ಪೋಲೆಂಡ್ : ಐತಿಹಾಸಿಕ ಸ್ಥಳದಲ್ಲಿ ಅತಿಥಿಗಳು ಲೈಂಗಿಕ ಕ್ರಿಯೆ ನಡೆಸುತ್ತಿರುವುದು ಕಂಡು ಬಂದಿದ್ದು, ಇದು ಭದ್ರತಾ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಈ ಮೂಲಕ ಮಿಲಿಟರಿ ವಸ್ತುಸಂಗ್ರಹಾಲಯವು ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿರುವ ಸ್ಥಳವಾಗಿ ಜನಪ್ರಿಯವಾಗಿದೆ. ಜೊತೆಗೆ ಅತಿಥಿಗಳು ಇಲ್ಲಿ ಲೈಂಗಿಕ ಕ್ರಿಯೆ ನಡೆಸದಂತೆ ಮನವಿ ಮಾಡಿಕೊಂಡಿದೆ.
ಈಸ್ಟರ್ನ್ ಫೋರ್ಟ್ ಮ್ಯೂಸಿಯಂ ಎಂದು ಕರೆಯಲ್ಪಡುವ ಪೋಲೆಂಡ್‌ನ ಫೋರ್ಟ್ ಗೆರ್ಹಾರ್ಡ್ ಮ್ಯೂಸಿಯಂ ಇತ್ತೀಚೆಗೆ ತನ್ನ ಫೇಸ್‌ಬುಕ್ ಪುಟದಲ್ಲಿ ಈ ಘಟನೆಯ ಅಪ್‌ಡೇಟ್ ಅನ್ನು ಪೋಸ್ಟ್ ಮಾಡಿದೆ. ಈ ಐತಿಹಾಸಿಕ ಸ್ಥಳದಲ್ಲಿ ತಮ್ಮ ಈ ರೀತಿ ವರ್ತನೆ ಪ್ರದರ್ಶಿಸದಂತೆ ವಿನಂತಿಸಿದೆ.
ಪ್ರೀತಿಯ ಅತಿಥಿಗಳೇ, ದಯವಿಟ್ಟು ಅರ್ಥಮಾಡಿಕೊಳ್ಳಿ..ಮ್ಯೂಸಿಯಂನಲ್ಲಿ ಭದ್ರತಾ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿಮ್ಮ ಎಲ್ಲಾ ದೃಶ್ಯಗಳನ್ನು ಅದನ್ನು ನಿರ್ವಹಿಸುವವರು ವೀಕ್ಷಿಸುತ್ತಿದ್ದಾರೆ. ಇದರಿಂದ ನಿಮ್ಮ ಗೌಪ್ಯತೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಬರೆದು ಫೇಸ್ ಬುಕ್ ಪೋಸ್ಟ್ ಗೆ ಫೋಟೋವೊಂದನ್ನು ಸಹ ಲಗತ್ತಿಸಿದೆ. ಈ ಫೋಟೋ ಬಹುಶಃ ಇಲ್ಲಿಗೆ ಭೇಟಿ ನೀಡುವವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಿರೆಂದು ತಿಳಿದುಬಂದಿದೆ.
ವಸ್ತುಸಂಗ್ರಹಾಲಯವು ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದಾಗಿನಿಂದ, ಇದು ದೇಶ ಮತ್ತು ವಿಶ್ವದ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ. ಅಷ್ಟೇ ಅಲ್ಲ, ಅನೇಕರು ಈ ಬಗ್ಗೆ ಹಾಸ್ಯ ಚಟಾಕಿ ಸಹ ಹಾರಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಮ್ಯೂಸಿಯಂ ನಿರ್ದೇಶಕ ಪಿಯೋಟರ್ ಪಿವೊವರ್ಜಿಕ್ ಅವರು, ಇದು ಪಿಆರ್ ಸ್ಟಂಟ್ ಅಥವಾ ಜೋಕ್ ಅಲ್ಲ. ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನಾವು ಇಲ್ಲಿಗೆ ಬರುವ ಜೋಡಿಗಳು ಆ ರೀತಿಯ ಸಂಬಂಧ ಹೊಂದಿರುವ ಮೂರು ರೆಕಾರ್ಡಿಂಗ್‌ಗಳನ್ನು ಹೊಂದಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ : ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಪ್ಪು ಹುಲಿ ಪತ್ತೆ.. ಗಡಿ ಗುರುತಿಸುವಾಗ ಕ್ಯಾಮರಾದಲ್ಲಿ ಸೆರೆ