ETV Bharat / international

ಗುಡ್​ ನ್ಯೂಸ್​: ಝಿಕಾ ವೈರಸ್‌ ತಡೆಯಲು ವಿಶೇಷ ಲಸಿಕೆ ಅಭಿವೃದ್ಧಿಪಡಿಸಿದ ಆಸ್ಟ್ರೇಲಿಯಾ ವಿಜ್ಞಾನಿಗಳು - ಝಿಕಾ ವೈರಸ್

Zika Virus Vaccine: ಝಿಕಾ ವೈರಸ್​ ತಡೆಗಟ್ಟಲು ಆಸ್ಟ್ರೇಲಿಯಾದ ವಿಜ್ಞಾನಿಗಳು ವಿಶೇಷ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಝಿಕಾ ವೈರಸ್‌ಗೆ ವಿಶೇಷ ಲಸಿಕೆ
ಝಿಕಾ ವೈರಸ್‌ಗೆ ವಿಶೇಷ ಲಸಿಕೆ
author img

By ETV Bharat Karnataka Team

Published : Dec 2, 2023, 4:20 PM IST

ವಾಷಿಂಗ್ಟನ್​: ಕೋವಿಡ್ ನಂತರ ಅತಿ ಹೆಚ್ಚು ಭಯ ಹುಟ್ಟಿಸುತ್ತಿರುವ ಮತ್ತೊಂದು ರೋಗ ಎಂದರೆ ಅದು ಝಿಕಾ ವೈರಸ್. ಸೊಳ್ಳೆಗಳಿಂದ ಹರಡುವ ಇದು ಕಳೆದ ತಿಂಗಳು ಕೇರಳ ಮತ್ತು ಕರ್ನಾಟದಲ್ಲೂ ಪತ್ತೆಯಾಗಿತ್ತು. ಇದೀಗ ಈ ವೈರಾಣುವಿಗೆ ಸಂಬಂಧಿಸಿದಂತೆ ಗುಡ್​ ನ್ಯೂಸ್​ವೊಂದು ಸಿಕ್ಕಿದೆ.

ಝಿಕಾ ವೈರಸ್‌ನಿಂದ ಜನರನ್ನು ರಕ್ಷಿಸಲು ಆಸ್ಟ್ರೇಲಿಯಾದ ವಿಜ್ಞಾನಿಗಳು ವಿಶೇಷ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೇ ಇದನ್ನೂ ಸಿರೆಂಜ್​ (ಸೂಜಿ ಮುಕ್ತ ಲಸಿಕೆ) ಇಲ್ಲದೆಯೇ ದೇಹಕ್ಕೆ ಸೇರಿಸಬಹುದಾಗಿದೆ. ಅಡಿಲೇಡ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ಪ್ರಾಯೋಗಿಕ ಲಸಿಕೆಯನ್ನು ಇಲಿಗಳಿಗೆ ನೀಡಿದ್ದು, ಝಿಕಾ ವೈರಸ್‌ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ತಿಳಿದು ಬಂದಿದೆ.

ಭಾರತ, ಆಗ್ನೇಯ ಏಷ್ಯಾ, ಪೆಸಿಫಿಕ್, ಆಫ್ರಿಕಾ, ದಕ್ಷಿಣ ಮತ್ತು ಮಧ್ಯ ಅಮೆರಿಕದಲ್ಲಿ ಝಿಕಾ ವೈರಸ್‌ ಹರಡುವ ಸಾಧ್ಯತೆ ಹೆಚ್ಚಿದೆ. ಈ ವೈರಸ್​ ಬಂದರೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಗರ್ಭಿಣಿ ಮಹಿಳೆಯರಲ್ಲಿ ಈ ಸೋಂಕು ಪತ್ತೆಯಾದರೆ ಭ್ರೂಣದಲ್ಲಿ ಮಗುವಿನ ಸಾವು ಸಂಭವಿಸಬಹುದು ಅಥವಾ ಅನಾರೋಗ್ಯದ ಮಗುವಿನ ಜನನವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಗಟ್ಟಲೆಂದು, ವಿಜ್ಞಾನಿಗಳು ಹೆಚ್ಚಿನ ಸಾಂದ್ರತೆಯ ಮೈಕ್ರೋ ಅರೇ ಪ್ಯಾಚ್​ (HD-MAP)ಗಳನ್ನು ಬಳಸಿಕೊಂಡು ಲಸಿಕೆಯ ಮಾದರಿ ಅಭಿವೃದ್ಧಿಪಡಿಸಿದ್ದಾರೆ.

ಈ ಲಸಿಕೆ ನೆರವಿನಿಂದ ಝಿಕಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸಬಹುದಾಗಿದೆ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ದನಸುಖ ವಿಜೇಸುಂದರ ಹೇಳಿದರು. ಲಸಿಕೆ ತುಂಬಾ ಪರಿಣಾಮಕಾರಿ ಮತ್ತು ದೇಹಕ್ಕೆ ಕಳುಹಿಸಲು ತುಂಬ ಸುಲಭವಾಗಿದೆ. ಚರ್ಮದ ಮೇಲ್ಮೈ ಕೆಳಗಿರುವ ಪ್ರತಿರಕ್ಷಣಾ ಕೋಶಗಳಿಗೆ ಈ ಲಸಿಕೆಯನ್ನು ನೇರವಾಗಿ ತಲುಪಿಸುವುದಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ವೈರಸ್​ ಪತ್ತೆ: ಕಳೆದ ತಿಂಗಳು ನ.2 ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಝಿಕಾ ವೈರಸ್ ಪತ್ತೆಯಾಗಿತ್ತು. ಆರೋಗ್ಯ ಇಲಾಖೆಯು ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸಮೀಪದ ಸೊಳ್ಳೆಗಳನ್ನು ಲ್ಯಾಬ್​ನಲ್ಲಿ ಪರೀಕ್ಷಿಸಿದಾಗ ಸೊಳ್ಳೆಗಳಲ್ಲಿ ಝಿಕಾ ಕಂಡು ಬಂದಿತ್ತು.

ಕೇರಳದಲ್ಲೂ ವೈರಸ್​ ಪತ್ತೆ: ಕಳೆದ ತಿಂಗಳು ಕಣ್ಣೂರ್​ ಜಿಲ್ಲೆಯ ತಲಸ್ಸೆರಿಯಲ್ಲಿ ಝಿಕಾ ಪತ್ತೆಯಾಗಿತ್ತು. ಈ ಸಂಬಂಧ 22 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಾದರಿಯಲ್ಲಿ ಝಿಕಾ ವೈರಸ್​ ಪತ್ತೆಯಾಗಿರುವುದಾಗಿ ವೈರಾಲಜಿ ಇನ್‌ಸ್ಟಿಟ್ಯೂಟ್‌ ವರದಿ ನೀಡಿತ್ತು.

ತಲಸ್ಸೆರಿ ನ್ಯಾಯಾಲಯದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರಲ್ಲಿ ಜ್ವರ, ಕಣ್ಣು ಕೆಂಪಾಗುವಿಕೆ, ದೇಹದ ಊತ ಮತ್ತು ನೋವು ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿದ್ದವು. ದಿಢೀರ್​​ ಅನಾರೋಗ್ಯಕ್ಕೆ ಒಳಗಾದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ರಕ್ತ ಪರೀಕ್ಷೆಗೆ ಕಳುಹಿಸಿದಾಗ ಝಿಕಾ ವೈರಸ್​​​ ಪತ್ತೆಯಾಗಿತ್ತು.

ಇದನ್ನೂ ಓದಿ: ಮಗಳಿಗೆ ತಾನೇ ಚಿಕಿತ್ಸೆ ನೀಡಿದ ತಂದೆ: ಶಸ್ತ್ರಚಿಕಿತ್ಸೆಯಿಂದ ಜೀವ ಉಳಿಸಿದ ವೈದ್ಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.