ರಿಯೊ (ಬ್ರೆಜಿಲ್): ಪ್ರಕೃತಿಯ ಕೆಲವು ನೋಟಗಳು ಅನಿರೀಕ್ಷಿತ ಮತ್ತು ವಿಸ್ಮಯಕಾರಿ. ಕ್ಯಾಮರಾದ ಲಭ್ಯತೆಯು ಈ ರೀತಿಯ ಏನಾದರೂ ಸಂಭವಿಸಿದೆ ಎಂದು ನಂಬುವಂತೆ ಮಾಡುತ್ತದೆ. ಬ್ರೆಜಿಲ್‌ನ ಅತ್ಯಂತ ಸಾಂಪ್ರದಾಯಿಕ ಸ್ಮಾರಕದಲ್ಲಿ ಇತ್ತೀಚೆಗೆ ಅದು ಸಂಭವಿಸಿದೆ. ಫೆಬ್ರವರಿ 10ರಂದು ಏಸು ಕ್ರಿಸ್ತನ ಪ್ರತಿಮೆ( ಕ್ರೈಸ್ಟ್ ದಿ ರಿಡೀಮರ್)ಗೆ ಸಿಡಿಲು ಬಡಿದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಪೋಟೋಗಳು ಜಾಗತಿಕವಾಗಿ ಗಮನ ಸೆಳೆಯುತ್ತಿದ್ದು, ಜನರನ್ನು ವಿಸ್ಮಯಗೊಳಿಸಿದೆ.
ಜನಪ್ರಿಯ ತಾಣ: ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿರುವ 100 ಅಡಿ ಎತ್ತರದ ಏಸು ಕ್ರಿಸ್ತನ ಪ್ರತಿಮೆಯನ್ನು ನೋಡಲು ಪ್ರತಿ ವರ್ಷ ಸುಮಾರು ಎರಡು ಮಿಲಿಯನ್ ಜನರು ಭೇಟಿ ನೀಡುತ್ತಾರೆ. 2014ರಲ್ಲಿ ಸಿಡಿಲು ಬಡಿದು ಪ್ರತಿಮೆಯ ಹೆಬ್ಬೆರಳಿಗೆ ಹಾನಿಯಾಗಿತ್ತು. ಪ್ರತಿಮೆಗೆ ಹಲವು ಬಾರಿ ಸಿಡಿಲು ಬಡಿದಿದೆ. ಹಾನಿಯ ಹೊರತಾಗಿಯೂ, ಈ ಪ್ರತಿಮೆಯು ಬ್ರೆಜಿಲ್‌ನ ಅತ್ಯಂತ ಅಪ್ರತಿಮ ಹೆಗ್ಗುರುತುಗಳಲ್ಲಿ ಒಂದಾಗಿದೆ. ಪ್ರತಿವರ್ಷ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ಧಾರ್ಮಿಕ ಪ್ರಾಮುಖ್ಯತೆ ಪಡೆದಿರುವ ಈ ಪ್ರತಿಮೆ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಜನಪ್ರಿಯ ತಾಣವಾಗಿ ಉಳಿದಿದೆ.
ಕೆಲವರು ದೇವರ ಅಸ್ತಿತ್ವವನ್ನು ನಂಬುತ್ತಾರೆ. ಮತ್ತೆ ಕೆಲವರು ನೈಸರ್ಗಿಕ ಶಕ್ತಿಗಳೇ ದೇವರು ಎಂದು ಹೇಳುತ್ತಾರೆ. ಆದರೆ ಬ್ರೆಜಿಲ್‌ನ ರಿಯೊ ಡಿ ಜನೈರೊದ ಜನರು, ಈ ಎರಡೂ ಶಕ್ತಿಗಳ ಸಮ್ಮಿಲನ ಎನ್ನಬಹುದಾದ ಘಟನೆಯೊಂದನ್ನು ತಮ್ಮ ಕಣ್ಣಾರೆ ನೋಡಿದ್ದಾರೆ. ಸಿಡಿಲು ಬಡಿದ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರವನ್ನು @Rainmaker1973 ಬಳಕೆದಾರರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಫರ್ನಾಂಡೋ ಬ್ರಾಗಾ ಎಂಬುವವರು ಈ ಅದ್ಭುತ ದೃಶ್ಯವನ್ನು ಸೆರೆಹಿಡಿದಿದ್ದಾರೆ.
-
Lightning struck Christ the Redeemer in Rio de Janeiro on February 10, 2023
— Massimo (@Rainmaker1973) February 11, 2023 " class="align-text-top noRightClick twitterSection" data="
[more📷by Fernando Braga: https://t.co/xSDfq7x5Z3] pic.twitter.com/FLr25VhLEB
">Lightning struck Christ the Redeemer in Rio de Janeiro on February 10, 2023
— Massimo (@Rainmaker1973) February 11, 2023
[more📷by Fernando Braga: https://t.co/xSDfq7x5Z3] pic.twitter.com/FLr25VhLEBLightning struck Christ the Redeemer in Rio de Janeiro on February 10, 2023
— Massimo (@Rainmaker1973) February 11, 2023
[more📷by Fernando Braga: https://t.co/xSDfq7x5Z3] pic.twitter.com/FLr25VhLEB
ಇದನ್ನೂ ಓದಿ: ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಯೋಜನೆ ಇಂದು ನಿನ್ನೆಯದ್ದಲ್ಲ: ಡಿಕೆಶಿ ಸ್ಪಷ್ಟನೆ
ಫ್ರೆಂಚ್ ಶಿಲ್ಪಿಯಿಂದ ನಿರ್ಮಾಣವಾದ ಪ್ರತಿಮೆ: ರಿಯೊ ಡಿ ಜನೈರೊದಲ್ಲಿನ ಏಸು ಕ್ರಿಸ್ತನ ಪ್ರತಿಮೆಯನ್ನು ಫ್ರೆಂಚ್ ಶಿಲ್ಪಿ ಪಾಲ್ ಲ್ಯಾಂಡೋವ್ಸ್ಕಿ ಅವರು ನಿರ್ಮಿಸಿದ್ದಾರೆ. ಬ್ರೆಜಿಲಿಯನ್ ಎಂಜಿನಿಯರ್ ಹೀಟರ್ ಡಾ ಸಿಲ್ವಾ ಕೋಸ್ಟಾ ಅವರು ಫ್ರೆಂಚ್ ಎಂಜಿನಿಯರ್ ಆಲ್ಬರ್ಟ್ ಕಾಕೋಟ್ ಅವರ ಸಹಯೋಗದೊಂದಿಗೆ ಇದನ್ನು ನಿರ್ಮಿಸಿದ್ದಾರೆ. ಪ್ರತಿಮೆಯನ್ನು 1922 ಮತ್ತು 1931ರ ನಡುವೆ ನಿರ್ಮಿಸಲಾಗಿದೆ. 30 ಮೀಟರ್ ಎತ್ತರವಿದೆ. ಇದು ಕಾಂಕ್ರೀಟ್ ಮತ್ತು ಸೋಪ್ ಸ್ಟೋನ್ ನಿಂದ ಮಾಡಲ್ಪಟ್ಟಿದೆ. ಈ ಪ್ರತಿಮೆ ಟಿಜುಕಾ ರಾಷ್ಟ್ರೀಯ ಉದ್ಯಾನವನದಲ್ಲಿ 700-ಮೀಟರ್ ಕೊರ್ಕೊವಾಡೊ ಪರ್ವತದ ಶಿಖರದಲ್ಲಿದೆ. ಇದು ವಿಶ್ವದ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ.
ಕೋವಿಡ್ ಸಂತ್ರಸ್ತರಿಗೆ ನಮನ: 2020ರಲ್ಲಿ ವಿಶ್ವವೇ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ವೇಳೆ ಭರವಸೆ ಮೂಡಿಸಲು, ವೈರಸ್ಗೆ ಬಲಿಯಾದವರಿಗೆ ಗೌರವ ಸಲ್ಲಿಸಲು ಹಾಗೂ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೃತಜ್ಞತೆ ಅರ್ಪಿಸಲು ರಿಯೊ ಡಿ ಜನೈರೊದಲ್ಲಿನ ಕ್ರೈಸ್ಟ್ ದಿ ರಿಡೀಮರ್ ಪ್ರತಿಮೆಯನ್ನ ವಿಶೇಷ ಪ್ರೊಜೆಕ್ಷನ್ಲ್ಲಿ ಬೆಳಗಿಸಲಾಗಿತ್ತು. ವಿಶ್ವಸಂಸ್ಥೆಯ ಸಹಕಾರದೊಂದಿಗೆ ಬ್ರೆಜಿಲ್‌ನ ಬಿಷಪ್‌ಗಳ ರಾಷ್ಟ್ರೀಯ ಸಮ್ಮೇಳನ (ಸಿಎನ್‌ಬಿಬಿ) ಮತ್ತು ಬ್ರೆಜಿಲಿಯನ್ ಕ್ಯಾರಿಟಾಸ್ (ಸಿಎನ್‌ಬಿಬಿಯ ಒಂದು ಸಂಸ್ಥೆ) ಇದನ್ನು ಆಯೋಜಿಸಿತ್ತು.
ಇದನ್ನೂ ಓದಿ: ಏಸು ಕ್ರಿಸ್ತನ ಪ್ರತಿಮೆ ಬೆಳಗಿಸಿ ಕೋವಿಡ್ ಸಂತ್ರಸ್ತರಿಗೆ ನಮನ