ETV Bharat / international

ಮಾಲ್ಡೀವ್ಸ್‌: ಮಾಲೆ ಮೇಯರ್ ಚುನಾವಣೆಯಲ್ಲಿ ಭಾರತ ಪರವಾಗಿರುವ ಪಕ್ಷಕ್ಕೆ ಭರ್ಜರಿ ಗೆಲುವು - MDP wins

ಭಾರತದೊಂದಿಗಿನ ರಾಜತಾಂತ್ರಿಕ ವಿವಾದದ ಮಧ್ಯೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರ ಪಕ್ಷವು ಮಾಲೆ ಮೇಯರ್ ಚುನಾವಣೆಯಲ್ಲಿ ಸೋತಿದೆ.

Maldives President Muizzu's party loses Male Mayoral poll

author img

By PTI

Published : Jan 14, 2024, 1:02 PM IST

ಮಾಲೆ(ಮಾಲ್ಡೀವ್ಸ್​): ರಾಜಧಾನಿ ಮಾಲೆ ಮೇಯರ್ ಚುನಾವಣೆಯಲ್ಲಿ ಭಾರತದ ಪರವಾಗಿರುವ ಅಲ್ಲಿನ ವಿರೋಧ ಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರಿಗೆ ಭಾರಿ ಹಿನ್ನಡೆಯಾಗಿದೆ. ಎಂಡಿಪಿ ಅಭ್ಯರ್ಥಿ ಆ್ಯಡಮ್ ಅಜೀಮ್ ಅವರು ಮಾಲೆಯ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಮುಯಿಝು ತಮ್ಮ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅಜೀಮ್ ದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಮಾಲ್ಡೀವ್ಸ್ ಮಾಧ್ಯಮಗಳು ಎಂದು ವರದಿ ಮಾಡಿವೆ. ಭಾರತದ ಪರವಾಗಿ ಒಲವು ಹೊಂದಿರುವ ದೇಶದ ಮಾಜಿ ಅಧ್ಯಕ್ಷ ಮೊಹಮ್ಮದ್ ಸೋಲಿಹ್ ಎಂಡಿಪಿಯ ಮುಖ್ಯಸ್ಥರಾಗಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾ ಪರವಾಗಿರುವ ಮುಯಿಝು ವಿರುದ್ಧ ಮೊಹಮ್ಮದ್ ಸೋಲಿಹ್ ಸೋತಿದ್ದರು.

41 ಮತಪೆಟ್ಟಿಗೆಗಳಲ್ಲಿನ ಮತಗಳನ್ನು ಎಣಿಕೆ ಮಾಡಲಾಗಿದ್ದು, ಅಜೀಮ್ 5,303 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಮುಯಿಝು ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್‌ನ (ಪಿಎನ್‌ಸಿ) ಆಯಿಷಾತ್ ಅಜಿಮಾ ಶಕೂರ್ 3,301 ಮತಗಳನ್ನು ಪಡೆದಿದ್ದಾರೆ ಎಂದು ಮಾಲ್ಡೀವ್ಸ್ ನ ಸನ್ ಆನ್ ಲೈನ್ ಸುದ್ದಿ ಪೋರ್ಟಲ್ ವರದಿ ಮಾಡಿದೆ. ವರದಿಗಳ ಪ್ರಕಾರ ಶನಿವಾರ ನಡೆದ ಮತದಾನದಲ್ಲಿ ಕಡಿಮೆ ಮತದಾನವಾಗಿದೆ. ತಮ್ಮ ಗೆಲುವು ಮಾಲೆಯ ಎಲ್ಲಾ ನಿವಾಸಿಗಳ ಗೆಲುವು ಎಂದು ಅಜೀಮ್ ಹೇಳಿದರು.

ಮೇಯರ್ ಚುನಾವಣೆಯ ಗೆಲುವು ಈಗಲೂ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಎಂಡಿಪಿಯ ರಾಜಕೀಯ ಬಲವನ್ನು ಪುನರುಜ್ಜೀವನಗೊಳಿಸುವ ನಿರೀಕ್ಷೆಯಿದೆ. ಚೀನಾಕ್ಕೆ ಐದು ದಿನಗಳ ಅಧಿಕೃತ ಭೇಟಿಯ ನಂತರ ಶನಿವಾರ ಮಾಲೆಗೆ ಮರಳಿದ ಮುಯಿಝು, ಅಜೀಮ್ ಅವರನ್ನು ಅಭಿನಂದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಯಿಝು ಸರ್ಕಾರದ ಮೂವರು ಉಪ ಸಚಿವರು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದರು. ಇದರಿಂದ ಭಾರತ ಮತ್ತು ಮಾಲ್ಡೀವ್ಸ್​ ಮಧ್ಯೆ ತೀವ್ರ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿತ್ತು. ಈ ವಿವಾದದ ಬೆನ್ನಲ್ಲೇ ನಡೆದಿರುವ ಪ್ರಮುಖ ಚುನಾವಣೆಯಲ್ಲಿ ಚೀನಾ ಪರ ಒಲವು ಹೊಂದಿರುವ ಅಧ್ಯಕ್ಷ ಮುಯಿಝು ಅವರ ಪಕ್ಷಕ್ಕೆ ಹಿನ್ನಡೆಯಾಗಿರುವುದು ಗಮನಾರ್ಹವಾಗಿದೆ. ಈ ಮಧ್ಯೆ ಐದು ದಿನಗಳ ಕಾಲ ಚೀನಾಗೆ ಭೇಟಿ ನೀಡಿದ್ದ ಮುಯಿಝು, ಮಾಲ್ಡೀವ್ಸ್​ ಅನ್ನು ಚೀನಾಗೆ ಹತ್ತಿರವಾಗಿಸಲು ಪ್ರಯತ್ನಿಸಿದ್ದಾರೆ.

ಮುಯಿಝು ಸಂಪುಟದ ಮೂವರು ಸಚಿವರು ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್​ ಅಭಿಯಾನ ತೀವ್ರತೆ ಪಡೆದಿದೆ ಹಾಗೂ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್​ಗೆ ಹೋಗಲ್ಲ ಎಂದು ಅಭಿಯಾನ ನಡೆದಿದೆ. ರಷ್ಯಾ ನಂತರ ಭಾರತೀಯರೇ ಅತ್ಯಧಿಕ ಸಂಖ್ಯೆಯಲ್ಲಿ ಮಾಲ್ಡೀವ್ಸ್​ಗೆ ಭೇಟಿ ನೀಡುತ್ತಾರೆ. ನಂತರದ ಸ್ಥಾನದಲ್ಲಿ ಚೀನಾ ಪ್ರವಾಸಿಗರಿದ್ದಾರೆ. ತನ್ನ ಸಚಿವರ ಹೇಳಿಕೆಯಿಂದ ಉಂಟಾದ ವಿವಾದವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಅಧ್ಯಕ್ಷ ಮುಯಿಝು ಮೂವರು ಸಚಿವರನ್ನು ವಜಾ ಮಾಡಿದ್ದರು.

ಇದನ್ನೂ ಓದಿ: ಬಲೂಚಿಸ್ತಾನ: ಐವರು ಪಾಕಿಸ್ತಾನ ಸೈನಿಕರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.