ನವದೆಹಲಿ: ಉಕ್ರೇನ್ ಮೇಲಿನ ಯುದ್ಧಕ್ಕೆ ಸೇನಾ ಪಡೆಗಳನ್ನು ಸಜ್ಜುಗೊಳಿಸುವಂತೆ ಅಧ್ಯಕ್ಷ ಪುಟಿನ್ ಆದೇಶದ ನಂತರ ರಷ್ಯಾದಿಂದ ಹೊರಹೋಗುವ ಪ್ರಯಾಣಿಕ ವಿಮಾನಗಳ ಟಿಕೆಟ್ಗಳ ಮಾರಾಟ ಒಮ್ಮೆಲೇ ಹೆಚ್ಚಾಗಿದ್ದು, ಟಿಕೆಟ್ ದರಗಳು ಸಹ ಗಗನಕ್ಕೇರಿವೆ. ರಷ್ಯಾದಲ್ಲಿ ಮಾರ್ಷಲ್ ಲಾ ಹೇರುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ದಟ್ಟವಾಗಿವೆ. ಒಂದು ವೇಳೆ ಮಾರ್ಷಲ್ ಲಾ ಜಾರಿಯಾದರೆ ಯುದ್ಧದಲ್ಲಿ ಹೋರಾಡಬಲ್ಲ ವಯಸ್ಸಿನ ಪುರುಷರು ದೇಶ ಬಿಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಸಾಧ್ಯ ಇದ್ದವರು ದೇಶ ಬಿಡುತ್ತಿದ್ದಾರೆಂದು ನಂಬಲಾಗಿದೆ.
-
Flights departing Moscow and St. Petersburg today. The @AP is reporting international flights departing Russia have either sold out or skyrocketed in price after Putin announced a mobilization of reservists.
— Flightradar24 (@flightradar24) September 21, 2022 " class="align-text-top noRightClick twitterSection" data="
Search SVO, VKO, DME for Moscow airports and LED for St. Petersburg. pic.twitter.com/LV2PrkwPD9
">Flights departing Moscow and St. Petersburg today. The @AP is reporting international flights departing Russia have either sold out or skyrocketed in price after Putin announced a mobilization of reservists.
— Flightradar24 (@flightradar24) September 21, 2022
Search SVO, VKO, DME for Moscow airports and LED for St. Petersburg. pic.twitter.com/LV2PrkwPD9Flights departing Moscow and St. Petersburg today. The @AP is reporting international flights departing Russia have either sold out or skyrocketed in price after Putin announced a mobilization of reservists.
— Flightradar24 (@flightradar24) September 21, 2022
Search SVO, VKO, DME for Moscow airports and LED for St. Petersburg. pic.twitter.com/LV2PrkwPD9
ರಷ್ಯಾದಿಂದ ಹೊರಹೋಗುವ ಒನ್-ವೇ ವಿಮಾನಗಳಿಗೆ ಪ್ರಯಾಣಿಕರ ದಟ್ಟಣೆ ಉಂಟಾಗಿದೆ ಎಂದು ವಿಮಾನಗಳ ಟ್ರ್ಯಾಕಿಂಗ್ ಸಂಸ್ಥೆ ಫ್ಲೈಟ್ರಡಾರ್24 ಹೇಳಿದೆ.
ಈ ವಾರ ರಷ್ಯಾದಿಂದ ಹೊರಹೋಗುವ ವಿಮಾನಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದೆ ಎಂದು ಏರ್‌ಲೈನ್ ಮತ್ತು ಟ್ರಾವೆಲ್ ಏಜೆಂಟ್ ಡೇಟಾ ಬುಧವಾರ ತೋರಿಸಿದೆ ಎಂದು ಜಾಗತಿಕ ಮಾಧ್ಯಮವೊಂದು ವರದಿ ಮಾಡಿದೆ. ಉಕ್ರೇನ್‌ನಲ್ಲಿ ಮಾಸ್ಕೋದ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಪುಟಿನ್ ಘೋಷಿಸಿದಾಗಿನಿಂದ ರಷ್ಯಾ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ರಷ್ಯಾ ಅಧ್ಯಕ್ಷ ಪುಟಿನ್ ನಿನ್ನೆ ತಮ್ಮ ಸೇನಾಪಡೆಗಳ ಭಾಗಶಃ ಸಜ್ಜುಗೊಳಿಸುವಿಕೆಗೆ ಆದೇಶಿಸಿದ್ದರು. ಉಕ್ರೇನ್ ವಿರುದ್ಧ ಹೋರಾಡಲು 3 ಲಕ್ಷದಷ್ಟು ಕಾಯ್ದಿಟ್ಟ ಸೇನಾಪಡೆಯನ್ನು ಸಜ್ಜುಗೊಳಿಸಲು ಪುಟಿನ್ ಆದೇಶ ನೀಡಿದ್ದಾರೆ.
ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಭಾರತ ನ್ಯಾಯಸಮ್ಮತ ವರ್ಚಸ್ಸು ಪಡೆದು ಅನುಭವಿಸುತ್ತಿದೆ: ರಷ್ಯಾಧ್ಯಕ್ಷ ಪುಟಿನ್