ETV Bharat / international

ಅಮೆರಿಕಕ್ಕೆ ಭಾರತದೊಂದಿಗಿನ ಸಂಬಂಧ ನಿರ್ಣಾಯಕ: ಅಮೆರಿಕ​ ಕಾಂಗ್ರೆಸ್ ಸದಸ್ಯ ರೋ ಖನ್ನಾ ಪ್ರತಿಪಾದನೆ - ಮಲಕ್ಕಾ ಜಲಸಂಧಿಯು ಭಾರತ ಮತ್ತು ಚೀನಾ

ಚೀನಾ ಮತ್ತು ರಷ್ಯಾದೊಂದಿಗೆ ವ್ಯವಹರಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ಅಮೆರಿಕದ ಸಂಬಂಧ ನಿರ್ಣಾಯಕವಾಗಿದೆ ಎಂದು ಅಮೆರಿಕ​ ಕಾಂಗ್ರೆಸ್ ಸದಸ್ಯ ರೋ ಖನ್ನಾ ಹೇಳಿದ್ದಾರೆ.

Congressman Ro Khanna
Congressman Ro Khanna
author img

By ETV Bharat Karnataka Team

Published : Aug 30, 2023, 2:09 PM IST

ವಾಷಿಂಗ್ಟನ್: ಚೀನಾ ಮತ್ತು ರಷ್ಯಾದೊಂದಿಗೆ ಸೂಕ್ತವಾಗಿ ವ್ಯವಹರಿಸುವ ನಿಟ್ಟಿನಲ್ಲಿ ಭಾರತದೊಂದಿಗಿನ ಅಮೆರಿಕದ ಸಂಬಂಧವು ನಿರ್ಣಾಯಕವಾಗಿದೆ ಎಂದು ಭಾರತೀಯ - ಅಮೆರಿಕನ್ ಕಾಂಗ್ರೆಸ್ ಸದಸ್ಯ ರೋ ಖನ್ನಾ ಹೇಳಿದ್ದಾರೆ. ಭಾರತದಿಂದ ಹಿಂದಿರುಗಿದ ನಂತರ ಖನ್ನಾ ಮಂಗಳವಾರ ರೇಡಿಯೋ ಟಾಕ್ ಶೋ ನಿರೂಪಕ ಹಗ್ ಹೆವಿಟ್ ಅವರೊಂದಿಗೆ ಮಾತನಾಡಿದರು. ಸಂವಾದದಲ್ಲಿ ಅವರು ದ್ವಿಪಕ್ಷೀಯ ಕಾಂಗ್ರೆಸ್ ನಿಯೋಗದ ನೇತೃತ್ವ ವಹಿಸಿದ್ದರು.

"ಚೀನಾ ಮತ್ತು ರಷ್ಯಾ ಸ್ಪಷ್ಟವಾಗಿ ಅಮೆರಿಕಕ್ಕೆ ಎರಡು ಕಾರ್ಯತಂತ್ರದ ಸವಾಲು ಮತ್ತು ಎದುರಾಳಿಗಳಾಗಿವೆ. ಹೀಗಾಗಿಯೇ ಭಾರತದೊಂದಿಗಿನ ಸಂಬಂಧವು ಅದನ್ನು ಎದುರಿಸುವಲ್ಲಿ ತುಂಬಾ ನಿರ್ಣಾಯಕವಾಗಲಿದೆ. ಚೀನಾ ಮತ್ತು ರಷ್ಯಾ ಯಾವತ್ತಿಗೂ ಪರಸ್ಪರ ತೀವ್ರ ಸಂಘರ್ಷದ ಮಟ್ಟಕ್ಕೆ ಹೋಗುವುದಿಲ್ಲ ಮತ್ತು ಈ ವಿಷಯದಲ್ಲಿ ಅಮೆರಿಕಕ್ಕೆ ಅವಕಾಶಗಳಿವೆ ಎಂದು ನಾನು ಭಾವಿಸುತ್ತೇನೆ. ಆದರೆ, ಒಟ್ಟಾರೆಯಾಗಿ ಆ ಎರಡೂ ದೇಶಗಳು ಏನು ಮಾಡುತ್ತಿವೆ ಎಂಬುದರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು" ಎಂದು ಅವರು ಸಲಹೆ ನೀಡಿದರು.

ಚೀನಾದೊಂದಿಗಿನ ಸಂಘರ್ಷದ ಸಮಯದಲ್ಲಿ ಭಾರತವು ಮಲಕ್ಕಾ ಜಲಸಂಧಿಯನ್ನು ನಿರ್ಬಂಧಿಸಬಹುದು ಎಂದು ಅಮೆರಿಕ ನಿರೀಕ್ಷಿಸುವುದು ಅಸಮಂಜಸವಾಗಿದೆ. ಆದರೆ ಬೀಜಿಂಗ್ ತೈವಾನ್ ಮೇಲೆ ಆಕ್ರಮಣ ಮಾಡಿದರೆ ಲಡಾಖ್ ಮತ್ತು ಅರುಣಾಚಲ ಪ್ರದೇಶದ ಗಡಿಗಳಲ್ಲಿ ನವದೆಹಲಿ ಆಕ್ರಮಣಕಾರಿಯಾಗಬಹುದು ಎಂದು ಖನ್ನಾ ಹೇಳಿದರು. ಮಲಕ್ಕಾ ಜಲಸಂಧಿಯು ಅಂಡಮಾನ್ ಸಮುದ್ರ (ಹಿಂದೂ ಮಹಾಸಾಗರ) ಮತ್ತು ದಕ್ಷಿಣ ಚೀನಾ ಸಮುದ್ರ (ಪೆಸಿಫಿಕ್ ಮಹಾಸಾಗರ) ವನ್ನು ಸಂಪರ್ಕಿಸುವ ಜಲಮಾರ್ಗವಾಗಿದೆ.

ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರದ ನಡುವಿನ ಸಂಪರ್ಕಕ್ಕಾಗಿ ಮಲಕ್ಕಾ ಜಲಸಂಧಿಯು ಭಾರತ ಮತ್ತು ಚೀನಾ ನಡುವಿನ ಅತ್ಯಂತ ಕಡಿಮೆ ದೂರದ ಸಮುದ್ರ ಮಾರ್ಗವಾಗಿದೆ. ಹೀಗಾಗಿಯೇ ಇದು ವಿಶ್ವದ ಅತಿ ಹೆಚ್ಚು ಪ್ರಯಾಣಿಸುವ ಹಡಗು ಮಾರ್ಗಗಳಲ್ಲಿ ಒಂದಾಗಿದೆ. ಪ್ರಸ್ತುತ ಕಾಂಗ್ರೆಷನಲ್ ಇಂಡಿಯಾ ಕಾಕಸ್​ನ ಸಹ - ಅಧ್ಯಕ್ಷರಾಗಿರುವ ಖನ್ನಾ, ತೈವಾನ್ ಮೇಲೆ ಚೀನಾ ಆಕ್ರಮಣ ಮಾಡಿದ ಸಂದರ್ಭದಲ್ಲಿ ಭಾರತವು ಮಲಕ್ಕಾ ಜಲಸಂಧಿಯನ್ನು ಮುಚ್ಚಬೇಕೆಂದು ಬಯಸುತ್ತೇನೆ ಎಂದು ಭಾರತೀಯ ಅಮೆರಿಕನ್ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಮಂಗಳವಾರ ಹೇಳಿದ್ದನ್ನು ಒಪ್ಪಲಿಲ್ಲ.

"ಚೀನಾವು ಸ್ವಯಂ ಆಡಳಿತದ ತೈವಾನ್ ಅನ್ನು ತನ್ನದೇ ದೇಶದ ಮತ್ತೊಂದು ಪ್ರಾಂತ್ಯ ಎಂದು ಪರಿಗಣಿಸುತ್ತದೆ ಹಾಗೂ ಅದನ್ನು ಮತ್ತೆ ತನ್ನ ಮುಖ್ಯ ಭೂಭಾಗದೊಂದಿಗೆ ಸೇರಿಸಿಕೊಳ್ಳಲು ಬಯಸುತ್ತದೆ. ಈ ಉದ್ದೇಶವನ್ನು ಸಾಧಿಸಲು ಚೀನಾ ಬಲಪ್ರಯೋಗ ನಡೆಸುವ ಇರಾದೆಯನ್ನು ಹೊಂದಿದೆ. ಇಂಥ ಸಂದರ್ಭದಲ್ಲಿ ಭಾರತ ಏನು ಮಾಡಬಹುದು ಅಥವಾ ಮಾಡುವುದಿಲ್ಲ ಎಂಬುದರ ಬಗ್ಗೆ ನಾವು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ನನ್ನ ಪ್ರಕಾರ ಇದು ಬಹಳ ಪ್ರಮುಖ ಅಂಶವಾಗಿದೆ. ಭಾರತವು ಮಲಕ್ಕಾ ಜಲಸಂಧಿಯನ್ನು ನಿರ್ಬಂಧಿಸಬಹುದು ಎಂದು ನಿರೀಕ್ಷಿಸುವುದು ಅಸಮಂಜಸವಾಗಿದೆ." ಎಂದು ಅವರು ಹೇಳಿದರು.

1965 ರ ನಂತರ ಯುಎಸ್ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದ ಮೇಲೆ ರಷ್ಯಾದ ಶಸ್ತ್ರಾಸ್ತ್ರಗಳ ಮೇಲಿನ ಭಾರತದ ಅವಲಂಬನೆ ಹೆಚ್ಚಾಯಿತು ಎಂದು ಭಾರತದ ವಿದೇಶಾಂಗ ಸಚಿವ ಎಸ್​. ಜೈಶಂಕರ್ ಹೇಳಿದ್ದನ್ನು ಖನ್ನಾ ಉಲ್ಲೇಖಿಸಿದರು. ನಾವು ಸಚಿವ ಜೈಶಂಕರ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದಾಗ, 1965 ರ ನಂತರ ಅಮೆರಿಕ ನಮಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದನ್ನು ನಿಲ್ಲಿಸಿತು ಮತ್ತು ಅಧ್ಯಕ್ಷ ನಿಕ್ಸನ್ ಅವರಿಗೆ ಚೀನಾದೊಂದಿಗಿನ ಸಂಬಂಧ ಉತ್ತಮಗೊಳಿಸಲು ಪಾಕಿಸ್ತಾನದ ಅಗತ್ಯ ಕಂಡುಬಂದಿತ್ತು ಎಂದು ಅವರು ನಮಗೆ ಹೇಳಿದರು ಎಂದು ಖನ್ನಾ ತಿಳಿಸಿದರು.

ಇದನ್ನೂ ಓದಿ : ಬಾಂಗ್ಲಾದೇಶದಲ್ಲಿ ಹಿಂಸಾಚಾರ; ಬಿಎನ್​ಪಿ - ಅವಾಮಿ ಲೀಗ್​​ ಸಂಘರ್ಷದಲ್ಲಿ 50 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.