ಇಸ್ಲಾಮಾಬಾದ್ ( ಪಾಕಿಸ್ತಾನ): ದೇಶದಲ್ಲಿನ ಮೊದಲ ಎಂಪಾಕ್ಸ್ ಪ್ರಕರಣ ದಾಖಲಾಗಿದೆ ಎಂದು ಪಾಕಿಸ್ತಾನದ ಆರೋಗ್ಯ ಸಚಿವಾಲಯವು ಮಂಗಳವಾರ ಘೋಷಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಎಂಪಾಕ್ಸ್ ರೋಗವನ್ನು ಮೊದಲು ಮಂಕಿಪಾಕ್ಸ್ ಎಂದು ಕರೆಯಲಾಗುತ್ತಿತ್ತು. ಪಾಕಿಸ್ತಾನದಲ್ಲಿ ಮೊದಲ ಪ್ರಕರಣ ಪತ್ತೆಯಾದ ನಂತರ ದೇಶದ ಎಲ್ಲಾ ವಿಮಾನ ನಿಲ್ದಾಣದ ಅಧಿಕಾರಿಗಳು ರೋಗ ಹರಡದಂತೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.
ಗಡಿ ಆರೋಗ್ಯ ಸೇವೆ ಸಂಪೂರ್ಣ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಸಾಂಕ್ರಾಮಿಕ ರೋಗಗಳು ಸಾರ್ವಜನಿಕರಿಗೆ ಹರಡದಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗದುಕೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನ ಸಚಿವಾಲಯವು ತಿಳಿಸಿದೆ. ಕಳೆದ ವರ್ಷದಿಂದ ವಿಶ್ವದಲ್ಲಿ ಎಂಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಜನವರಿ 1, 2022 ಮತ್ತು ಏಪ್ರಿಲ್ 24, 2023 ರ ನಡುವೆ ಸುಮಾರು 87,113 ದೃಢಪಡಿಸಿದ ಪ್ರಕರಣಗಳು ವರದಿಯಾಗಿವೆ. ಎಂಪಾಕ್ಸ್ ರೋಗವು ಸಾಂಪ್ರದಾಯಿಕವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಪ್ರದೇಶಗಳಿಗೆ ಸೀಮಿತವಾಗಿದೆ. ಇದರ ಲಕ್ಷಣ ಜ್ವರ, ಶೀತ, ಇತ್ಯಾದಿ.
ರೋಗಲಕ್ಷಣಗಳು ಮತ್ತು ಚಿಕಿತ್ಸೆ ಹೇಗೆ: ಜ್ವರ ಪಾಕ್ಸ್‌ನ ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಸ್ನಾಯು ನೋವು, ತಲೆನೋವು, ಜ್ವರ, ಕಡಿಮೆ ಶಕ್ತಿ ಮತ್ತು ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು. ಎಐಐಎಂಎಸ್‌ನ ವೈದ್ಯಕೀಯ ವಿಭಾಗದ ಡಾ. ಪಿಯೂಷ್ ರಂಜನ್ ಅವರ ಪ್ರಕಾರ, ಮಂಕಿಪಾಕ್ಸ್ ಲಕ್ಷಣಗಳು ಸಿಡುಬು ಮತ್ತು ಚಿಕನ್‌ಪಾಕ್ಸ್‌ನಂತಿವೆ. ರೋಗಿಗಳಿಗೆ ಜ್ವರ ಮತ್ತು ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆ ಕಾಣಿಸಿಕೊಳ್ಳುತ್ತದೆ. 1-5 ದಿನಗಳ ನಂತರ ರೋಗಿಯು ಮುಖ, ಅಂಗೈಗಳಲ್ಲಿ ದದ್ದುಗಳು ಕಾಣಿಸಬಹುದು.
ಅಲ್ಲದೇ ಕಾರ್ನಿಯಾದಲ್ಲಿ ದದ್ದುಗಳಾಗಿ ಇದು ಕುರುಡುತನಕ್ಕೆ ಕಾರಣವಾಗಬಹುದು. ಗಾಯಗಳಿಗೆ ಕಾರಣವಾಗುವ ದದ್ದುಗಳ ಸಂಖ್ಯೆಯು ಒಂದರಿಂದ ಹಲವಾರು ಸಾವಿರದವರೆಗೆ ಇರುತ್ತದೆ. ವೈರಸ್‌ಗೆ ಒಳಗಾದ ಜನರಿಗೆ ಸಾಮಾನ್ಯವಾಗಿ ಹಲವಾರು ಸಿಡುಬು ಲಸಿಕೆಗಳಲ್ಲಿ ಒಂದನ್ನು ನೀಡಲಾಗುತ್ತದೆ. ಇದು ಮಂಕಿಪಾಕ್ಸ್ ವಿರುದ್ಧ ಪರಿಣಾಮಕಾರಿ ಎಂದು ತೋರಿಸಲಾಗಿದೆ. ಆಂಟಿವೈರಲ್ ಔಷಧಗಳನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ.
ಹೊಸ ನಾಮಕರಣ: ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಮಂಕಿಪಾಕ್ಸ್ (ಮಂಕಿಪಾಕ್ಸ್ ಸ್ಕಿನಾನಿಮ್)ಗೆ ಸಮಾನಾರ್ಥಕವಾಗಿ ಆಂಪಾಕ್ಸ್ (ಎಂಪಾಕ್ಸ್) ಎಂಬ ಹೊಸ ಆದ್ಯತೆಯ ಪದವನ್ನು ನೀಡಿದೆ. ಎರಡೂ ಹೆಸರುಗಳನ್ನು ಒಂದು ವರ್ಷದವರೆಗೆ ಒಟ್ಟಿಗೆ ಬಳಸಲಾಗುವುದು ಮತ್ತು ಮಂಕಿಪಾಕ್ಸ್ ಅನ್ನು ಹಂತಹಂತವಾಗಿ ತೆಗೆದುಹಾಕಲಾಗುತ್ತದೆ.
ವೈರಸ್‌ಗಳ ಅಸ್ಪಷ್ಟ ಕುಟುಂಬವು ಈಗಾಗಲೇ ಆಫ್ರಿಕನ್ ಪ್ರೈಮೇಟ್‌ಗಳನ್ನು ವಸಾಹತುಗೊಳಿಸಿದೆ ಮತ್ತು ಕೆಲವು ಕೋತಿಗಳಲ್ಲಿ ಮಾರಣಾಂತಿಕ ಎಬೋಲಾ ತರಹದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎಂದು ಆನ್‌ಲೈನ್‌ನಲ್ಲಿ ಪ್ರಕಟವಾದ ಕೊಲೊರಾಡೋ ಬೌಲ್ಡರ್ ಸಂಶೋಧನಾ ಅಧ್ಯಯನದ ಪ್ರಕಾರ ತಿಳಿದುಬಂದಿದೆ. ಅಂತಹ ವೈರಸ್‌ಗಳನ್ನು ಈಗಾಗಲೇ ಮಕಾಕ್ ಮಂಗಗಳಿಗೆ ಗಂಭೀರ ಬೆದರಿಕೆ ಎಂದು ಪರಿಗಣಿಸಲಾಗಿದೆ. ಆದರೂ ಇದುವರೆಗೆ ಮಾನವ ಸೋಂಕು ವರದಿಯಾಗಿಲ್ಲ ಮತ್ತು ಈ ವೈರಸ್ ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ: ಇರಾನ್ನಿಂದ ತಾಯ್ನಾಡಿಗೆ ಮರಳಿದ 35 ಸಾವಿರ ಅಫ್ಘನ್ ನಿರಾಶ್ರಿತರು