ETV Bharat / international

ಡೊನಾಲ್ಡ್‌ ಟ್ರಂಪ್‌ ವಿರುದ್ಧ ಟ್ವಿಟರ್ ನಿಷೇಧ ಹಿಂತೆಗೆದುಕೊಳ್ಳುವೆ: ಎಲಾನ್ ಮಸ್ಕ್ - ಟ್ವಿಟರ್

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮೇಲಿನ ಟ್ವಿಟರ್ ನಿಷೇಧವನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಎಲಾನ್‌ ಮಸ್ಕ್‌ ಮಂಗಳವಾರ ಹೇಳಿದ್ದಾರೆ.

ಎಲಾನ್ ಮಸ್ಕ್
ಎಲಾನ್ ಮಸ್ಕ್
author img

By

Published : May 11, 2022, 8:16 AM IST

ಲಂಡನ್​: ಡೊನಾಲ್ಡ್‌ ಟ್ರಂಪ್ ಟ್ವಿಟರ್ ಖಾತೆ ನಿಷೇಧವನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಟೆಸ್ಲಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ. ಮಸ್ಕ್‌ ಅವರು ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್‌ ಅನ್ನು 44 ಬಿಲಿಯನ್ ಡಾಲರ್‌ಗೆ ಖರೀದಿಸುವ ಡೀಲ್ ಕುದುರಿಸಿದ್ದಾರೆ ಎಂದು ಕೆಲ ದಿನಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಆದ್ರೆ ಈ ಕುರಿತ ಅವರ ಮುಂದಿನ ಯೋಜನೆಗಳಿನ್ನೂ ಸ್ಪಷ್ಟವಾಗಿಲ್ಲ. ತನ್ನನ್ನು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿರುವ ವ್ಯಕ್ತಿಯೆಂದು ಬಣ್ಣಿಸಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ 'ನಿರ್ಬಂಧ'ಗಳಿಗೆ ಕಡಿವಾಣ ಹಾಕುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸುಮಾರು 88 ಮಿಲಿಯನ್‌ ಹಿಂಬಾಲಕರನ್ನು (ಫಾಲೋವರ್ಸ್‌) ಹೊಂದಿರುವ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನು ಟ್ವಿಟರ್‌ ರದ್ದುಪಡಿಸಿರುವ ಬಗ್ಗೆ ವಿಶ್ವವ್ಯಾಪಿ ಪರ-ವಿರೋಧ ಚರ್ಚೆ ನಡೆದಿತ್ತು. ಈ ಬಗ್ಗೆ ಮಾತನಾಡಿರುವ ಮಸ್ಕ್‌, ಈ ರೀತಿ ರದ್ದು ಮಾಡುವ ಮೂಲಕ ಒಂದು ದೊಡ್ಡ ಸಮುದಾಯವನ್ನೇ ಸಾಮಾಜಿಕ ಜಾಲತಾಣದಿಂದ ದೂರವಿಟ್ಟಂತಾಗಿದೆ. ಇದು ಸರಿಯಾದ ನಿಲುವಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಅಲ್ಲದೇ, ಶಾಶ್ವತ ನಿಷೇಧ ನಿಲುವು ಸರಿಯಲ್ಲ ಎಂದೂ ತಿಳಿಸಿದ್ದಾರೆ.

ಜನವರಿ 6ರಂದು ಅಮೆರಿಕ ಕ್ಯಾಪಿಟಲ್ ಹಿಲ್‌ನಲ್ಲಿ ನಡೆದ ಹಿಂಸಾಚಾರದ ಬಳಿಕ ಟ್ವಿಟರ್ ಸಂಸ್ಥೆಯು ಟ್ರಂಪ್‌ ಅವರು ಖಾತೆಯನ್ನು ರದ್ದುಗೊಳಿಸಿತ್ತು. ಹಿಂಸಾಚಾರ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯನ್ನು ನಿಯಂತ್ರಿಸಲು ಕ್ರಮ ತೆಗೆದುಕೊಂಡಿದ್ದಾಗಿ ಟ್ವಿಟರ್‌ ಹೇಳಿತ್ತು.

ಇದನ್ನೂ ಓದಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್​​ಗೆ ಕೋವಿಡ್‌ ಸೋಂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.