ETV Bharat / international

100 ಗಂಟೆಗಳ ಕಾಲ ನಿರಂತರ ಅಡುಗೆ: ಗಿನ್ನೆಸ್ ವಿಶ್ವ ದಾಖಲೆ ಬರೆದ ಹಿಲ್ಡಾ ಬಾಸಿ - ನೈಜೀರಿಯಾದ ಬಾಣಸಿಗ

ನೈಜೀರಿಯಾದ ಬಾಣಸಿಗರೊಬ್ಬರು ಸತತ 100 ಗಂಟೆಗಳ ಕಾಲ ಅಡುಗೆ ಮಾಡುವ ಮೂಲಕ ಹೊಸ ಜಾಗತಿಕ ದಾಖಲೆ ನಿರ್ಮಿಸಿದ್ದಾರೆ.

Hilda Baci
ಗಿನ್ನೆಸ್ ವಿಶ್ವ ದಾಖಲೆ ಬರೆದ ಹಿಲ್ಡಾ ಬಾಸಿ
author img

By

Published : May 16, 2023, 10:29 AM IST

ಅಬುಜಾ: ನೈಜೀರಿಯಾದ ಪ್ರಸಿದ್ಧ ಯೂಟ್ಯೂಬರ್ ಹಾಗೂ ಬಾಣಸಿಗರಾದ ಹಿಲ್ಡಾ ಬಾಸಿ ಅವರು ಸೋಮವಾರ 100 ಗಂಟೆಗಳ ಕಾಲ ನಿರಂತರ ಅಡುಗೆ ಮಾಡುವ ಮೂಲಕ ಹೊಸ ಜಾಗತಿಕ ದಾಖಲೆ ನಿರ್ಮಿಸಿದ್ದಾರೆ. ಕಳೆದ ಗುರುವಾರದಿಂದ ಅಡುಗೆ ಮಾಡುತ್ತಿದ್ದ ಅವರು ಪ್ರಸ್ತುತ ದಾಖಲೆಯನ್ನು ಮುರಿದಿದ್ದಾರೆ. 2019 ರಲ್ಲಿ ಭಾರತೀಯ ಬಾಣಸಿಗರಾದ 'ಲತಾ ಟಂಡನ್' ಅವರು ನಿರ್ಮಿಸಿದ 87 ಗಂಟೆ 45 ನಿಮಿಷಗಳ ಗಿನ್ನೆಸ್ ವಿಶ್ವ ದಾಖಲೆಯನ್ನು ಇವರು ಪುಡಿಗಟ್ಟಿದ್ದಾರೆ.

  • With more than 88 hours done, Hilda Baci has officially surpassed the current Guinness World Record for the longest cooking marathon by an individual. She'll keep cooking till 4 pm today to reach 96 hours.

    You have done it, Hilda and we are proud of you!🎉🔥❤️ pic.twitter.com/ntRZyzzoML

    — Document Women (@DocumentWomen) May 15, 2023 " class="align-text-top noRightClick twitterSection" data=" ">

ಸೋಮವಾರ ಸಮಯ 19:45(GMT)ರ ವೇಳೆಗೆ ನೈಜೀರಿಯಾದ ವಾಣಿಜ್ಯ ಕೇಂದ್ರವಾದ ಲಾಗೋಸ್‌ನ ಲೆಕ್ಕಿ ಪ್ರದೇಶದಲ್ಲಿ ಬಾಸಿ 100 ಗಂಟೆಗಳ ಕಾಲ ಸತತವಾಗಿ ಅಡುಗೆ ಮಾಡಿದರು. ಕೆಲವು ನಿಮಿಷಗಳ ನಂತರ ಆಕೆ ಅಡುಗೆ ಮಾಡುವುದನ್ನು ನಿಲ್ಲಿಸಿದಾಗ ಸ್ಥಳದಲ್ಲಿ ನೆರೆದಿದ್ದ ಸಾವಿರಾರು ಜನರು ಹರ್ಷ ವ್ಯಕ್ತಪಡಿಸಿದರು.

ಅಡುಗೆ ಮಾಡುವ ದಾಖಲೆಯನ್ನು ಮುರಿದ ಹಿಲ್ಡಾ ಬಾಸಿ ಪ್ರಯತ್ನದ ಬಗ್ಗೆ ಗಿನ್ನಿಸ್ ವಿಶ್ವ ದಾಖಲೆ ಪುಟದಲ್ಲಿ ಟ್ವೀಟ್ ಮಾಡಲಾಗಿದೆ. "ದಾಖಲೆಯನ್ನು ಅಧಿಕೃತವಾಗಿ ದೃಢೀಕರಿಸುವ ಮೊದಲು ನಾವು ಮೊದಲು ಎಲ್ಲಾ ಪುರಾವೆಗಳನ್ನು ಪರಿಶೀಲಿಸಬೇಕಾಗಿದೆ" ಎಂದು ಜಾಗತಿಕ ಬ್ರ್ಯಾಂಡ್ ಹೇಳಿದೆ. ದಾಖಲೆಯನ್ನು ಮುರಿಯಲು ಪ್ರಯತ್ನಿಸುವ ಮೂಲಕ ಹಿಲ್ಡಾ ಬಾಸಿ ಅವರು ನೈಜೀರಿಯಾದ ಜನರು ಎಷ್ಟು ಕಷ್ಟಪಟ್ಟು ದುಡಿಯುತ್ತಾರೆ ಮತ್ತು ದೃಢನಿಶ್ಚಯದಿಂದ ಕೂಡಿರುತ್ತಾರೆ ಎಂಬುವುದನ್ನು ತೋರಿಸಲು ಬಯಸಿದ್ದರು ಎಂದು ಹೇಳಿದೆ.

ಇದನ್ನೂ ಓದಿ: 100 ವಿಶ್ವ ದಾಖಲೆಗಳ ಸರದಾರ.. ಭಾರತೀಯನ ಕೈಚಳಕದಲ್ಲಿ ಅರಳಿತು ಜಗತ್ತಿನ ಅತ್ಯಂತ ಚಿಕ್ಕ ಫಿಫಾ ಟ್ರೋಫಿ

ಗುರುವಾರ ಅವರ ಮೆನುವಿನಲ್ಲಿ ಸೂಪ್‌, ಸ್ಟ್ಯೂ ಮತ್ತು ವಿವಿಧ ಬಗೆಯ ನೈಜೀರಿಯನ್ ಭಕ್ಷ್ಯ ಹಾಗೂ ಜೊಲೊಫ್ ರೈಸ್​​ನ್ನು ತಯಾರಿಸಿದ್ದರು. ಜೊಲೊಫ್ ರೈಸ್ ಅತ್ಯಂತ ಸಾಂಪ್ರದಾಯಿಕ ಪಶ್ಚಿಮ ಆಫ್ರಿಕಾದ ಭಕ್ಷ್ಯಗಳಲ್ಲಿ ಒಂದಾಗಿದೆ. ನೈಜೀರಿಯನ್ ಪಾಕ ಪದ್ಧತಿಗಳ ಬಗ್ಗೆ ಜಗತ್ತು ಇನ್ನಷ್ಟು ಕಲಿಯುತ್ತದೆ ಎಂದು ಬಾಸಿ ಹೇಳಿದ್ದಾರೆ.

  • Cheers, Chef Hilda! Breaking the Guinness World Record for longest cooking time by an individual exemplifies the tenacious spirit of the Nigerian mind.

    I salute Hilda, her team, and everyone, especially the young people who went out and gave their sister the massive support… pic.twitter.com/FsylKApkUi

    — Rabiu Musa Kwankwaso (@KwankwasoRM) May 15, 2023 " class="align-text-top noRightClick twitterSection" data=" ">

ಅವರು ಪ್ರತಿ ಗಂಟೆಗೆ ಕೇವಲ ಐದು ನಿಮಿಷಗಳ ವಿರಾಮವನ್ನು ಪಡೆದಿದ್ದಾರೆ. 12 ಗಂಟೆಗಳ ನಂತರ ಕೇವಲ ಒಂದು ಗಂಟೆಯಲ್ಲಿ ಸ್ನಾನ ಹಾಗೂ ವೈದ್ಯಕೀಯ ತಪಾಸಣೆ ಪೂರ್ಣಗೊಳಿಸಿದ್ದರು. ಸಾವಿರಾರು ಸ್ಥಳೀಯರು ಮತ್ತು ಸೆಲೆಬ್ರಿಟಿಗಳು ಆಕೆಯನ್ನು ಹಗಲು ರಾತ್ರಿ ಹುರಿದುಂಬಿಸುತ್ತಿದ್ದರು. ಇನ್ನೂ ಅನೇಕರು ಹಲವಾರು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಮೇಲ್ವಿಚಾರಣೆ ಮಾಡಿದ್ದರು.

ಅಧ್ಯಕ್ಷ ಮುಹಮ್ಮದ್ ಬುಹಾರಿ ಶ್ಲಾಘನೆ: ಪ್ರಸ್ತುತ ಅಡುಗೆ ದಾಖಲೆ ಮುರಿದಿದ್ದಕ್ಕಾಗಿ ಅಧ್ಯಕ್ಷ ಮುಹಮ್ಮದ್ ಬುಹಾರಿ ಅವರು ಸೋಮವಾರ ನೈಜೀರಿಯಾಕ್ಕೆ ಉತ್ತಮ ದಿನ ಎಂದು ಟ್ವೀಟ್ ಮಾಡಿದ್ದಾರೆ. "ಹಿಲ್ಡಾ ಅವರ ಮಹತ್ವಾಕಾಂಕ್ಷೆ ಮತ್ತು ಸ್ಥಿತಿಸ್ಥಾಪಕತ್ವವು ನೈಜೀರಿಯನ್ ಆಹಾರದ ಅನನ್ಯತೆಯ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಒಳನೋಟವನ್ನು ಪರಿಚಯಿಸುತ್ತದೆ" ಎಂದು ಬುಹಾರಿ ಹೇಳಿದರು.

"ಒಬ್ಬ ವ್ಯಕ್ತಿಯಿಂದ ಸುದೀರ್ಘವಾದ ಅಡುಗೆ ಸಮಯಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯುವುದು ನೈಜೀರಿಯನ್ ಮನಸ್ಸಿನ ದೃಢವಾದ ಮನೋಭಾವವನ್ನು ತೋರಿಸುತ್ತದೆ. ನಾನು ಹಿಲ್ಡಾ ಮತ್ತು ಅವರ ತಂಡ ಎಲ್ಲರಿಗೂ ವಂದಿಸುತ್ತೇನೆ. ಈಗ ಹೆಚ್ಚು ಅಡುಗೆ ಮಾಡೋಣ ಮತ್ತು ಹೊಸ ದಾಖಲೆಯನ್ನು ನಿರ್ಮಿಸೋಣ. ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ"- ಕ್ಯಾನೊ ರಾಜ್ಯ ಗವರ್ನರ್ ರಬಿಯು ಮೂಸಾ ಕ್ವಾಂಕ್ವಾಸೊ,

ಇದನ್ನೂ ಓದಿ: ಫುಟ್​ಬಾಲ್ ನಟ್​ಮೆಗ್​ನಲ್ಲಿ ಗಿನ್ನಿಸ್ ದಾಖಲೆ: ವಿದೇಶಿ ಆಟಗಾರರ ದಾಖಲೆ ಮುರಿದ ಮಂಗಳೂರು ಯುವಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.