ವಸ್ತ್ರ ವಿನ್ಯಾಸಕಿ, ಹೊಲಿಗೆ ತರಬೇತಿದಾರರಾದ ಆರ್ಬೊನ್ನಿ ಗೇಬ್ರಿಯಲ್ ಭುವನ ಸುಂದರಿಯಾಗಿ ಹೊರ ಹೊಮ್ಮಿದ್ದಾರೆ. 2021ರಲ್ಲಿ ಮಿಸ್ ಟೆಕ್ಸಾಸ್ ಯುಎಸ್ಎ ಪ್ರಶಸ್ತಿ ಮುಡಿಗೇರಿಸಿಕೊಂಡ ಫಿಲಿಪಿನೊ- ಅಮೆರಿನ್ ಆಗಿ ಕೂಡ ಗ್ಯಾಬ್ರಿಯೆಲ್ ಹೊರಹೊಮ್ಮಲಿದ್ದಾರೆ. ಮಿಸ್ ವೆನೆಜುವೆಲಾ ಅಮಂಡಾ ಡುಡಾಮೆಲ್ ಮೊದಲ ರನ್ನರ್ ಅಪ್ ಮತ್ತು ಮಿಡ್ ಡಾಮಿನಿಕ್ ರಿಪಬ್ಲಿಕ್ ಆ್ಯಂಡ್ರೀನಾ ಮಾರ್ಟಿನೆಝ್ ಎರಡನೇ ರನ್ನರ್ ಅಪ್ ಆದ ಬಳಿಕ ಗ್ಯಾಬ್ರಿಯೇಲ್ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
-
The new Miss Universe is USA!!! #MISSUNIVERSE pic.twitter.com/7vryvLV92Y
— Miss Universe (@MissUniverse) January 15, 2023 " class="align-text-top noRightClick twitterSection" data="
">The new Miss Universe is USA!!! #MISSUNIVERSE pic.twitter.com/7vryvLV92Y
— Miss Universe (@MissUniverse) January 15, 2023The new Miss Universe is USA!!! #MISSUNIVERSE pic.twitter.com/7vryvLV92Y
— Miss Universe (@MissUniverse) January 15, 2023
ಮೂರು ಸ್ಪರ್ಧಿಗಳನ್ನು ಹೊಂದಿದ ಅಂತಿಮ ಸುತ್ತಿನ ವೇದಿಕೆಯಲ್ಲಿ ಗ್ಯಾಬ್ರಿಯೇಲ್ ಅವರು, ತಾವು ಭುವನ ಸುಂದರಿಯಾಗಿ ಆಯ್ಕೆಯಾದರೆ ಸಂಬಲೀಕರಣ ಮತ್ತು ಪ್ರಗತಿಪರ ಸಂಘಟನೆಗಳ ಹೇಗೆ ಕಾರ್ಯ ಮಾಡುವುದಾಗಿ ಪ್ರಶ್ನಿಸಲಾಯಿತು. ನಾನು ಪರಿವರ್ತನಾ ನಾಯಕಿಯಾಗಿ ಅದನ್ನು ಮಿಸ್ ಯೂನಿವರ್ಸ್ ಪಟ್ಟವನ್ನು ಬಳಕೆ ಮಾಡುವುದಾಗಿ ಅವರು ಉತ್ತರಿಸಿದರು. ತಮ್ಮ ವಸ್ತು ವಿನ್ಯಾಸಕಿ ಕೆಲಸದಲ್ಲಿ ಮರು ಬಳಕೆ ವಸ್ತುಗಳನ್ನು ಬಳಕೆ ಮತ್ತು ಮಾನವ ಕಳ್ಳಸಾಗಣೆ ಮತ್ತು ಕೌಟಂಬಿಕ ದೌರ್ಜನ್ಯಕ್ಕೆ ಒಳಗಾದವರಿಗೆ ತಾವು ಶಿಕ್ಷಣ ನೀಡುವುದಾಗಿ ತಿಳಿಸಿದ್ದರು.
ಕಲಿಕೆಯ ಬೀಜ ಬಿತ್ತಿ: ಬೇರೆಯವರ ಮೇಲೆ ನಿಮ್ಮ ಕಲಿಕೆಯನ್ನು ಹೇಳಿ ಕೊಡುವ ಮೂಲಕ ಹೂಡಿಕೆ ಮಾಡುವುದು. ನಿಮ್ಮ ವಿಶೇಷ ಪ್ರತಿಭೆಯನ್ನು ಬಳಸಿ ನಿಮ್ಮ ಸಮುದಾಯಕ್ಕೆ ನಿಮ್ಮ ಕಲಿಕೆಯನ್ನು ಹಂಚುವುದು ದೊಡ್ಡ ವ್ಯತ್ಯಾಸ ಮೂಡಿಸುತ್ತದೆ. ಪ್ರತಿಯೊಬ್ಬರು ತಮ್ಮದೇ ಆದ ವಿಶೇಷತೆ ಹೊಂದಿರುತ್ತಾರೆ. ಇಂತಹ ವಿಶೇಷತೆಯ ಕಲೆಯ ಬೀಜವನ್ನು ಇತರರ ಜೀವನದಲ್ಲಿ ನೀವು ಬಿತ್ತಬೇಕು ಎಂದರು.
ಗ್ಯಾಬ್ರಿಯೇಲ್ ಶಿಕ್ಷಣ: ಉತ್ತರ ಟೆಕ್ಸಾಸ್ ವಿವಿಯುಂದ ಗ್ಯಾಬ್ರಿಯಲ್ ಫ್ಯಾಷನ್ ಡಿಸೈನ್ನಲ್ಲಿ ಪದವಿಯನ್ನು ಪಡೆದಿದ್ದಾರೆ. ಕಲೆ ಕ್ರೀಡೆ ಮತ್ತು ಪ್ರವಾಸದ ಬಗ್ಗೆ ಸಾಕಷ್ಟು ಒಲವನ್ನು ಅವರು ಹೊಂದಿದ್ದಾರೆ. ಹೈ ಸ್ಕೂಲ್ನಲ್ಲಿ ವಾಲಿಬಾದ್ ಪ್ಲೇಯರ್ ಆಗಿದ್ದ ಅವರು, ಫ್ಯಾಷನ್ ಕಡೆಗೆ ಒಲವನ್ನು ಹೊಂದಿದರು. ತಮ್ಮ 15ನೇ ವಯಸ್ಸಿನಲ್ಲೇ ಬಟ್ಟೆಗಳ ವಿನ್ಯಾಸ ಮಾಡುವತ್ತ ಹೆಚ್ಚಿನ ಪ್ರೀತಿ ಹೊಂದಲು ಆರಂಭಿಸಿದರು.
ಫ್ಯಾಷನ್ ಡಿಸೈನರ್, ಮಾಡೆಲ್, ಹೊಲಿಗೆ ತರಬೇತುದಾರ: ಗ್ಯಾಬ್ರಿಯಲ್, ಸಸ್ಟೈನಬಲ್ ಕ್ಲಥಿಂಗ್ ಲೈನ್ನ ಸಿಇಒ ಆಗಿದ್ದಾರೆ ಎಂದು ವೆಬ್ಸೈಟ್ವೊಂದು ತಿಳಿಸಿದೆ. ಎಕೋ ಫ್ರೆಂಡ್ಲಿ ಫ್ಯಾಷನ್ ಡಿಸೈನರ್ ಇವರಾಗಿದ್ದಾರೆ. ಜೊತೆಗೆ ಮಾಡೆಲ್ ಮತ್ತು ಹೊಲಿಗೆ ತರಬೇತುದಾರರಾಗಿದ್ದಾರೆ, ಮ್ಯಾಗ್ಪೈಸ್ ಅಂಡ್ ಪಿಕಾಕ್ಸ್ನಲ್ಲಿ ಅವರು ಹೊಲಿಗೆ ತರುಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಾರೆ. ಇದು ಹೋಸ್ಟನ್ ಮೂಲ ಲಾಭ ರಹಿತ ಡಿಸೈನ್ ಹೌಸ್ ಆಗಿದೆ. ಮಾನವ ಕಳ್ಳಸಾಗಣೆ ಮತ್ತು ಕೌಟುಂಬಿಕ ದೌರ್ಜನ್ಯ ಸಂತ್ರಸ್ತರಿಗೆ ಅವರು ಹೊಲಿಗೆ ತರಬೇತಿ ಕ್ಲಾಸ್ಗಳನ್ನು ಕಲಿಸುತ್ತಿದ್ದಾರೆ.
ಮೊದಲ ಫಿಲಿಪಿನೊ- ಅಮೆರಿಕನ್ ನಿಂದ ಮಿಸ್ ಅಮೆರಿಕ: ಫಿಲಿಪಿನೊ ಅಮೆರಿಕನ್ನಿಂದ ಮಿಸ್ ಯುಎಸ್ಎ ಗೆದ್ದಿದ್ದಾರೆ. ಆರ್ ಬೊನ್ನಿ ಏಷಿಯನ್ ಅಮೆರಿಜನ್ ಧ್ವನಿಯಾಗಿದ್ದಾರೆ. ವಿವಿಧತೆ ಮತ್ತು ಸಮಾಜದಲ್ಲಿ ಪ್ರಾತಿನಿಧ್ಯ ಬಾಗಿಲು ತೆರೆದಿದ್ದಾರೆ.
ಆರ್ಬೊನ್ನಿ ಗುರಿ: ಮಹಿಳೆಯರು ಮತ್ತು ಯುವತಿಯರು ತಮ್ಮನ್ನು ಇವರ ಮೂಲಕ ಕಾಣಬಹುದಾಗಿದೆ. ತಮ್ಮತನ ಕಾಯ್ದುಕೊಳ್ಳುವ ಮೂಲಕ ಅವರು ಗುರಿ ಸಾಧನೆಗೆ ಸ್ಪೂರ್ತಿಯಾಗಿ ಪಡೆಯಬಹುದು ಎಂದಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಭಾರಿ ಪ್ರವಾಹ: ಕೆರೆಯಂತಾದ ಕ್ಯಾಲಿಫೋರ್ನಿಯಾ - ಲಾಸ್ ಏಂಜಲೀಸ್