ETV Bharat / international

2028ರಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಆಯೋಜನೆಯ ಪ್ರಸ್ತಾಪ ಮಾಡಿದ ಭಾರತ

COP28 Summit: ಭಾರತದಲ್ಲಿ 2028ರ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಅಥವಾ ಕಾಪ್​33 (COP-33) ಸಮ್ಮೇಳನವನ್ನು ಆಯೋಜಿಸುವ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Dec 1, 2023, 5:31 PM IST

Updated : Dec 1, 2023, 5:42 PM IST

ದುಬೈ: 2028ರಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಅಥವಾ ಕಾಪ್​33 (COP-33) ಸಮ್ಮೇಳನವನ್ನು ಭಾರತದಲ್ಲಿ ಆಯೋಜಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಸ್ತಾಪಿಸಿದ್ದಾರೆ. ಜನರ ಸಹಭಾಗಿತ್ವದ ಮೂಲಕ ಕಾರ್ಬನ್ ಸಿಂಕ್‌ಗಳನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುವ ಗ್ರೀನ್ ಕ್ರೆಡಿಟ್ ಇನಿಶಿಯೇಟಿವ್​ ಪ್ರಾರಂಭಿಸಲಾಗುತ್ತದೆ ಎಂದು ಪ್ರಧಾನಿ ತಿಳಿಸಿದರು.

ದುಬೈನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ ವಿವಿಧ ರಾಷ್ಟ್ರಗಳ ನಾಯಕರು ಮತ್ತು ಸರ್ಕಾರಗಳ ಉನ್ನತ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಗಮನಾರ್ಹ ಸಮತೋಲನ ಕುರಿತು ಭಾರತವು ಜಗತ್ತಿಗೆ ಉತ್ತಮ ಉದಾಹರಣೆ ನೀಡಿದೆ ಎಂದು ಹೇಳಿದರು.

ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವ ರಾಷ್ಟ್ರೀಯ ಯೋಜನೆಗಳು ಅಥವಾ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಹದಗೆಡುವುದನ್ನು ತಪ್ಪಿಸಲು ರಾಷ್ಟ್ರೀಯವಾಗಿ ನಿರ್ಧರಿಸಲ್ಪಟ್ಟ ಕೊಡುಗೆಗಳನ್ನು ಸಾಧಿಸುವ ಹಾದಿಯಲ್ಲಿರುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ಕಾಪ್-28 ಅಧ್ಯಕ್ಷ ಸುಲ್ತಾನ್ ಅಲ್ ಜಾಬರ್ ಮತ್ತು ಯುಎನ್ ಹವಾಮಾನ ಬದಲಾವಣೆಯ ಅಧ್ಯಕ್ಷ ಸೈಮನ್ ಸ್ಟೀಲ್ ಅವರೊಂದಿಗೆ ಆರಂಭಿಕ ಮಾತುಗಳನ್ನಾಡಿದ ಏಕೈಕ ನಾಯಕ ಮೋದಿ ಅವರಾಗಿದ್ದಾರೆ.

ತಾಪಮಾನ ಏರಿಕೆಯನ್ನು ತಗ್ಗಿಸುವಿಕೆ ಮತ್ತು ಹೊಂದಾಣಿಕೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಕರೆ ನೀಡಿದ ಪ್ರಧಾನಿ, ಪ್ರಪಂಚದಾದ್ಯಂತ ಇಂಧನ ಪರಿವರ್ತನೆಯು ಕೇವಲ ಮತ್ತು ಅಂತರ್ಗತ ಆಗಿರಬೇಕು. ಹವಾಮಾನ ಬದಲಾವಣೆ ಎದುರಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಹಾಯ ಮಾಡಲು ಶ್ರೀಮಂತ ರಾಷ್ಟ್ರಗಳು ತಮ್ಮ ತಂತ್ರಜ್ಞಾನವನ್ನು ನೆರವು ಕಲ್ಪಿಸಬೇಕೆಂದು ತಿಳಿಸಿದರು.

ಪರಿಸರಕ್ಕಾಗಿ ಜೀವನಶೈಲಿಯನ್ನು ಪ್ರತಿಪಾದಿಸಿದ ಅವರು, ರಾಷ್ಟ್ರಗಳು ಗ್ರಹ ಸ್ನೇಹಿ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಈ ವಿಧಾನವು 2 ಬಿಲಿಯನ್ ಟನ್​ಗಳಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುತ್ತದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯ ಅಧ್ಯಯನವು ಹೇಳುತ್ತದೆ. ಪ್ರತಿಯೊಬ್ಬರ ಹಿತಾಸಕ್ತಿ ಕಾಪಾಡಬೇಕು ಮತ್ತು ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಹೇಳಿದರು.

  • #WATCH | Dubai, UAE | At the Opening of the COP28 high-level segment for HoS/HoG, PM Narendra Modi says, "India is committed to UN Framework for Climate Change process. That is why, from this stage, I propose to host COP33 Summit in India in 2028." pic.twitter.com/4wfNBn7r3L

    — ANI (@ANI) December 1, 2023 " class="align-text-top noRightClick twitterSection" data=" ">

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರನ್ನು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಬರಮಾಡಿಕೊಂಡರು. ಉಭಯ ನಾಯಕರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದ ಮೋದಿ, ಒಟ್ಟಿಗೆ ಪೋಟೋಗೆ ಪೋಸ್ ನೀಡಿದರು. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಮತ್ತು ಯುರೋಪಿಯನ್ ಯೂನಿಯನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಸೇರಿದಂತೆ ವಿವಿಧ ವಿಶ್ವ ನಾಯಕರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೇ, ಸಮ್ಮೇಳನ ನಿಮಿತ್ತ ಎಲ್ಲ ನಾಯಕರು ಗುಂಪು ಪೋಟೋ ತೆಗೆಸಿಕೊಂಡರು.

ಇದನ್ನೂ ಓದಿ: ವಿಶ್ವ ಹವಾಮಾನ ಶೃಂಗಸಭೆ: ದುಬೈಗೆ ಆಗಮಿಸಿದ ಮೋದಿ, ಅದ್ಧೂರಿ ಸ್ವಾಗತ

Last Updated : Dec 1, 2023, 5:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.