ನವದೆಹಲಿ: ಕೆಲ ದಿನಗಳ ಹಿಂದೆ ಸ್ಪೈಸ್ಜೆಟ್ ಏರ್ಲೈನ್ಸ್ ವಿಮಾನ ತಾಂತ್ರಿಕ ದೋಷ ಉಂಟಾಗಿ ಪಾಕಿಸ್ತಾನದ ಕರಾಚಿಯಲ್ಲಿ ಇಳಿದಿತ್ತು. ಇದೀಗ ಇಂಡಿಗೋ ವಿಮಾನವೂ ಕೂಡ ದೋಷದಿಂದಾದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಕಂಡಿದೆ. ಇದು ವಿಮಾನಗಳ ಸುರಕ್ಷಿತ ಹಾರಾಟದ ಮೇಲೆಯೇ ಕರಿಛಾಯೆ ಉಂಟು ಮಾಡಿದೆ.
ಇಂಡಿಗೋದ 6ಇ 1406 ವಿಮಾನ ಶಾರ್ಜಾದಿಂದ ಹೈದರಾಬಾದ್ಗೆ ಬರಬೇಕಿತ್ತು. ಈ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದನ್ನು ಪೈಲಟ್ ಪತ್ತೆ ಮಾಡಿದ್ದಾರೆ. ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿ ತುರ್ತು ಭೂಸ್ಪರ್ಶಕ್ಕೆ ಕೋರಿದ್ದಾರೆ. ಅದರಂತೆ ವಿಮಾನವನ್ನು ತಕ್ಷಣವೇ ಪಾಕಿಸ್ತಾನದ ಕರಾಚಿಯಲ್ಲಿ ಇಳಿಸಲು ಸೂಚಿಸಲಾಗಿದೆ.
ಅದರಂತೆ ಪೈಲಟ್ ವಿಮಾನವನ್ನು ವಾಪಸ್ ಕರಾಚಿಗೆ ತೆಗೆದುಕೊಂಡು ಹೋಗಿ ಲ್ಯಾಂಡಿಂಗ್ ಮಾಡಿದ್ದಾರೆ. ಕೆಲವೇ ದಿನಗಳ ಅಂತರದಲ್ಲಿ ಭಾರತೀಯ ವಿಮಾನವು ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶಿಸಿದ 2ನೇ ಘಟನೆಯಾಗಿದೆ. ಜುಲೈ 5 ರಂದು ಸ್ಪೈಸ್ಜೆಟ್ ವಿಮಾನ ಕರಾಚಿಯಲ್ಲಿ ಎಮರ್ಜೆನ್ಸಿ ಲ್ಯಾಂಡ್ ಆಗಿತ್ತು.
ಇಂಡಿಗೋ ಪ್ರತಿಕ್ರಿಯೆ: ಕರಾಚಿಯಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಅವರನ್ನು ಹೈದರಾಬಾದ್ಗೆ ಕರೆತರಲು ಹೆಚ್ಚುವರಿ ವಿಮಾನ ವ್ಯವಸ್ಥೆ ಮಾಡಲಾಗುವುದು ಎಂದು ಇಂಡಿಗೋ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಧಾರಾಕಾರ ಮಳೆಗೆ ಗುಂಡಿಮಯವಾದ ಗುಜರಾತ್ ರಸ್ತೆ: ಫೋಟೋಗಳಿವೆ ನೋಡಿ