ವಾಶಿಂಗ್ಟನ್ : ಯಹೂದಿ ಜನರ ಬಗ್ಗೆ ಎಲೋನ್ ಮಸ್ಕ್ ಪದೇ ಪದೆ 'ಹೀನಾಯ ಸುಳ್ಳು'ಗಳನ್ನು ಹರಡುತ್ತಿದ್ದಾರೆ ಎಂದು ಜೋ ಬೈಡನ್ ಆಡಳಿತ ಟೀಕಿಸಿದೆ. ಎಕ್ಸ್ ಮಾಲೀಕ ಮಸ್ಕ್ ತಮ್ಮ ಬಲಪಂಥೀಯ ದೃಷ್ಟಿಕೋನಗಳನ್ನು ಅನುಮೋದಿಸುತ್ತಿದ್ದಾರೆ ಮತ್ತು ಅದೇ ಸಮಯದಲ್ಲಿ ಎಕ್ಸ್ನಲ್ಲಿ ಯಹೂದಿ ವಿರೋಧಿ ಭಾವನೆಗಳನ್ನು ಉತ್ತೇಜಿಸುವ ಪೋಸ್ಟ್ಗಳಿಗೆ ಸಹಮತಿ ಸೂಚಿಸುತ್ತಿದ್ದಾರೆ ಎಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ.
ಎಕ್ಸ್ನಲ್ಲಿ ಯಹೂದಿ ವಿರೋಧಿ ಸಿದ್ಧಾಂತವನ್ನು ಉತ್ತೇಜಿಸುವ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಮಸ್ಕ್, ಅದನ್ನು "ವಾಸ್ತವ ಸತ್ಯ" ಎಂದು ಹೇಳಿದ್ದಾರೆ. 2018 ರಲ್ಲಿ ಪಿಟ್ಸ್ಬರ್ಗ್ ಸಿನಗಾಗ್ನಲ್ಲಿ 11 ಜನರನ್ನು ಕೊಂದ ವ್ಯಕ್ತಿಯ ಕೃತ್ಯವನ್ನು ಪ್ರೇರೇಪಿಸಿದ ಬಗೆಗಿನ ಪೋಸ್ಟ್ ಒಂದಕ್ಕೆ ಅವರು ಪ್ರತಿಕ್ರಿಯಿಸಿದ್ದರು. ಇಂಥ ಪೋಸ್ಟ್ಗೆ ಮಸ್ಕ್ ಅನುಮೋದನೆ ನೀಡಿರುವುದು ಸ್ವೀಕಾರಾರ್ಹವಲ್ಲ ಎಂದು ಶ್ವೇತಭವನದ ವಕ್ತಾರರು ಹೇಳಿದ್ದಾರೆ.
-
You have said the actual truth
— Elon Musk (@elonmusk) November 15, 2023 " class="align-text-top noRightClick twitterSection" data="
">You have said the actual truth
— Elon Musk (@elonmusk) November 15, 2023You have said the actual truth
— Elon Musk (@elonmusk) November 15, 2023
"ಯಹೂದಿ ವಿರೋಧಿ ಮತ್ತು ಜನಾಂಗೀಯ ದ್ವೇಷದ ಈ ಹೀನ ಪ್ರಚಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ" ಎಂದು ಶ್ವೇತಭವನದ ವಕ್ತಾರ ಆಂಡ್ರ್ಯೂ ಬೇಟ್ಸ್ ಹೇಳಿದ್ದಾರೆ. "ಅಮೆರಿಕದ ಇತಿಹಾಸದಲ್ಲಿ ಯಹೂದಿ ವಿರೋಧಿತ್ವದ ಅತ್ಯಂತ ಮಾರಣಾಂತಿಕ ಕೃತ್ಯದ ಹಿಂದಿನ ಭೀಕರ ಸುಳ್ಳನ್ನು ಯಾವುದೇ ಸಮಯದಲ್ಲಿ ಪುನರಾವರ್ತಿಸುವುದು ಸ್ವೀಕಾರಾರ್ಹವಲ್ಲ." ಎಂದು ಬೇಟ್ಸ್ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಕ್ಸ್ ಸಿಇಒ ಲಿಂಡಾ ಯಾಕರಿನೊ, ತಮ್ಮ ದೃಷ್ಟಿಕೋನವು ಯಾವಾಗಲೂ ಸ್ಪಷ್ಟವಾಗಿದೆ, ಪ್ರತಿಯೊಬ್ಬರೂ ಎಲ್ಲ ವೇದಿಕೆಗಳಲ್ಲೂ ತಾರತಮ್ಯವನ್ನು ನಿಲ್ಲಿಸಬೇಕು ಎಂದು ಹೇಳಿದರು. "ಎಕ್ಸ್ ಪ್ಲಾಟ್ಫಾರ್ಮ್ನ ವಿಷಯಕ್ಕೆ ಬಂದಾಗ- ಯಹೂದಿ ವಿರೋಧಿತ್ವ ಮತ್ತು ತಾರತಮ್ಯವನ್ನು ಎದುರಿಸುವ ನಮ್ಮ ಪ್ರಯತ್ನಗಳು ಅತ್ಯಂತ ಸ್ಪಷ್ಟವಾಗಿವೆ. ಜಗತ್ತಿನಲ್ಲಿ ಎಲ್ಲಿಯೂ ತಾರತಮ್ಯಕ್ಕೆ ಸ್ಥಳವಿಲ್ಲ. ಇದು ಕೊಳಕು ಮತ್ತು ತಪ್ಪು. ಫುಲ್ ಸ್ಟಾಪ್" ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಸ್ಕ್ ಬಿಳಿ ರಾಷ್ಟ್ರೀಯತಾವಾದಿ ಮತ್ತು ಯಹೂದಿ ವಿರೋಧಿ ಪಿತೂರಿ ಸಿದ್ಧಾಂತಗಳಿಗೆ ಮಣೆ ಹಾಕುತ್ತಿದ್ದಾರೆ ಎಂದು ಲಾಭರಹಿತ ಸಂಘಟನೆ ಮೀಡಿಯಾ ಮ್ಯಾಟರ್ಸ್ ತನ್ನ ವರದಿಯಲ್ಲಿ ಹೇಳಿತ್ತು. ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಆಪಲ್, ಬ್ರಾವೋ (ಎನ್ಬಿಸಿ ಯುನಿವರ್ಸಲ್), ಐಬಿಎಂ, ಒರಾಕಲ್ ಮತ್ತು ಎಕ್ಸ್ ಫಿನಿಟಿ (ಕಾಮ್ಕಾಸ್ಟ್) ನಂಥ ಪ್ರಮುಖ ಬ್ರಾಂಡ್ಗಳ ಜಾಹೀರಾತುಗಳನ್ನು ಅಡಾಲ್ಫ್ ಹಿಟ್ಲರ್ ಮತ್ತು ಅವರ ನಾಜಿ ಸಿದ್ಧಾಂತಗಳನ್ನು ಬೆಂಬಲಿಸುವ ಪೋಸ್ಟ್ಗಳ ಪಕ್ಕದಲ್ಲಿ ತೋರಿಸುತ್ತಿದೆ ಎಂದು ಮೀಡಿಯಾ ಮ್ಯಾಟರ್ಸ್ ಆರೋಪಿಸಿತ್ತು.
ಈ ವರದಿಯ ನಂತರ ಆಪಲ್, ಐಬಿಎಂ, ಡಿಸ್ನಿ, ವಾರ್ನರ್ ಬ್ರದರ್ಸ್, ಡಿಸ್ಕವರಿ, ಪ್ಯಾರಾಮೌಂಟ್ ಮತ್ತು ಕಾಮ್ಕಾಸ್ಟ್ / ಎನ್ಬಿಸಿ ಯುನಿವರ್ಸಲ್ನಂಥ ಟೆಕ್ ಮತ್ತು ಪ್ರಮುಖ ಮಾಧ್ಯಮ ಕಂಪನಿಗಳು ಎಕ್ಸ್ನಲ್ಲಿ ಜಾಹೀರಾತು ನೀಡುವುದನ್ನು ಸ್ಥಗಿತಗೊಳಿಸಿವೆ ಅಥವಾ ಸಂಪೂರ್ಣವಾಗಿ ಹಿಂತೆಗೆದುಕೊಂಡಿವೆ ಎಂದು ವರದಿಯಾಗಿದೆ. ಮೀಡಿಯಾ ಮ್ಯಾಟರ್ಸ್ ಮತ್ತು ತಮ್ಮ ಕಂಪನಿಯ ಮೇಲೆ ಸುಳ್ಳು ಆರೋಪ ಮಾಡಿದವರ ವಿರುದ್ಧ ಎಕ್ಸ್ "ಥರ್ಮೋನ್ಯೂಕ್ಲಿಯರ್ ಮೊಕದ್ದಮೆ" ದಾಖಲಿಸಲಿದೆ ಎಂದು ಮಸ್ಕ್ ಶನಿವಾರ ಹೇಳಿದ್ದಾರೆ.
ಇದನ್ನೂ ಓದಿ : ಪದಚ್ಯುತ ಓಪನ್ ಎಐ ಸಿಇಒ ಆಲ್ಟ್ಮ್ಯಾನ್ ಸ್ವಂತ ಎಐ ಕಂಪನಿ ಆರಂಭಿಸುವ ಸಾಧ್ಯತೆ