ETV Bharat / international

ಅಮೆರಿಕದ ಒಕ್ಲಹೋಮ್​ನಲ್ಲಿ ಭಾರತೀಯ ಸಂಜಾತೆ ನಿಗೂಢ ಸಾವು: ತನಿಖೆ ಚುರುಕು - ಕೆಲಸಕ್ಕೆ ತೆರಳಿದ ಬಳಿಕ ಸಾವು

ಅಮೆರಿಕದ ಒಕ್ಲಹೋಮ್​ನಲ್ಲಿ ಅಮೆರಿಕನ್​ ಭಾರತೀಯ ಯುವತಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕೆಲಸಕ್ಕೆ ಹೋದ ಯುವತಿ ವಾಪಸ್​ ಆಗಿರಲಿಲ್ಲ. ಇದೀಗ ಆಕೆಯ ಶವ ಪತ್ತೆಯಾಗಿದೆ.

ಅಮೆರಿಕದ ಒಕ್ಲಹೋಮ್​ನಲ್ಲಿ ಭಾರತೀಯ ಸಂಜಾತೆ ನಿಗೂಢ ಸಾವು

author img

By

Published : May 18, 2023, 7:57 AM IST

ಹೂಸ್ಟನ್ (ಅಮೆರಿಕ): ಅಮೆರಿಕದ ಟೆಕ್ಸಾಸ್​​ನಿಂದ ನಾಪತ್ತೆಯಾಗಿದ್ದ ಭಾರತೀಯ ಮೂಲದ ಅಮೆರಿಕನ್​ ಯುವತಿ ಕೊನೆಗೂ ಶವವಾಗಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಒಕ್ಲಹೋಮ ರಾಜ್ಯದ ಸುಮಾರು 322 ಕಿಲೋ ಮೀಟರ್​ ದೂರದಲ್ಲಿ ಶವ ದೊರೆತಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಖೆ ನಡೆಸುತ್ತಿದ್ದಾರೆ.

ಮೆಕಿನ್ನಿ ಉಪನಗರದಲ್ಲಿ ಉದ್ಯೋಗಿಯಾಗಿರುವ 25 ವರ್ಷದ ಲಹರಿ ಪಥಿವಾಡಾ ಮೃತಪಟ್ಟ ಭಾರತೀಯ ಮೂಲದ ಯುವತಿ. ಈ ತಿಂಗಳ ಆರಂಭದಲ್ಲಿ ಟೆಕ್ಸಾಸ್‌ ರಾಜ್ಯದಿಂದ ಇವರು ನಾಪತ್ತೆಯಾಗಿದ್ದರು. ಕೆಲಸಕ್ಕೆ ಹೋಗುವ ವೇಳೆ ಕಾಣೆಯಾಗಿದ್ದರು. ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರೂ ಪತ್ತೆಯಾಗಿರಲಿಲ್ಲ. ಕೊನೆಗೆ, ಒಕ್ಲಹೋಮ್​ ರಾಜ್ಯದ ಹೊರಭಾಗದಲ್ಲಿ ಶವವಾಗಿ ಗೋಚರವಾಗಿದ್ದಾರೆ.

ಮೆಕಿನ್ನಿ ಉಪನಗರದಲ್ಲಿ ಉದ್ಯೋಗಿಯಾಗಿದ್ದ ಲಹರಿ ಪಥಿವಾಡಾ ಅವರು ಟೊಯೊಟಾ ಮೂಲಕ ಕೆಲಸಕ್ಕೆ ಹೋಗಿದ್ದು, ಅಂದಿನಿಂದ ಕಂಡುಬಂದಿರಲಿಲ್ಲ. ಕುಟುಂಬಸ್ಥರು ಸಾಕಷ್ಟು ಹುಡುಕಾಡಿದ್ದರು. ಆದರೆ, ಈವರೆಗೂ ಸಿಕ್ಕಿರಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕವೂ ಪತ್ತೆ ಮಾಡುವ ಕೆಲಸವಾಗಿತ್ತು. ಮೇ 13 ರಂದು ಆಕೆಯ ದೇಹವನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿ ಹೇಳಿದ್ದೇನು?: ಲಹರಿ ಪಥಿವಾಡ ಅವರು ಕೆಲಸಕ್ಕೆಂದು ಟೊಯೊಟಾ ಕಾರಿನಲ್ಲಿ ತೆರಳಿದ್ದರು. ಕಾರು ಕೊನೆಯ ಬಾರಿಗೆ ಎಲ್ ಡೊರಾಡೊ ಪಾರ್ಕ್‌ವೇ ಮತ್ತು ಡಲ್ಲಾಸ್ ಉಪನಗರದ ಹಾರ್ಡಿನ್ ಬೌಲೆವಾರ್ಡ್ ಪ್ರದೇಶದಲ್ಲಿ ಓಡಾಡುತ್ತಿದ್ದುದನ್ನು ತಾವು ಗಮನಿಸಿರುವುದಾಗಿ ಟೆಕ್ಸಾಸ್‌ನ ಕಾಲಿನ್ಸ್ ಕೌಂಟಿಯ ಮೆಕಿನ್ನಿ ನಿವಾಸಿಯೊಬ್ಬರು ತಿಳಿಸಿದ್ದರು. ಇದರಂತೆ ಫೋನ್​ ಟ್ರ್ಯಾಕ್​ ಮಾಡಲಾಗಿತ್ತು. ಮೃತದೇಹವನ್ನು ಒಕ್ಲಹೋಮ್​ ನಗರದ ಹೊರಗಡೆ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಹರಿ ಪತಿವಾಡ ಅವರು ಮೆಕಿನ್ನಿ ಉಪನಗರದಲ್ಲಿನ ಓವರ್‌ಲ್ಯಾಂಡ್ ಪಾರ್ಕ್ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರ ಫೇಸ್‌ಬುಕ್ ಪುಟದಲ್ಲಿ ಬರೆದುಕೊಳ್ಳಲಾಗಿದೆ. ಅವರು ಕಾನ್ಸಾಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದರು. ಬ್ಲೂ ವ್ಯಾಲಿ ವೆಸ್ಟ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಮುಗಿಸಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 2ನೇ ತಿಂಗಳಿಗೆ ಕಾಲಿಟ್ಟ ಸುಡಾನ್ ಸಂಘರ್ಷ: ಮಾನವೀಯ ಬಿಕ್ಕಟ್ಟು ಉಲ್ಬಣ

ಪಥಿವಾಡ ಸಾವಿಗೆ ನಿಖರ ಕಾರಣ ತಿಳಿಯದ ಹಿನ್ನೆಲೆಯಲ್ಲಿ ಕೊಲೆ ಅನುಮಾನ ಮೂಡಿದೆ. ಅನುಮಾನಾಸ್ಪದ ರೀತಿಯಲ್ಲಿ ಶವ ದೊರೆತಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈವರೆಗೂ ಅಧಿಕಾರಿಗಳು ಹೆಚ್ಚಿನ ವಿವರ ನೀಡಿಲ್ಲವಾದರೂ, ಪ್ರವಾಸಕ್ಕೆಂದು ಬಂದ ವೇಳೆ ಅನಾಹುತ ನಡೆದ ಕೋನದಿಂದಲೂ ತನಿಖೆ ನಡೆಯುತ್ತಿದೆ. ಲಹರಿ ಸ್ನೇಹಿತನೊಂದಿಗೆ ಟೆಕ್ಸಾಕೋಮಾ ಸರೋವರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಏನಾದರೂ ಅವಘಢ ಸಂಭವಿಸಿದೆಯಾ ಎಂಬುದನ್ನೂ ತನಿಖೆ ಮಾಡಲಾಗುತ್ತಿದೆ.

ಇದನ್ನೂ ಓದಿ: ನನ್ನನ್ನು ಬಂಧಿಸಲು ಪೊಲೀಸರು ಮನೆ ಸುತ್ತುವರಿದಿದ್ದಾರೆ: ಇಮ್ರಾನ್ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.