ETV Bharat / international

ಜನಸಂಖ್ಯೆ ಕುಸಿತದಿಂದ ಕಂಗಾಲಾದ ಜಪಾನ್: ಜನನ ದರ ಹೆಚ್ಚಳಕ್ಕೆ ಪ್ಲಾನ್!

ಜಪಾನ್​ನಲ್ಲಿ ಜನಸಂಖ್ಯಾ ಬೆಳವಣಿಗೆ ದರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಿಸಲು ಜಪಾನ್ ಸರ್ಕಾರ ಹಲವಾರು ಮಾರ್ಗೋಪಾಯಗಳನ್ನು ರೂಪಿಸುತ್ತಿದೆ.

Japanese PM to lead panel on declining birthrate amid population crisis

author img

By

Published : Mar 30, 2023, 4:14 PM IST

ಟೋಕಿಯೊ (ಜಪಾನ್) : ಜಪಾನಿನ ಜನಸಂಖ್ಯಾ ಬೆಳವಣಿಗೆ ದರ ತೀವ್ರವಾಗಿ ಕುಸಿದಿರುವುದರಿಂದ ಅಲ್ಲಿನ ಸರ್ಕಾರ ತೀವ್ರ ಕಳವಳಕ್ಕೀಡಾಗಿದೆ. ಜನಸಂಖ್ಯಾ ಬೆಳವಣಿಗೆ ದರ ಮತ್ತೆ ಹೆಚ್ಚಿಸಲು ಪ್ರಧಾನ ಮಂತ್ರಿ ಫುಮಿಯೊ ಕಿಶಿದಾ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ. ಜಪಾನಿನ ಜನಸಂಖ್ಯಾ ಬೆಳವಣಿಗೆ ದರ 1998ರ ನಂತರ 2022ರಲ್ಲಿ ಅದರ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕಿಶಿದಾ ಜೊತೆಗೆ, ತಜ್ಞರ ಸಮಿತಿಯು ಮಕ್ಕಳ ನೀತಿಗಳ ಉಸ್ತುವಾರಿ ಸಚಿವ ಮಸನೋಬು ಒಗುರಾ, ಮಕ್ಕಳೊಂದಿಗೆ ಕೆಲಸ ಮಾಡುವ ಗುಂಪುಗಳು ಮತ್ತು ಕಾರ್ಮಿಕ ಸಂಘದ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ ಎಂದು ಜಪಾನ್​ನ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ವಾರಾಂತ್ಯದಲ್ಲಿ ಪೋಷಕರಿಗೆ ಹೆಚ್ಚಿನ ಬೆಂಬಲವನ್ನು ಒದಗಿಸುವ ನೀತಿ, ಮಕ್ಕಳ ಪಾಲನೆ ಜವಾಬ್ದಾರಿಗಳನ್ನು ಹೆಚ್ಚಿಸುವುದು ಮತ್ತು ಪೋಷಕರು ಭರಿಸುವ ಉನ್ನತ ಶಿಕ್ಷಣದ ವೆಚ್ಚಗಳನ್ನು ಕಡಿಮೆಗೊಳಿಸುವ ನೀತಿಗಳನ್ನು ರೂಪಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಸಂಖ್ಯೆಯು ಹಿಂದಿನ ವರ್ಷಕ್ಕಿಂತ 5.1 ಪ್ರತಿಶತದಷ್ಟು ಕಡಿಮೆಯಾಗಿ 7,99,728 ಕ್ಕೆ ತಲುಪಿದೆ. ಕುಸಿಯುತ್ತಿರುವ ಜನನ ಪ್ರಮಾಣ ಮತ್ತು ವೇಗವಾಗಿ ವಯಸ್ಸಾಗುತ್ತಿರುವ ಜನಸಂಖ್ಯೆಯು ಜಪಾನ್‌ನ ತೆರಿಗೆ ಪಾವತಿಸುವ ಕಾರ್ಮಿಕ ಬಲವನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ಪ್ರಧಾನಿ ಕಿಶಿದಾ ಮಹಿಳಾ ಮತ್ತು ಮಕ್ಕಳ ಇಲಾಖೆಯ ಬಜೆಟ್ ವೆಚ್ಚವನ್ನು ದುಪ್ಪಟ್ಟು ಮಾಡಿದ್ದಾರೆ.

ಮಕ್ಕಳ ಲಾಲನೆ ಪಾಲನೆಗೆ ಮೀಸಲಾಗಿರಿಸಿರುವ ಹಣಕಾಸು, ಅದರ ಜೊತೆಗೆ ವಯೋವೃದ್ಧರ ಯೋಗಕ್ಷೇಮಕ್ಕೆ ಮೀಸಲಿರಿಸಬೇಕಾದ ಹಣಕಾಸು ಪ್ರಮಾಣ ಹೆಚ್ಚಾಗುತ್ತಿರುವುದು ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಬಣಿಸಲು ಕಾರಣವಾಗುತ್ತಿವೆ. ಜಪಾನ್‌ನ ಸಾರ್ವಜನಿಕ ಸಾಲವು ದೇಶದ ಒಟ್ಟು ಆಂತರಿಕ ಉತ್ಪನ್ನದ ದುಪ್ಪಟ್ಟು ಗಾತ್ರದಲ್ಲಿದೆ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಪೈಕಿ ಅತ್ಯಧಿಕವಾಗಿದೆ.

ಜಾಗತಿಕ ಜನಸಂಖ್ಯೆ ಸ್ಥಿತಿಗತಿ: ಪ್ರಪಂಚದ ಜನಸಂಖ್ಯೆಯು ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿದ್ದಕ್ಕಿಂತ ಈಗ ಮೂರು ಪಟ್ಟು ಹೆಚ್ಚಾಗಿದೆ. ಜಾಗತಿಕ ಮಾನವ ಜನಸಂಖ್ಯೆಯು 1950 ರಲ್ಲಿ ಅಂದಾಜು 2.5 ಶತಕೋಟಿಯಿಂದ 2022 ರ ನವೆಂಬರ್ ಮಧ್ಯದಲ್ಲಿ 8.0 ಶತಕೋಟಿ ತಲುಪಿದೆ. 2010 ರಿಂದ 1 ಶತಕೋಟಿ ಮತ್ತು 1998 ರಿಂದ 2 ಶತಕೋಟಿ ಜನ ಭೂಮಿಯ ಮೇಲೆ ಸೇರ್ಪಡೆಯಾಗಿದ್ದಾರೆ. ಮುಂದಿನ 30 ವರ್ಷಗಳಲ್ಲಿ ವಿಶ್ವದ ಜನಸಂಖ್ಯೆಯು ಸುಮಾರು 2 ಶತಕೋಟಿ ಹೆಚ್ಚಾಗುವ ನಿರೀಕ್ಷೆಯಿದೆ. 2050 ರಲ್ಲಿ ಪ್ರಸ್ತುತ 8 ಶತಕೋಟಿಯಿಂದ 9.7 ಶತಕೋಟಿಗೆ ಮತ್ತು 2080 ರ ದಶಕದ ಮಧ್ಯಭಾಗದಲ್ಲಿ ಸುಮಾರು 10.4 ಶತಕೋಟಿಗೆ ತಲುಪಬಹುದು.

ವಿಶ್ವದ ಜನಸಂಖ್ಯಾ ಏರಿಕೆ ಪ್ರಮಾಣ ಕುಸಿತ: 15 ನವೆಂಬರ್ 2022 ರಂದು ವಿಶ್ವದ ಜನಸಂಖ್ಯೆಯು 8 ಶತಕೋಟಿ ಜನರನ್ನು ತಲುಪಿತು. ಇದು ಮಾನವ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲು. ಜಾಗತಿಕ ಜನಸಂಖ್ಯೆಯು 7 ರಿಂದ 8 ಶತಕೋಟಿಗೆ ಬೆಳೆಯಲು 12 ವರ್ಷಗಳನ್ನು ತೆಗೆದುಕೊಂಡರೆ, ಅದು 2037 ರಲ್ಲಿ 9 ಶತಕೋಟಿಗೆ ತಲುಪಲು ಸುಮಾರು 15 ವರ್ಷ ತೆಗೆದುಕೊಳ್ಳಲಿದೆ. ಇದು ಜಾಗತಿಕ ಜನಸಂಖ್ಯೆಯ ಒಟ್ಟಾರೆ ಬೆಳವಣಿಗೆಯ ದರವು ನಿಧಾನವಾಗುತ್ತಿದೆ ಎಂಬುದರ ಸಂಕೇತವಾಗಿದೆ. ಇನ್ನೂ ಕೆಲವು ದೇಶಗಳಲ್ಲಿ ಫಲವತ್ತತೆಯ ಮಟ್ಟವು ಅಧಿಕವಾಗಿದೆ. ಆದರೆ ಅತ್ಯಧಿಕ ಫಲವತ್ತತೆಯ ಮಟ್ಟವನ್ನು ಹೊಂದಿರುವ ದೇಶಗಳು ತಲಾ ಕಡಿಮೆ ಆದಾಯ ಹೊಂದಿರುವ ದೇಶಗಳಾಗಿವೆ. ಆದ್ದರಿಂದ ಜಾಗತಿಕ ಜನಸಂಖ್ಯೆಯ ಬೆಳವಣಿಗೆಯು ಕಾಲಾನಂತರದಲ್ಲಿ ಪ್ರಪಂಚದ ಬಡ ದೇಶಗಳ ನಡುವೆ ಹೆಚ್ಚು ಕೇಂದ್ರೀಕೃತವಾಗಲಿದೆ.

ಇದನ್ನೂ ಓದಿ : ಬಡತನ ನಿರ್ಮೂಲನೆಗೆ ಜನಸಂಖ್ಯೆ ನಿಯಂತ್ರಣ ಅಗತ್ಯ, ಯುಪಿ ನಡೆ ಸ್ವಾಗತಾರ್ಹ: ಕೇಂದ್ರ ಸಚಿವ ಅಠಾವಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.