ಗಾಜಾ : ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ತೀವ್ರ ಸ್ವರೂಪದ ವೈಮಾನಿಕ ದಾಳಿ ನಡೆಸುತ್ತಿದೆ. ಇತ್ತೀಚೆಗಿನ ವರದಿಯಂತೆ 28 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. 93 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ಯಾಲೆಸ್ತೀನಿಯನ್ ವೈದ್ಯರು ಮತ್ತು ಭದ್ರತಾ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಈ ದಾಳಿಯಲ್ಲಿ 15 ನಾಗರಿಕರು ಸೇರಿದಂತೆ 28 ಪ್ಯಾಲೆಸ್ತೀನಿಯರು ಅಸುನೀಗಿದ್ದಾರೆ. ಹಾಗೆಯೇ, ಇವರನ್ನು ಬಿಟ್ಟು ಅಬಾಸನ್ ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ಇನ್ನಿಬ್ಬರು ಸಾವನ್ನಪ್ಪಿದ್ದಾರೆ. ಹತ್ಯೆಯಾದ ಈ ಇಬ್ಬರು ಅಲ್ - ಮುಜಾಹಿದಿನ್ ಬ್ರಿಗೇಡ್ಸ್ ಎಂಬ ಸಣ್ಣ ಭಯೋತ್ಪಾದಕ ಗುಂಪಿನ ಸದಸ್ಯರಾಗಿದ್ದು, ಪ್ಯಾಲೇಸ್ತೀನಿಯನ್ ಬಣಗಳ ಮಿಲಿಟರಿ ಕಾರ್ಯಾಚರಣೆಗಳ ಜಂಟಿ ಚೇಂಬರ್ ಸದಸ್ಯರಾಗಿದ್ದರು ಎಂದು ಅಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇನ್ನು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಇದುವರೆಗೆ 93 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿರುವ ಪ್ಯಾಲೆಸ್ತೀನಿಯನ್ ಆರೋಗ್ಯ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ : ಗಾಜಾ ಮೇಲೆ ಇಸ್ರೇಲ್ ಬಾಂಬ್ ದಾಳಿ : ಇಸ್ಲಾಮಿಕ್ ಜಿಹಾದ್ ಚಳುವಳಿಯ ಮೂವರ ಹತ್ಯೆ
ಇಸ್ರೇಲ್ ದಾಳಿಗೆ ಪ್ರತಿದಾಳಿ ನಡೆಸಲು ಇಸ್ಲಾಮಿಕ್ ಜಿಹಾದ್ ಸಂಘಟನೆ ಸಹ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಾಳಿಗೆ ತಡೆಯೊಡ್ಡಲು ಇಸ್ರೇಲ್ ಕೂಡ ತನ್ನ ಭದ್ರತಾ ಅಧಿಕಾರಿಗಳನ್ನು ಸನ್ನದ್ದ ಸ್ಥಿತಿಯಲ್ಲಿ ಇರಿಸಿದೆ. 'ಬಾಣ ಮತ್ತು ಗುರಾಣಿ' ಎಂಬ ಹೆಸರಿನ ಕಾರ್ಯಾಚರಣೆ ಆರಂಭವಾಗಿದ್ದು, ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಸಂಘಟನೆಯ ಮೂವರು ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ನ ರಕ್ಷಣಾ ಪಡೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ : ಮುಗಿಯದ ಇಸ್ರೇಲ್ - ಸಿರಿಯಾ ವಾರ್ ; ಇಂದು ಮತ್ತೆ ಸಿರಿಯಾ ಮೇಲೆ ಪ್ರತಿ ದಾಳಿ
ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಮತ್ತು ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್‌ಮೆಂಟ್ (ಹಮಾಸ್) ಸೇರಿದಂತೆ ಹಲವಾರು ಪ್ಯಾಲೇಸ್ತೀನಿಯನ್ ಬಣಗಳ ಸಶಸ್ತ್ರ ವಿಭಾಗಗಳನ್ನು ಒಳಗೊಂಡಿರುವ ಸಂಘಟನೆಗಳು ಮತ್ತು ಇಸ್ರೇಲ್ ನಡುವಿನ ಗುಂಡಿನ ಚಕಮಕಿ ಮಂಗಳವಾರದಿಂದ (ಮೇ. 9) ಪ್ರಾರಂಭವಾಗಿದ್ದು, ಈವರೆಗೆ ಗಾಜಾ ಪಟ್ಟಿಯು ಮೂವರು ಹಿರಿಯ ಪಿಐಜೆ ನಾಯಕರನ್ನು ಕೊಲ್ಲಲಾಗಿದೆ.
ಇದನ್ನೂ ಓದಿ : ಇಸ್ರೇಲ್ನಲ್ಲಿ ದಾಳಿಕೋರನನ್ನು ಗುಂಡಿಕ್ಕಿ ಕೊಂದ ಪೊಲೀಸರು
ಪ್ಯಾಲೆಸ್ತೀನಿಯನ್ ಮೂಲಗಳ ಪ್ರಕಾರ, ಈಜಿಪ್ಟ್, ಕತಾರ್ ಮತ್ತು ಯುಎನ್ ದೇಶಗಳು ಇಸ್ರೇಲ್ ಮತ್ತು ಪಿಐಜೆ ಸೇರಿದಂತೆ ಹಮಾಸ್ ನೇತೃತ್ವದ ಉಗ್ರಗಾಮಿ ಗುಂಪುಗಳ ನಡುವೆ ನಡೆಯುತ್ತಿರುವ ದಾಳಿಗೆ ಕದನ ವಿರಾಮ ಘೋಷಿಸುವಂತೆ ಮಧ್ಯಸ್ಥಿಕೆ ವಹಿಸುತ್ತಿವೆ. ಆದರೆ, ಅಲ್ಲಿ ಉದ್ವಿಗ್ನತೆ ಭುಗಿಲೆದ್ದ ಕಾರಣ ಗುರಿ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಇಸ್ರೇಲ್ - ಪಾಕಿಸ್ತಾನ ಮಧ್ಯೆ ದೋಸ್ತಿ ? ಇಸ್ರೇಲ್ಗೆ ಆಹಾರ ಸರಕು ಕಳುಹಿಸಿತಾ ಪಾಕ್ ?