ETV Bharat / international

ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ಗುಂಡು ಹಾರಿಸಿ ನಾಲ್ವರ ಹತ್ಯೆ: ಅಪ್ರಾಪ್ತ ಆರೋಪಿಗೆ ಜೀವಾವಧಿ ಶಿಕ್ಷೆ - Oxford High School attack

2021 ರ ನವೆಂಬರ್​ನಲ್ಲಿ ಮಿಚಿಗನ್‌ನ ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ಗುಂಡು ಹಾರಿಸಿ ನಾಲ್ಕು ಜನರನ್ನು ಕೊಂದು ಇತರ ಏಳು ಮಂದಿಯನ್ನು ಗಾಯಗೊಳಿಸಿದ 17 ವರ್ಷದ ಬಂದೂಕುಧಾರಿಗೆ ಪೆರೋಲ್‌ ಪಡೆಯುವ ಅವಕಾಶ ತಿರಸ್ಕರಿಸುವ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Life imprisonment
ಜೀವಾವಧಿ ಶಿಕ್ಷೆ
author img

By PTI

Published : Dec 9, 2023, 1:04 PM IST

ಪಾಂಟಿಯಾಕ್ (ಅಮೆರಿಕ): ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಕೊಂದು ಇತರರನ್ನು ಭಯ ಭೀತಗೊಳಿಸಿದ್ದಕ್ಕಾಗಿ ಮಿಚಿಗನ್ ಹದಿಹರೆಯದ ಬಾಲಕನಿಗೆ ನ್ಯಾಯಾಲಯವು ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಕ್ವಾಮೆ ರೋವ್ ನೇತೃತ್ವದ ಪೀಠ ಈ ಆದೇಶ ನೀಡಿದ್ದು, ಶಿಕ್ಷೆ ಕಡಿಮೆ ಮಾಡುವಂತೆ ಸಲ್ಲಿಸಲಾಗಿದ್ದ ವಕೀಲರ ಮನವಿಗಳನ್ನು ತಿರಸ್ಕರಿಸಿದರು. ಜೊತೆಗೆ ಆರೋಪಿ ಎಥಾನ್ ಕ್ರಂಬ್ಲಿ, ಪೆರೋಲ್​ ಮೇಲೆ ಹೊರಬರುವ ಅವಕಾಶವನ್ನು ನಿರಾಕರಿಸಲಾಗಿದೆ.

2021 ರಲ್ಲಿ ತನ್ನ ಶಾಲೆಯ ಮೇಲೆ ದಾಳಿ ಮಾಡಿದಾಗ 15 ವರ್ಷದವನಾಗಿದ್ದ ಕ್ರಂಬ್ಲಿ, "ನಾನು ಬೇಕು ಅಂತಲೇ ಈ ಕೃತ್ಯಗಳನ್ನು ಆಯ್ಕೆ ಮಾಡಿಕೊಂಡು ಮಾಡಿದ್ದೇನೆ. ಯಾರು ನನ್ನನ್ನು ತಡೆಯಲು ಸಾಧ್ಯವಾಗಲಿಲ್ಲ. ನಾನು ನಿಜವಾಗಿಯೂ ಕೆಟ್ಟ ವ್ಯಕ್ತಿ, ಇನ್ನೂ ಭಯಾನಕ ಕೆಲಸಗಳನ್ನು ಮಾಡಿದ್ದೇನೆ" ಎಂದು ಹೇಳಿದ್ದ. ಈ ಹೇಳಿಕೆಗಳ ಆಧಾರ ಮೇಲೆ ಹಾಗೂ ಪೋಷಕರು ಮತ್ತು ಗಾಯಗೊಂಡು ಬದುಕುಳಿದವರ ನೋವಿನ ಮನವಿಗಳನ್ನು ಆಲಿಸಿ ಶಿಕ್ಷೆ ಘೋಷಿಸಿದ್ದಾರೆ.

ಪ್ರಥಮ ದರ್ಜೆ ಕೊಲೆ ಮತ್ತು ಭಯೋತ್ಪಾದನೆ ಸೇರಿದಂತೆ 24 ಆರೋಪಗಳಿಗೆ ಕ್ರಂಬ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಅಪ್ರಾಪ್ತ ವಯಸ್ಕರ ಹಿಂಸಾತ್ಮಕ ಕೃತ್ಯಗಳನ್ನು ವಯಸ್ಕರ ಅಪರಾಧಗಳಿಗಿಂತ ವಿಭಿನ್ನವಾಗಿ ನೋಡಬೇಕು ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಮತ್ತು ರಾಜ್ಯದ ಅತ್ಯುನ್ನತ ನ್ಯಾಯಾಲಯವು ಹೇಳಿದೆ. ಮಿಚಿಗನ್‌ನಲ್ಲಿ ಹದಿಹರೆಯದವರಿಗೆ ನೀಡಿರುವ ಜೀವಾವಧಿ ಶಿಕ್ಷೆ ಅಪರೂಪ ಘಟನೆಯಾಗಿದೆ. ಆದರೆ, ಪೆರೋಲ್ ಪದವು ಕ್ರಂಬ್ಲಿಯ ಪ್ರಕರಣಕ್ಕೆ ಸರಿಹೊಂದುತ್ತದೆ ಎಂದು ಓಕ್ಲ್ಯಾಂಡ್ ಕೌಂಟಿ ಪ್ರಾಸಿಕ್ಯೂಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಗುಂಡು ಸೂಜಿ ನುಂಗಿದ ಬಾಲಕ : ಬ್ರಾಂಕೋಸ್ಕೋಪ್ ಮೂಲಕ ಹೊರತೆಗೆದ ರಿಮ್ಸ್ ವೈದ್ಯರು

ಅಮೆರಿಕದಲ್ಲಿ ನಿತ್ಯ ಒಂದಿಲ್ಲವೊಂದು ಕಡೆ ಗುಂಡಿನ ದಾಳಿಗಳಾಗುತ್ತವೆ. ಶಾಲಾ ಆವರಣ, ಮಾಲ್​ಗಳು ಜನ ನಿಬಿಡ ಪ್ರದೇಶಗಳಲ್ಲಿ ಜನರ ಮೇಲೆ ಸುಖಾಸುಮ್ಮನೆ ಗುಂಡಿನ ದಾಳಿಗಳು ನಡೆಯುತ್ತವೆ. ಈ ದಾಳಿಗಳಲ್ಲಿ ಹಲವರು ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ.

ಕಳೆದ ಎರಡ್ಮೂರು ದಿನಗಳ ಹಿಂದಷ್ಟೇ ಟೆಕ್ಸಾಸ್‌ನ ಎರಡು ನಗರಗಳಾದ ಆಸ್ಟಿನ್ ಮತ್ತು ಸ್ಯಾನ್ ಆಂಟೋನಿಯೊದಲ್ಲಿ ನಡೆದ ನರಹತ್ಯೆ ಮತ್ತು ಗುಂಡಿನ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಸ್ಯಾನ್ ಆಂಟೋನಿಯೊದಲ್ಲಿನ ಪೋರ್ಟ್ ರಾಯಲ್ ಸ್ಟ್ರೀಟ್‌ನ 6400 ಬ್ಲಾಕ್ ಬಳಿಯ ನಿವಾಸದಲ್ಲಿ 50ರ ಹರೆಯದ ಒಬ್ಬ ಪುರುಷ ಮತ್ತು ಮಹಿಳೆ ಶವವಾಗಿ ಪತ್ತೆಯಾಗಿದ್ದರು. ಮಂಗಳವಾರ ಆಸ್ಟಿನ್‌ನಲ್ಲಿ ನಡೆದ ಸರಣಿ ಗುಂಡಿನ ದಾಳಿಗೂ ಮೊದಲು ಪುರುಷ ಮತ್ತು ಮಹಿಳೆ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ಬಳಿಕ ಮಾಹಿತಿ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.