ಟೆಲ್ ಅವೀವ್ (ಇಸ್ರೇಲ್): ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ಫ್ರಾನ್ಸ್, ಸ್ಪೇನ್ ಮತ್ತು ನೆದರ್ಲ್ಯಾಂಡ್ಸ್ ದೇಶದ ನಾಯಕರೊಂದಿಗೆ ಹಮಾಸ್ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಆಕ್ರಮಣದ ಕುರಿತು ದೂರವಾಣಿ ಸಂಭಾಷಣೆ ನಡೆಸಿದರು. ಈ ವೇಳೆ, ಭಯೋತ್ಪಾದಕ ಗುಂಪನ್ನು ನಿರ್ಮೂಲನೆ ಮಾಡಲು ಜನರು ಸಂಕಲ್ಪ ಮಾಡಿದ್ದಾರೆ ಎಂದು ಒತ್ತಿ ಹೇಳಿದರು.
ಪಿಎಂ ನೆತನ್ಯಾಹು ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಮತ್ತು ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಸೇರಿದಂತೆ ಕೆಲ ನಾಯಕರೊಂದಿಗೆ ಸರಣಿ ಮಾತುಕತೆ ನಡೆಸಿದರು. ಈ ಕುರಿತು ಇಸ್ರೇಲ್ ಪ್ರಧಾನ ಮಂತ್ರಿ ಕಚೇರಿಯು ತನ್ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, "ಹಮಾಸ್‌ನ ಮಿಲಿಟರಿ ಮತ್ತು ಆಡಳಿತದ ಸಾಮರ್ಥ್ಯಗಳನ್ನು ತೊಡೆದುಹಾಕಲು ಜನರ ಏಕತೆ ಮತ್ತು ನಿರ್ಣಯದ ಬಗ್ಗೆ ಪ್ರಧಾನ ಮಂತ್ರಿಗಳು ಇತರೆ ದೇಶದ ನಾಯಕರುಗಳಿಗೆ ತಿಳಿಸಿದರು. ಜೊತೆಗೆ, ಹಮಾಸ್ ವಿರುದ್ಧದ ಇಸ್ರೇಲ್‌ನ ವಿಜಯವು ಇಡೀ ಜಗತ್ತಿನ ವಿಜಯವಾಗಿದೆ ಎಂದು ಹೇಳಿದರು. ಹಾಗೆಯೇ, ಹಮಾಸ್‌ನ "ಕ್ರೂರ ಭಯೋತ್ಪಾದನೆ" ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕನ್ನು ಬೆಂಬಲಿಸಿದ್ದಕ್ಕಾಗಿ ನಾಯಕರಿಗೆ ಧನ್ಯವಾದ ಅರ್ಪಿಸಿದರು" ಎಂದು ತಿಳಿಸಿದೆ.
"ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಮತ್ತು ಡಚ್ ಪ್ರಧಾನಿ ರುಟ್ಟೆ ಅವರು ಕ್ರಮವಾಗಿ ಸೋಮವಾರ (ಇಂದು) ಮತ್ತು ಮಂಗಳವಾರ ಇಸ್ರೇಲ್ಗೆ ಆಗಮಿಸಲಿದ್ದು, ಪ್ರಧಾನಿ ನೆತನ್ಯಾಹು ಅವರನ್ನು ಭೇಟಿಯಾಗಲಿದ್ದಾರೆ" ಎಂದು ಇಸ್ರೇಲ್ ಪ್ರಧಾನ ಮಂತ್ರಿ ಕಾರ್ಯಾಲಯ ಎಕ್ಸ್ ಆ್ಯಪ್ನಲ್ಲಿ ಮಾಹಿತಿ ನೀಡಿದೆ.
ಇನ್ನು ಗಾಜಾದಲ್ಲಿನ ಸಂಘರ್ಷದ ಮಧ್ಯೆಯೇ ನೆತನ್ಯಾಹು ಅವರು ಶನಿವಾರ ಇಟಾಲಿಯನ್ ಕೌಂಟರ್‌ಪಾರ್ಟ್ ಜಾರ್ಜಿಯಾ ಮೆಲೋನಿ ಮತ್ತು ಸೈಪ್ರಿಯೋಟ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲಿಡ್ಸ್ ಅವರನ್ನು ಭೇಟಿಯಾದರು. ಈ ವೇಳೆ, ಇಬ್ಬರೂ ನಾಯಕರು ಪ್ರಧಾನಿ ನೆತನ್ಯಾಹು ಅವರನ್ನು ಬೆಂಬಲಿಸಿದರು. ನೆತನ್ಯಾಹು ಅವರು ಇಟಲಿ ಪ್ರಧಾನಿಗೆ ಮನವಿ ಮಾಡಿ, ನಾವು ಈ ಬರ್ಬರತೆಯನ್ನು ಸೋಲಿಸಬೇಕಾಗಿದೆ. ಈ ಹೋರಾಟವು ಸುಸಂಸ್ಕೃತ ಜನರು ಮತ್ತು ಮಕ್ಕಳನ್ನು ಬಿಡದ ದೈತ್ಯಾಕಾರದ ಅನಾಗರಿಕರ ನಡುವಿನ ಹೋರಾಟವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ಯುದ್ಧಕ್ಕೆ ಲೆಬನಾನ್ ಎಳೆಯುತ್ತಿರುವ ಹಿಜ್ಬುಲ್ಲಾ ಉಗ್ರರಿಂದ ಅಪಾಯಕಾರಿ ಆಟ : ಇಸ್ರೇಲ್
ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಕೂಡ ಈ ವಿಷಯದಲ್ಲಿ ಇಸ್ರೇಲ್ ಬೆಂಬಲಿಸಿದ್ದಾರೆ. ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಸ್ರೇಲ್‌ನ ಹಕ್ಕುಗಳನ್ನು ರಕ್ಷಿಸುತ್ತೇವೆ. ಭಯೋತ್ಪಾದನೆಯ ವಿರುದ್ಧ ನಾವು ಒಗ್ಗಟ್ಟಿನಿಂದ ಹೋರಾಡಬೇಕು ಎಂಬುದನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದಕ್ಕೂ ಮೊದಲು, ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರು ನವೆಂಬರ್ 7 ರ ಎಂದು ಇಸ್ರೇಲ್ಗೆ ಭೇಟಿ ನೀಡಿದ್ದರು.
ಇದನ್ನೂ ಓದಿ : ಹಮಾಸ್ ಉಗ್ರರಿರುವ ಗಾಜಾ ಮೇಲೆ ಇಸ್ರೇಲ್ ಭೂದಾಳಿ ತಡೆದ ಅಮೆರಿಕ, ಇಂಗ್ಲೆಂಡ್: ವರದಿ