಷವಾಗಿ ಅಧಿಕಾರ ನಡೆಸಿಲ್ಲ.

ದೇಶದ ಸಂವಿಧಾನವೇ ರದ್ದು: 1950 ರಲ್ಲಿ ನಾಗರಿಕ ದಂಗೆಯ ಬಳಿಕ ಆಗಿನ ಅಧ್ಯಕ್ಷ ಇಸ್ಕಂದರ್​ ಮಿರ್ಜಾ ಸಂವಿಧಾನವನ್ನೇ ರದ್ದು ಮಾಡಿ, ಸೇನಾಡಳಿತವನ್ನು ಹೇರಿದ್ದರು. 13 ವರ್ಷಗಳ ಸೇನಾಡಳಿತದ ನಂತರ ಜುಲ್ಫಿಕರ್​ ಅಲಿ ಭುಟ್ಟೋ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮತ್ತೆ ಸಂವಿಧಾನವನ್ನು ಅಂಗೀಕರಿಸಿದರು. ತದನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಧಾನಿಯಾದರು. ಇವರೂ ಕೂಡ 3 ವರ್ಷಗಳ ಅಧಿಕಾರ ನಡೆಸಿ ಪದತ್ಯಾಗ ಮಾಡಬೇಕಾಯಿತು.

1977ರಲ್ಲಿ ನಡೆದ ಮತ್ತೊಂದು ನಾಗರಿಕ ದಂಗೆಯಲ್ಲಿ ಸೇನಾಧಿಕಾರಿಯಾಗಿದ್ದ ಜನರಲ್ ಜಿಯಾ-ಉಲ್-ಹಕ್ ಪದಚ್ಯುತರಾದರು. ಈ ವೇಳೆ ಜುಲ್ಫೀಕರ್​ ಅಲಿ ಭುಟ್ಟೋ ಅವರ ಪುತ್ರಿ ಬೆನಜೀರ್ ಭುಟ್ಟೋ ಪ್ರಧಾನಿಗಳಾಗಿ ಆಯ್ಕೆಯಾದರು. ಇವರ ಅಧಿಕಾರವು ಕೂಡ 3 ವರ್ಷದಲ್ಲಿ ಕೊನೆಗೊಂಡಿತು. ಇದಕ್ಕೆ ಕಾರಣ 1990 ರಲ್ಲಿ ಅಂದಿನ ಅಧ್ಯಕ್ಷರು ಸಂಸತ್ತನ್ನು ವಿಸರ್ಜಿಸಿದ್ದರು. ಇದರಿಂದ ಬೆನಜೀರ್​ ಭುಟ್ಟೋ ಅಧಿಕಾರ ಕಳೆದುಕೊಂಡಿದ್ದರು.

ಈ ವೇಳೆ ರಾಜಕೀಯದಲ್ಲಿ ಬೆಳೆದುಕೊಂಡ ನವಾಜ್​ ಷರೀಫ್​ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಆರಂಭಿಸಿ ಜನಮತಗಳಿಸಿದ ಬಳಿಕ ಅಧಿಕಾರಕ್ಕೆ ಬಂದರು. 3 ವರ್ಷಗಳ ತರುವಾಯ ಮತ್ತೆ ಪಾಕಿಸ್ತಾನ ಸೇನೆ ಒತ್ತಡ ಹೇರಿ ಷರೀಫ್​ರನ್ನು ಅಧಿಕಾರಿ ಕಿತ್ತೆಸೆಯಿತು. 1993 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬೆನಜೀರ್​ ಭುಟ್ಟೋ ದೇಶವನ್ನು ಮುನ್ನಡೆಸುವ ಅವಕಾಶ ಪಡೆದುಕೊಂಡರು.

ಮತ್ತೆ ಪ್ರಜಾಪ್ರಭುತ್ವ ಸರ್ಕಾರ ಅಸ್ತಿತ್ವಕ್ಕೆ: 1996 ರಲ್ಲಿ ಅಧ್ಯಕ್ಷ ಫಾರೂಕ್ ಲೆಘರಿ ಅಸೆಂಬ್ಲಿಯನ್ನು ವಿಸರ್ಜಿಸಿದರು. ಭುಟ್ಟೊ ಮತ್ತೊಮ್ಮೆ ಅಧಿಕಾರದಿಂದ ವಂಚಿತರಾಗಬೇಕಾಯಿತು. 1997 ರಲ್ಲಿ ನಡೆದ ಚುನಾವಣೆಯಲ್ಲಿ ನವಾಜ್​ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷ ಬಹುಮತ ಪಡೆದು ಅಧ್ಯಕ್ಷರಾಗಿದ್ದ ಜನರಲ್ ಪರ್ವೇಜ್ ಮುಷರಫ್​ರನ್ನು ಅಧಿಕಾರದಿಂದ ಕಿತ್ತು ಹಾಕುವ ಮೂಲಕ ಮತ್ತೊಮ್ಮೆ ಪ್ರಜಾಪ್ರಭುತ್ವ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದರು.

ಯೂಸುಫ್​ ರಾಜಾ ಗಿಲಾನಿ ದಾಖಲೆ: 1999 ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟು ನವಾಜ್​ ಷರೀಫ್​ ಮತ್ತೆ ಅಧಿಕಾರ ಕಳೆದುಕೊಂಡರು. ಬಳಿಕ 4 ವರ್ಷದಲ್ಲಿ ಮೂವರು ಪ್ರಧಾನಿಗಳಾಗಿ ಮೀರ್ ಜಫರುಲ್ಲಾ ಖಾನ್ ಜಮಾಲಿ, ಚೌಧರಿ ಶುಜಾತ್ ಮತ್ತು ಶೌಕತ್ ಅಜೀಜ್ ಅಧಿಕಾರ ನಡೆಸಿದರು. 2008 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯೂಸುಫ್ ರಜಾ ಗಿಲಾನಿ ಪ್ರಧಾನಿಯಾಗಿ ಆಯ್ಕೆಯಾದರು. 4 ವರ್ಷ 86 ದಿನಗಳು ಅಧಿಕಾರ ನಡೆಸಿದ ಗಿಲಾನಿ ಪಾಕಿಸ್ತಾನದ ಇತಿಹಾಸದಲ್ಲಿಯೇ ಅಧಿಕ ಅವಧಿಗೆ ಅಧಿಕಾರ ನಡೆಸಿದ ಪ್ರಧಾನಿಯಾಗಿದ್ದಾರೆ.

ಇದಾದ ಬಳಿಕ ನವಾಜ್​ ಷರೀಫ್​ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರೂ 4 ವರ್ಷದಲ್ಲಿಯೇ ಅಧಿಕಾರ ಕಳೆದುಕೊಂಡರು. ಬಳಿಕ ಶಾಹಿದ್ ಖಾಕನ್ ಅಬ್ಬಾಸಿ ಪ್ರಧಾನಿಯಾಗಿ 303 ದಿನ ಅಧಿಕಾರದಲ್ಲಿದ್ದರು.

ತೂಗುಯ್ಯಾಲೆಯಲ್ಲಿ ಇಮ್ರಾನ್​ ಖಾನ್​: ಇನ್ನು 2018ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಇಮ್ರಾನ್ ಖಾನ್ ಮೇಲೆ ಇದೀಗ ಭಾರಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಏಪ್ರಿಲ್​ 4 ರಂದು ಇಮ್ರಾನ್​ ಖಾನ್​ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ವಿಪಕ್ಷಗಳು ಸಿದ್ಧವಾಗಿದೆ. ಒಂದು ವೇಳೆ ನಿರ್ಣಯ ಪಾಸಾದಲ್ಲಿ ಇಮ್ರಾನ್​(3 ವರ್ಷ 222 ದಿನ) ಅಧಿಕಾರದಿಂದ ಕೆಳಗಿಳಿಯಲಿದ್ದು, ಅವಧಿಪೂರ್ವವೇ ಅಧಿಕಾರದಿಂದ ನಿರ್ಗಮಿಸಲಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ: 45 ಇಲಾಖೆಗಳ 715 ಕೇಂದ್ರ ಸರ್ಕಾರಿ ನೌಕರರ ವಿರುದ್ಧ'ಸಿಬಿಐ' ಕೇಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.