ETV Bharat / international

ಭೂಮಿ ಮೇಲಿನ ಸಾಗರಗಳು, ಸರೋವರಗಳು, ನದಿಗಳ ಸಮೀಕ್ಷೆಗೆ ಉಪಗ್ರಹ ಉಡಾವಣೆ ಮಾಡಿದ ನಾಸಾ - ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿ ಪೂರ್ವಭಾವಿ ಉಡಾವಣೆ

ಹವಾಮಾನ ಬದಲಾವಣೆ, ಕೆಟ್ಟ ಬರ, ಪ್ರವಾಹ, ಕರಾವಳಿ ಅನಾಹುತ ಕುರಿತು ಇದು ಮಾಹಿತಿ ನೀಡಲಿದೆ.

ಭೂಮಿ ಮೇಲಿನ ಸಾಗರಗಳು, ಸರೋವರಗಳು, ನದಿಗಳ ಸಮೀಕ್ಷೆಗೆ ಉಪಗ್ರಹ ಉಡಾವಣೆ ಮಾಡಿದ ನಾಸಾ
nasa-launched-satellites-to-survey-the-worlds-oceans-lakes-and-rivers
author img

By

Published : Dec 17, 2022, 5:53 PM IST

ವಾಷಿಂಗ್ಟನ್​: ಪ್ರಪಂಚದ ಬಹುತೇಕ ಎಲ್ಲ ಸಾಗರಗಳು, ಸರೋವರಗಳು ಮತ್ತು ನದಿಗಳನ್ನು ನಕ್ಷೆ ಮಾಡುವ ಅಮೆರಿಕ-ಫ್ರೆಂಚ್ ಉಪಗ್ರಹ ಶುಕ್ರವಾರ ನಭಕ್ಕೆ ಜಿಗಿದಿದೆ. ಕ್ಯಾಲಿಫೋರ್ನಿಯಾದ ವಾಂಡೆನ್‌ಬರ್ಗ್ ಸ್ಪೇಸ್ ಫೋರ್ಸ್ ಬೇಸ್‌ನಿಂದ ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿ ಪೂರ್ವಭಾವಿ ಉಡಾವಣೆಯು ನಾಸಾ ಮಾಡಿದೆ.

ನೀರಿನ ಮೇಲ್ಮೆ ಮತ್ತು ಸಮುದ್ರ ಸ್ಥಳಾಕೃತಿ- ಸ್ವೊಟ್​ (SWOT)ಎಂಬ ನಿಕ್​ನೇಮ್​ ಅನ್ನು ಇದು ಹೊಂದಿದೆ. ಎಂದಿಗೂ ಆಗಿರದ ಹವಾಮಾನ ಬದಲಾವಣೆ, ಕೆಟ್ಟ ಬರ, ಪ್ರವಾಹ, ಕರಾವಳಿ ಅನಾಹುತ ಕುರಿತು ಇದು ಮಾಹಿತಿ ನೀಡಲಿದೆ. ಇನ್ನು ಈ ಉಪಗ್ರಹ ನಭಕ್ಕೆ ಜಿಗಿಯುತ್ತಿದ್ದಂತೆ ಕ್ಯಾಲಿಪೋರ್ನಿಯಾ ಮತ್ತು ಫ್ರಾನ್ಸ್​ ಕೇಂದ್ರದಲ್ಲಿ ಹರ್ಷ್ಗೋದ್ದಾರಗಳು ಕೇಳಿ ಬಂದವು.

ಇದೊಂದು ಅವಿಸ್ಮರಣೀಯ ಘಟನೆಯಾಗಿದೆ. ನಾನು ಅತ್ಯಂತ ಸಂಭ್ರಮದಿಂದ ಇರುವುದಾಗಿ ನಾಸಾ ಪ್ರೋಗ್ರಾಂ ಸೈಟಿಸ್ಟ್​ ನದ್ಯಾ ವಿನೊಗ್ರಡೊವ-ಶಿಫೆರ್​ ತಿಳಿಸಿದ್ದಾರೆ. ಭೂಮಿಯನ್ನು ನಾವು ಕಂಡಿರದ ನೀರನ್ನು ನಾವು ನೋಡುತ್ತೇವೆ. ಎಸ್​ಯುವಿ ಅಳತೆ ಕುರಿತು ಉಪಗ್ರಹ ಮಾಪನ ಮಾಡುತ್ತದೆ. ಭೂಮಿಯ ಮೇಲ್ಮೆ ಇರುವ ಶೇ 90ರಷ್ಟಿರುವ ನೀರಿನ ಮಾಪನ ಮಾಡಲಿದೆ. ವಿಜ್ಞಾನಿಗಳು ಅಪಾಯ ಹೊಂದಿರುವ ಪ್ರದೇಶದಲ್ಲಿ ಹರಿವಿನ ಸಾಮರ್ಥ್ಯವನ್ನು ಟ್ರಾಕ್​ ಮಾಡಲಿದ್ದಾರೆ. ಇದರ ಜೊತೆ ಇದು ಲಕ್ಷನೂ ಲಕ್ಷ ಕೆರಗಳ ಸಮೀಕ್ಷೆಯನ್ನು ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಉಪಗ್ರಹ ರೇಡಾರ್​ ಪ್ಲಸಸ್ ಮೂಲಕ ಭೂಮಿಯನ್ನು ಶೂಟ್​​​ ಮಾಡಲಿದೆ. ​ಸಂಕೇತಗಳು 33-ಅಡಿ ಬೂಮ್‌ನ ಪ್ರತಿ ತುದಿಯಲ್ಲಿ ಒಂದು ಜೋಡಿ ಆಂಟೆನಾಗಳಿಂದ ಸ್ವೀಕರಿಸಲ್ಪಡುತ್ತವೆ. ಇದು 13 ಮೈಲುಗಳಿಗಿಂತ ಕಡಿಮೆ ಅಡ್ಡಲಾಗಿ ಪ್ರವಾಹಗಳು ಮತ್ತು ಸುಳಿಗಳನ್ನು ಮಾಡಲು ಸಾಧ್ಯವಾಗುತ್ತದೆ, ಹಾಗೆಯೇ ವಿವಿಧ ತಾಪಮಾನಗಳ ನೀರು ವಿಲೀನಗೊಳ್ಳುವ ಸಾಗರದ ಪ್ರದೇಶಗಳು ಪತ್ತೆ ಮಾಡುತ್ತದೆ.

ನಾಸಾದ ಪ್ರಸ್ತುತ ಸುಮಾರು 30 ಭೂ - ವೀಕ್ಷಕ ಉಪಗ್ರಹಗಳು ಅಂತಹ ಸಣ್ಣ ವೈಶಿಷ್ಟ್ಯಗಳನ್ನು ಮಾಡಲು ಸಾಧ್ಯವಿಲ್ಲ. ಈ ಹಳೆಯ ಉಪಗ್ರಹಗಳು ಸರೋವರಗಳು ಮತ್ತು ನದಿಗಳ ವ್ಯಾಪ್ತಿಯನ್ನು ನಕ್ಷೆ ಮಾಡಬಹುದಾದರೂ, ಅವುಗಳ ಅಳತೆಗಳು ವಿವರವಾಗಿಲ್ಲ ಎಂದು ಈ ಮಿಷನ್‌ನ ಭಾಗವಾಗಿರುವ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ಟ್ಯಾಮ್ಲಿನ್ ಪಾವೆಲ್ಸ್ಕಿ ಹೇಳಿದರು.

ಉಪಗ್ರಹವು ಏರುತ್ತಿರುವ ಸಮುದ್ರ ಮಟ್ಟಗಳ ಸ್ಥಳ ಮತ್ತು ವೇಗವನ್ನು ಮತ್ತು ಕರಾವಳಿಗಳ ಬದಲಾವಣೆ ಬಹಿರಂಗಪಡಿಸುತ್ತದೆ, ಜೀವ ಮತ್ತು ಆಸ್ತಿಯನ್ನು ಉಳಿಸಲು ಪ್ರಮುಖವಾಗಿದೆ. ಇದು ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾ ನಡುವಿನ ಭೂಗೋಳವನ್ನು ಕನಿಷ್ಠ ಮೂರು ವಾರಗಳಿಗೊಮ್ಮೆ ಆವರಿಸುತ್ತದೆ. ಏಕೆಂದರೆ ಇದು 550 ಮೈಲುಗಳಿಗಿಂತ ಹೆಚ್ಚು (890 ಕಿಲೋಮೀಟರ್) ಕಕ್ಷೆಯಲ್ಲಿ ಸುತ್ತುತ್ತದೆ. ಮಿಷನ್ ಮೂರು ವರ್ಷಗಳವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ರಷ್ಯಾ ಗಗನಯಾತ್ರಿಗಳ ಬಾಹ್ಯಕಾಶಯಾನ 2ನೇ ಬಾರಿಯೂ ರದ್ದು.. ಕಾರಣ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.