ETV Bharat / international

ಕೀನ್ಯಾ ರೈತರಿಗೆ ಕುಲಿಯಾ ಹಕ್ಕಿಗಳ ತಲೆನೋವು; 60 ಲಕ್ಷ ಬಾನಾಡಿಗಳ ಕೊಲ್ಲಲು ನಿರ್ಧಾರ - ಹಕ್ಕಿಗಳ ಹಿಂಡು ಬಂದು ಭತ್ತದ ಬೆಳೆಯನ್ನು ಹಾಳು

ಕೀನ್ಯಾದಲ್ಲಿ ರೈತರ ಬೆಳೆಗಳ ಮೇಲೆ ಸಾವಿರಾರು ಪಕ್ಷಿಗಳ ಹಿಂಡು ದಾಳಿ ಮಾಡಿ ನಾಶ ಮಾಡುತ್ತಿವೆ. ಹೀಗಾಗಿ ಅಲ್ಲಿನ ಸರ್ಕಾರ 60 ಲಕ್ಷಕ್ಕೂ ಹೆಚ್ಚು ಪಕ್ಷಿಗಳನ್ನು ಕೊಂದು ಹಾಕಲು ನಿರ್ಧರಿಸಿದೆ.

kuliya birds group attack  kuliya birds group attack on crops  kuliya birds group attack on crops in Kenya  ಪಕ್ಷಿಗಳನ್ನು ಕೊಲ್ಲುವುದಕ್ಕೆ ಸರ್ಕಾರ ನಿರ್ಧಾರ  ರೈತರಿಗೆ ಎದುರಾದ ಕಷ್ಟ  ಬೆಳೆಗಳ ಮೇಲೆ ಸಾವಿರಾರೂ ಪಕ್ಷಿಗಳ ಹಿಂಡು ದಾಳಿ ಮಾಡಿ ನಾಶ  ಲಕ್ಷಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲಲು ನಿರ್ಧಾರ  ಬೆಳೆ ತನ್ನ ಕಣ್ಣೆದುರೇ ನಾಶವಾದರೆ ಯಾವುದೇ ರೈತನಿಗೆ ದುಃಖ  ಬ್ಯಾಂಕ್‌ಗಳಲ್ಲಿ ಬಡ್ಡಿಗೆ ಸಾಲ  ಹಕ್ಕಿಗಳ ಹಿಂಡು ಬಂದು ಭತ್ತದ ಬೆಳೆಯನ್ನು ಹಾಳು  ಬೆಳೆಗಳನ್ನು ಕುಲಿಯಾ ಪಕ್ಷಿಗಳು ತಿಂದು ಹಾಕಿವೆ
ಕುಲಿಯಾ ಪಕ್ಷಿ
author img

By

Published : Jan 27, 2023, 9:25 AM IST

ಕೀನ್ಯಾ: ಬ್ಯಾಂಕ್‌ಗಳ ಬಡ್ಡಿಗೂ ಸಾಲ ಮಾಡಿ ಬದುಕು ಸಾಗಿಸುತ್ತಿರುವ ಕೀನ್ಯಾದ ರೈತರಿಗೆ ಹಕ್ಕಿಗಳ ಹಿಂಡು ದುಸ್ವಪ್ನವಾಗಿ ಕಾಡುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಈ ಹಕ್ಕಿಗಳು ತಿಂದು ಮುಗಿಸುತ್ತಿವೆ. ಹೀಗಾಗಿ ಬಾನಾಡಿಗಳ ಕಾಟ ನಿಯಂತ್ರಿಸಲು ಅಲ್ಲಿನ ಆಡಳಿತವು ಅವುಗಳ ಮಾರಣಹೋಮಕ್ಕೆ ನಿರ್ಧರಿಸಿದೆ.

2021ರಲ್ಲಿ ಮಿಡತೆಗಳ ಹಿಂಡು ಭಾರತದ ಕೆಲವು ಭಾಗಗಳ ಜಮೀನುಗಳ ಮೇಲೆ ದಿಢೀರ್ ದಾಳಿ ಮಾಡಿದ್ದ ಘಟನೆಗಳು ನಿಮಗೆ ನೆನಪಿರಬಹುದು. ಅದೇ ರೀತಿಯಲ್ಲಿ ಕೀನ್ಯಾದಲ್ಲಿ ಕುಲಿಯಾ ಎಂಬ ಪಕ್ಷಿಗಳು ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ತಿಂದು ನಾಶಪಡಿಸುತ್ತಿವೆ. ಸರ್ಕಾರ ತನ್ನ ಕೊನೆಯ ಪ್ರಯತ್ನವಾಗಿ ಸುಮಾರು 60 ಲಕ್ಷ ಕುಲಿಯಾ ಪಕ್ಷಿಗಳನ್ನು ಇದೀಗ ಕೊಲ್ಲಲು ತೀರ್ಮಾನ ಕೈಗೊಂಡಿದೆ.

kuliya birds group attack  kuliya birds group attack on crops  kuliya birds group attack on crops in Kenya  ಪಕ್ಷಿಗಳನ್ನು ಕೊಲ್ಲುವುದಕ್ಕೆ ಸರ್ಕಾರ ನಿರ್ಧಾರ  ರೈತರಿಗೆ ಎದುರಾದ ಕಷ್ಟ  ಬೆಳೆಗಳ ಮೇಲೆ ಸಾವಿರಾರೂ ಪಕ್ಷಿಗಳ ಹಿಂಡು ದಾಳಿ ಮಾಡಿ ನಾಶ  ಲಕ್ಷಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲಲು ನಿರ್ಧಾರ  ಬೆಳೆ ತನ್ನ ಕಣ್ಣೆದುರೇ ನಾಶವಾದರೆ ಯಾವುದೇ ರೈತನಿಗೆ ದುಃಖ  ಬ್ಯಾಂಕ್‌ಗಳಲ್ಲಿ ಬಡ್ಡಿಗೆ ಸಾಲ  ಹಕ್ಕಿಗಳ ಹಿಂಡು ಬಂದು ಭತ್ತದ ಬೆಳೆಯನ್ನು ಹಾಳು  ಬೆಳೆಗಳನ್ನು ಕುಲಿಯಾ ಪಕ್ಷಿಗಳು ತಿಂದು ಹಾಕಿವೆ
ಕುಲಿಯಾ ಪಕ್ಷಿಗಳ ಹಿಂಡು

ಕುಲಿಯಾ ಪಕ್ಷಿಗಳು ನೋಡಲು ಬಹುತೇಕ ಗುಬ್ಬಚ್ಚಿಗಳಂತೆ ಕಾಣುತ್ತವೆ. ಕೆಂಪು ಮೂಗಿನಿಂದ ರೂಪುಗೊಂಡಿರುವ ಈ ಪಕ್ಷಿಗಳು ನೋಡಲು ಬಹಳ ಸುಂದರವಾಗಿವೆ. ಇದನ್ನು ಆಫ್ರಿಕನ್ ನೈಟಿಂಗೇಲ್ ಎಂದೂ ಕರೆಯುತ್ತಾರೆ. ಈ ಪಕ್ಷಿಗಳು ಕೀನ್ಯಾ ಸಮೃದ್ಧವಾಗಿದ್ದು, ಗುಂಪುಗಳಲ್ಲಿ ಚಲಿಸುತ್ತವೆ. ಮುಖ್ಯವಾಗಿ ಬೀಜಗಳಂದ್ರೆ ಅವುಗಳಿಗೆ ಅಚ್ಚುಮೆಚ್ಚು. ಕಳೆದ ಹತ್ತು ವರ್ಷಗಳಿಂದ ಪೂರ್ವ ಆಫ್ರಿಕಾದ ದೇಶಗಳಲ್ಲಿ ಬರ ಪರಿಸ್ಥಿತಿ ಇದೆ. ಹುಲ್ಲುಗಾವಲುಗಳು ಒಣಗಿ ಹೋಗುತ್ತಿವೆ. ಕುಲಿಯಾ ಪಕ್ಷಿಗಳ ನೈಸರ್ಗಿಕ ಆಹಾರವಾದ ಹುಲ್ಲು ಬೀಜಗಳ ಕೊರತೆ ಉಂಟಾಗಿದೆ. ಪರಿಣಾಮವಾಗಿ, ಅವು ಆಹಾರಕ್ಕಾಗಿ ಅಕ್ಕಿ ಮತ್ತು ಗೋಧಿ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ.

ಕೀನ್ಯಾದ ಕೆಲವು ಭಾಗಗಳಲ್ಲಿ ಮುಕ್ಕಾಲು ಭಾಗದಷ್ಟು ಬೆಳೆಗಳನ್ನು ಕುಲಿಯಾ ಪಕ್ಷಿಗಳು ತಿನ್ನುತ್ತಿವೆ. ರೈತರು ತಮ್ಮ ಬೆಳೆಗಳನ್ನು ರಕ್ಷಿಸಲು ಪಕ್ಷಿಗಳನ್ನು ಕೊಲ್ಲಲು ದೊಡ್ಡ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಕೀನ್ಯಾ ಸರ್ಕಾರ ಸಹ ರೈತರಿಗೆ ಸಹಾಯ ಮಾಡುತ್ತಿದೆ. 6 ಮಿಲಿಯನ್ ಕುಲಿಯಾ ಪಕ್ಷಿಗಳನ್ನು ಏಕಕಾಲದಲ್ಲಿ ನಿರ್ಮೂಲನೆ ಮಾಡುವ ಗುರಿ ಹೊಂದಿದೆ. ಇದಕ್ಕಾಗಿ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನೂ ಮೀಸಲಿಡಲು ಕೀನ್ಯಾ ಸರ್ಕಾರ ಮುಂದಾಗಿದೆ.

ಕೀನ್ಯಾದ ಅಧಿಕಾರಿ ಜೇರೆಡ್ ಓಡೋಯೊ ಮಾತನಾಡಿ, "ಪಶ್ಚಿಮ ಕಾನೋ ಪ್ರದೇಶವೊಂದರಲ್ಲೇ 5 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೆಳೆಯಲಾಗುತ್ತಿದೆ. ಮುಕ್ಕಾಲು ಪಾಲು ಧಾನ್ಯವನ್ನು ಕೆಂಪು ಬಣ್ಣದ ಕುಲಿಯಾ ಪಕ್ಷಿಗಳು ತಿಂದು ಹಾಕುತ್ತಿವೆ. ಇಲ್ಲಿ ರೈತರು ಬ್ಯಾಂಕ್​ಗಳಲ್ಲಿ ಸಾಲ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಬೆಳೆ ಸಾಲದ ಜತೆಗೆ ಬಡ್ಡಿ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪಕ್ಷಿಗಳಿಂದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ" ಎಂದು ತಿಳಿಸಿದರು.

ಡ್ರೋನ್​ನಿಂದ ಕೀಟನಾಶಕ ಔಷಧಿ ಸಿಂಪಡಣೆ..

ಇನ್ನೊಂದೆಡೆ, ಸರ್ಕಾರದ ಕ್ರಮಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪರಿಸರವಾದಿ ಪೌಲ್ ಗಚೇರು ಮಾತನಾಡಿ, "ಪಕ್ಷಿಗಳನ್ನು ಕೊಲ್ಲುವುದರಿಂದ ಪ್ರಕೃತಿಯ ಸಮತೋಲನ ಹಾಳಾಗುತ್ತದೆ. ಡ್ರೋನ್‌ಗಳ ಮೂಲಕ ರಾಸಾಯನಿಕಗಳನ್ನು ಸಿಂಪಡಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಪಕ್ಷಿಗಳ ನಿಯಂತ್ರಣಕ್ಕೆ ಸರಕಾರ ಪರಿಸರಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು" ಎಂದು ಸಲಹೆ ನೀಡಿದರು.

"ವಿಶ್ವ ಆಹಾರ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರತಿ ಕುಲಿಯಾ ಹಕ್ಕಿ ಒಂದು ದಿನದಲ್ಲಿ 10 ಗ್ರಾಂ ಧಾನ್ಯವನ್ನು ತಿನ್ನುತ್ತದೆ. ಹೀಗಾಗಿ, ಕುಲಿಯಾ ಪಕ್ಷಿಗಳ ಹಿಂಡುಗಳು ಅದೆಷ್ಟು ಆಹಾರವನ್ನು ತಿನ್ನುತ್ತವೆ ಎಂದು ನಾವು ಊಹಿಸಬಹುದು" ಎಂದರು.

ಇದನ್ನೂ ಓದಿ: ನಾವು ಇಂದಿಗೂ ಮಾನವನ ದೇಹದಲ್ಲಿ ಪೂರ್ವಜರ ಈ 5 ಕುರುಹುಗಳನ್ನ ಕಾಣಬಹುದು!.. ಹೇಗೆ ಅಂತೀರಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.