ಟೆಲ್ ಅವಿವ್ (ಇಸ್ರೇಲ್): ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ಮತ್ತೆ ಯುದ್ಧದ ಕಾರ್ಮೋಡ ಆವರಿಸಿದೆ. ಇಸ್ರೇಲ್ ಸೇನೆ ಗಾಜಾದ ಮೇಲೆ ಬಾಂಬ್ ದಾಳಿ ಮಾಡಿದ್ದು ಪ್ಯಾಲೆಸ್ಟೀನ್ ಇಸ್ಲಾಮಿಕ್ ಜಿಹಾದ್ ಚಳುವಳಿಯ ಮೂವರು ಹತ್ಯೆಯಾಗಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಈ ದಾಳಿಯಲ್ಲಿ ಕನಿಷ್ಟ 12 ಮಂದಿ ಸಾವನ್ನಪ್ಪಿರುವ ಮಾಹಿತಿ ಇದೆ.
ಉತ್ತರ ಗಾಜಾದಲ್ಲಿ ಇಸ್ಲಾಮಿಕ್ ಜಿಹಾದ್ ಕಮಾಂಡರ್ ಖಲೀಲ್ ಬಹಿತಿನಿ, ಗುಂಪಿನ ಮಿಲಿಟರಿ ಕೌನ್ಸಿಲ್‌ನ ಉನ್ನತ ಅಧಿಕಾರಿ ಜಾಹೆದ್ ಅಹ್ನಮ್ ಮತ್ತು ತಾರೆಕ್ ಅಜಾಲ್ದಿನ್ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲಿ ಸೇನೆ ಪ್ರಕಟನೆಯಲ್ಲಿ ಮಾಹಿತಿ ನೀಡಿದೆ.
ಇಸ್ರೇಲ್-ಪ್ಯಾಲೆಸ್ಟೀನ್ ಮಧ್ಯೆ ಮೊದಲಿಂದಲೂ ಸಂಘರ್ಷವಿದೆ. ಆಗಾಗ್ಗೆ ದಾಳಿ-ಪ್ರತಿದಾಳಿ ನಡೆಯುತ್ತಿರುತ್ತದೆ. ತಡರಾತ್ರಿ 2 ಗಂಟೆಯ ನಂತರ ಇಸ್ರೇಲ್ ಸೇನೆ 'ಆಪರೇಷನ್ ಶೀಲ್ಡ್ ಆ್ಯಂಡ್ ಆ್ಯರೋ' ಹೆಸರಿನಲ್ಲಿ ಗಾಜಾದ ಮೇಲೆ ಬಾಂಬ್ ಸುರಿಮಳೆಗೈದಿದೆ. ಇಸ್ಲಾಮಿಕ್ ಜಿಹಾದ್ನ ಮೂವರು ಹಿರಿಯ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇದನ್ನೂ ಓದಿ: ಮೇ 12ರಂದು ಪಾಕಿಸ್ತಾನದಿಂದ 199 ಭಾರತೀಯ ಮೀನುಗಾರರ ಬಿಡುಗಡೆ ಸಾಧ್ಯತೆ
ಕಾರ್ಯಾಚರಣೆ ನಡೆಸುವ ಮುನ್ನ ಇಸ್ರೇಲ್ ಸೇನೆಯು ಗಾಜಾದಲ್ಲಿ ವಾಸವಿರುವ ಇಸ್ರೇಲ್ ನಿವಾಸಿಗಳಿಗೆ ಬಾಂಬ್ ಶೆಲ್ಟರ್ಗಳು ಅಥವಾ ರಕ್ಷಣೆ ನೀಡುವ ಹತ್ತಿರದ ಸ್ಥಳಗಳಲ್ಲಿ ಉಳಿಯಲು ಸೂಚಿಸಿತ್ತು. ದಿ ಟೈಮ್ಸ್ ಆಫ್ ಇಸ್ರೇಲ್ ಪ್ರಕಾರ, ಇಸ್ರೇಲಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಗುಂಪಿನ ಹಿರಿಯ ಸದಸ್ಯನ ಸಾವಿಗೆ ಪ್ರತೀಕಾರವಾಗಿ ಇಸ್ಲಾಮಿಕ್ ಜಿಹಾದ್ ನೇತೃತ್ವದ ಗಾಜನ್ ಭಯೋತ್ಪಾದಕರು ಇಸ್ರೇಲ್ ಕಡೆಗೆ ರಾಕೆಟ್ಗಳನ್ನು ಉಡಾಯಿಸಿ ದಾಳಿ ಮಾಡಿದ್ದರು. ಇದೀಗ ಪ್ರತಿದಾಳಿಯಾಗಿ ಇಸ್ರೇಲ್ ತನ್ನ ಸೇಡು ತೀರಿಸಿಕೊಂಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಆರ್ಥಿಕ ಸ್ಥಿತಿ ಶ್ರೀಲಂಕಾಗಿಂತಲೂ ಕಳಪೆ: ಮಾಜಿ ಪ್ರಧಾನಿ ಇಮ್ರಾನ್ ಖಾನ್
ಇಸ್ರೇಲ್ ಸೇನೆಯು ಭಯೋತ್ಪಾದಕ ತರಬೇತಿ ತಾಣಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ಮಾಡಿದೆ. ಪರಿಣಾಮ, ಗಾಜಾ ನಗರದಲ್ಲಿನ ಅಪಾರ್ಟ್ಮೆಂಟ್ ಕಟ್ಟಡದ ಮೇಲಿನ ಮಹಡಿ ಮತ್ತು ದಕ್ಷಿಣದ ನಗರ ರಫಾದಲ್ಲಿನ ಮನೆಯೊಂದಕ್ಕೆ ಬಾಂಬ್ ಅಪ್ಪಳಿಸಿದೆ. ಇದರಿಂದಾಗಿ ಹಲವರು ಗಾಯಗೊಂಡಿದ್ದಾರೆ ಎಂದು ಪಾಲೆಸ್ಟೀನ್ ಮಾಧ್ಯಮಗಳು ತಿಳಿಸಿವೆ. ಹಮಾಸ್ ನಿಯಂತ್ರಿತ ಪ್ರದೇಶದ ಆರೋಗ್ಯ ಸಚಿವಾಲಯದ ಪ್ರಕಾರ ಬಾಂಬ್ ದಾಳಿಯಲ್ಲಿ ಕನಿಷ್ಟ 12 ಜನರು ಹತ್ಯೆಯಾಗಿದ್ದಾರೆ. ವರದಿಗಳ ಪ್ರಕಾರ ಸಾವನ್ನಪ್ಪಿದವರಲ್ಲಿ ಕೆಲವರು ಕಮಾಂಡರ್‌ಗಳ ಪತ್ನಿಯರು ಮತ್ತು ಅವರ ಮಕ್ಕಳು ಎಂದು ಹೇಳಲಾಗಿದೆ.
ಇದನ್ನೂ ಓದಿ: ಸ್ಫೋಟಕಗಳನ್ನು ಬಳಸಿ 450 ಮೀಟರ್ ಉದ್ದದ ಜರ್ಮನಿಯ ಬೃಹತ್ ಸೇತುವೆ ನೆಲಸಮ -ವಿಡಿಯೋ
ಸ್ಪೀಕರ್ ವಿರುದ್ಧ ಆಕ್ರೋಶ; ಸದನದಲ್ಲಿ ಶರ್ಟ್ ಕಳಚಿ ಪ್ರತಿಭಟಿಸಿದ ನೇಪಾಳ ಸಂಸದ