ಕಿರಬಾಸ್(ಆಸ್ಟ್ರೇಲಿಯಾ): ಇಂದು 2024. ಹೊಸ ವರ್ಷದ ಖುಷಿ. ವಿಶ್ವದೆಲ್ಲೆಡೆ ಹೊಸ ವರ್ಷವನ್ನು ಸಂತಸ ಸಂಭ್ರಮದಿಂದ ಬರಮಾಡಿಕೊಳ್ಳಲಾಗಿದೆ. ಆದರೆ ಯಾವ ದೇಶ ಮೊದಲು ಹೊಸ ವರ್ಷಾಚರಿಸಿತು?, ಭಾರತಕ್ಕಿಂತ ಮುಂಚಿತವಾಗಿ ಹಾಗು ನಂತರ ಯಾವೆಲ್ಲ ದೇಶಗಳು ಹೊಸ ವರ್ಷವನ್ನು ಬರಮಾಡಿಕೊಂಡವು ಎಂಬುದರ ಮಾಹಿತಿ ಇಲ್ಲಿದೆ.
ಮಧ್ಯ ಪೆಸಿಫಿಕ್ ಮಹಾಸಾಗರದ ಓಷಿಯಾನಿಯಾದ ಮೈಕ್ರೋನೇಶಿಯಾ ಉಪ-ವಲಯದಲ್ಲಿ ರಿಪಬ್ಲಿಕ್ ಆಫ್ ಕಿರಿಬಾಸ್ ಅಥವಾ ಕಿರಬಾಟಿ ಎಂಬ ಸಣ್ಣ ದ್ವೀಪ ರಾಷ್ಟ್ರವಿದೆ. ಸಮಯದನುಸಾರ ವಿಶ್ವದ ಎಲ್ಲಾ ದೇಶಗಳಿಗಿಂತ ಈ ರಾಷ್ಟ್ರ ಮುಂದಿದೆ. ಈ ಕಾರಣಕ್ಕಾಗಿ 2024 ಅನ್ನು ಎಲ್ಲರಿಗಿಂತ ಮೊದಲು ಸ್ವಾಗತಿಸಿತು. ಭಾನುವಾರ (ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ) ಕಿರಿಬಾಸ್‌ನಲ್ಲಿ ಹೊಸ ವರ್ಷದ ಗಂಟೆ ಮೊಳಗಿತು. ಇಲ್ಲಿರುವ ಜನಸಂಖ್ಯೆ ಕೇವಲ 1.2 ಲಕ್ಷ. ಸಮಭಾಜಕ ರೇಖೆ ಹಾಗು ಅಂತರರಾಷ್ಟ್ರೀಯ ದಿನಾಂಕ ರೇಖೆ ಈ ದ್ವೀಪಗಳ ಮೂಲಕ ಹಾದು ಹೋಗುತ್ತದೆ.
ಹೊಸ ವರ್ಷವನ್ನು ಆಚರಿಸುವ ಕೊನೆಯ ದೇಶ ಸಮೋವಾ. ಕೇವಲ 45,000 ಜನಸಂಖ್ಯೆ ಹೊಂದಿರುವ ಈ ದೇಶ ನ್ಯೂಜಿಲೆಂಡ್‌ನ ಈಶಾನ್ಯಕ್ಕೆ 2,600 ಕಿ.ಮೀ ಮತ್ತು ಹವಾಯಿಯಿಂದ 3,500 ಕಿ.ಮೀ ನೈಋತ್ಯದಲ್ಲಿದೆ. ಇದರ ನಂತರ, ಫಿಜಿ, ಆಸ್ಟ್ರೇಲಿಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಪಶ್ಚಿಮ ಭಾಗದ ದೇಶಗಳು ಹೊಸ ವರ್ಷವನ್ನು ಸ್ವಾಗತಿಸಿವೆ.
ಹೊಸ ವರ್ಷಾಚರಣೆಯಲ್ಲಿ ಯಾರು ಮುಂದು?(ಜಾಗತಿಕ ಕಾಲಮಾನದ ಪ್ರಕಾರ)
- ಮಧ್ಯಾಹ್ನ 3:30 IST: ಕಿರಿಬಾಸ್
- ಸಂಜೆ 4:30 IST: ನ್ಯೂಜಿಲೆಂಡ್
- ಸಂಜೆ 5:30 IST: ಫಿಜಿ, ರಷ್ಯಾದ ಸಣ್ಣ ಪ್ರದೇಶ
- ಸಂಜೆ 6:30 IST: ಆಸ್ಟ್ರೇಲಿಯಾದ ಬಹುಭಾಗ
- ರಾತ್ರಿ 8:30 IST: ಜಪಾನ್, ದಕ್ಷಿಣ ಕೊರಿಯಾ
- ರಾತ್ರಿ 9.30 IST: ಚೀನಾ, ಮಲೇಷಿಯಾ, ಸಿಂಗಾಪುರ, ಹಾಂಕಾಂಗ್, ಫಿಲಿಪ್ಪೀನ್ಸ್
- 10.30 PM IST ಥಾಯ್ಲೆಂಡ್, ವಿಯೆಟ್ನಾಂ, ಕಾಂಬೋಡಿಯಾ (ಡಿಸೆಂಬರ್ 31, ಸಂಜೆ 5:00 GMT
- ಭಾರತ, ಶ್ರೀಲಂಕಾ (GMTಗಿಂತ 5 ಗಂಟೆ 30 ನಿಮಿಷ ಮುಂದೆ)
- ನಸುಕಿನ ಜಾವ 1.30 IST (ಜನವರಿ 1, 2024): ಯುಎಇ, ಓಮನ್, ಅಜೆರ್ಬೈಜಾನ್
- ನಸುಕಿನ ಜಾವ 3.30 IST: ಗ್ರೀಸ್, ದಕ್ಷಿಣ ಆಫ್ರಿಕಾ, ಸೈಪ್ರಸ್, ಈಜಿಪ್ಟ್, ನಮೀಬಿಯಾ
- ನಸುಕಿನ ಜಾವ 4.30 IST: ಜರ್ಮನಿ, ಫ್ರಾನ್ಸ್, ಇಟಲಿ, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್, ಮೊರಾಕ್ಕೊ, ಕಾಂಗೋ, ಮಾಲ್ಟಾ
- ಬೆಳಿಗ್ಗೆ 5.30 IST: ಯುಕೆ, ಐರ್ಲೆಂಡ್, ಪೋರ್ಚುಗಲ್
- ಬೆಳಿಗ್ಗೆ 8.30 IST: ಬ್ರೆಜಿಲ್, ಅರ್ಜೆಂಟೀನಾ, ಚಿಲಿ
- ಬೆಳಿಗ್ಗೆ 9.30 IST: ಪೋರ್ಟೊ ರಿಕೊ, ಬರ್ಮುಡಾ, ವೆನೆಜುವೆಲಾ, ಯುಎಸ್ ವರ್ಜಿನ್ ದ್ವೀಪಗಳು, ಬ್ರಿಟಿಷ್ ವರ್ಜಿನ್ ದ್ವೀಪಗಳು
- ಬೆಳಿಗ್ಗೆ 10.30 IST: US ಈಸ್ಟ್ ಕೋಸ್ಟ್ (ನ್ಯೂಯಾರ್ಕ್, ವಾಷಿಂಗ್ಟನ್ DC, ಇತ್ಯಾದಿ), ಪೆರು, ಕ್ಯೂಬಾ, ಬಹಾಮಾಸ್
- ಬೆಳಿಗ್ಗೆ 11.30 IST: ಮೆಕ್ಸಿಕೋ, ಕೆನಡಾದ ಕೆಲವು ಭಾಗಗಳು ಮತ್ತು ಅಮೆರಿಕ
- ಮಧ್ಯಾಹ್ನ 1.30 IST: ಅಮೆರಿಕಾದ ವೆಸ್ಟ್ ಕೋಸ್ಟ್ (ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೋ, ಇತ್ಯಾದಿ)
- ಮಧ್ಯಾಹ್ನ 3.30 IST: ಹವಾಯಿ, ಫ್ರೆಂಚ್ ಪಾಲಿನೇಷ್ಯಾ
- ಸಂಜೆ 4.30 IST: ಸಮೋವಾ
ಇದನ್ನೂ ಓದಿ: ಮಡಿಕೇರಿ: ರಾಜಾಸೀಟ್ನಿಂದ ವರ್ಷದ ಕೊನೆಯ ಸೂರ್ಯಾಸ್ತ ವೀಕ್ಷಿಸಿದ ಪ್ರವಾಸಿಗರು