ETV Bharat / international

ಇಮ್ರಾನ್​ಖಾನ್​ ಹತ್ಯೆ ಯತ್ನ.. ಈ ಕಾರಣಕ್ಕಾಗಿಯೇ ಇಮ್ರಾನ್​ ಖಾನ್ ಕೊಲ್ಲಲು ಬಯಸಿದ್ದೆ.. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ವಿಡಿಯೋ - ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​

ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಇಮ್ರಾನ್​ರನ್ನು ಮಾತ್ರ ನಾನು ಕೊಲೆ ಮಾಡಲು ಬಯಸಿದ್ದೆ, ಬೇರ್ಯಾರೂ ನನ್ನ ಗುರಿಯಾಗಿರಲಿಲ್ಲ ಎಂದು ತಿಳಿಸಿದ್ದಾನೆ.

imran-khan-attack-shooter-video
ಆರೋಪಿ ತಪ್ಪೊಪ್ಪಿಗೆ ಹೇಳಿಕೆ ವಿಡಿಯೋ
author img

By

Published : Nov 3, 2022, 9:42 PM IST

ಇಸ್ಲಾಮಾಬಾದ್(ಪಾಕಿಸ್ತಾನ): ಇಮ್ರಾನ್​ ಖಾನ್​ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದು, ಅದನ್ನು ಸಹಿಸಲಾಗದೇ ನಾನು ಆತನನ್ನು ಕೊಲೆ ಮಾಡಲು ಬಯಸಿದ್ದೆ. ಬೇರೆ ಯಾರ ಮೇಲೂ ದಾಳಿ ಮಾಡಲು ನಾನು ಗುಂಡು ಹಾರಿಸಿಲ್ಲ..

ಇದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯ ಹೇಳಿಕೆ. ಪಾಕಿಸ್ತಾನ ಪಂಜಾಬ್​ನ ವಜೀರಾಬಾದ್​ನಲ್ಲಿ ಮಾಜಿ ಪ್ರಧಾನಿ ನಡೆಸುತ್ತಿದ್ದ ರ‍್ಯಾಲಿಯ ವೇಳೆ ಇಮ್ರಾನ್​ ಖಾನ್​ ಗುರಿಯಾಗಿಸಿಕೊಂಡು ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಇದರಲ್ಲಿ ಇಮ್ರಾನ್​ ಮತ್ತು ಅವರ ಆಪ್ತ ಸಹಾಯಕನಿಗೆ ಗುಂಡು ತಾಕಿ ಗಾಯಗೊಂಡಿದ್ದಾರೆ.

ಸ್ಥಳದಲ್ಲೇ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದು, ಇದರ ವಿಡಿಯೋ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಆರೋಪಿ ನೀಡಿದ ಹೇಳಿಕೆಯಂತೆ, ಇಮ್ರಾನ್​ ಖಾನ್​ ದೇಶದ ಜನರ ದರಿ ತಪ್ಪಿಸುತ್ತಿದ್ದಾರೆ. ಇದರಿಂದ ಬೇಸತ್ತಿದ್ದ ನನಗೆ ಅವರನ್ನು ಹತ್ಯೆ ಮಾಡಬೇಕು ಎಂದು ರ‍್ಯಾಲಿಯಲ್ಲಿ ಭಾಗಿಯಾದೆ. ಬಳಿಕ ಖಾನ್​ ಇದ್ದ ವಾಹನದ ಹತ್ತಿರ ತೆರಳಿ ಗುಂಡಿನ ದಾಳಿ ಮಾಡಿದೆ. ಇಮ್ರಾನ್​ ಅವರನ್ನು ಮಾತ್ರ ಹತ್ಯೆ ಮಾಡಲು ಬಯಸಿದ್ದೆ. ಬೇರೆ ಯಾರ ಮೇಲೂ ನಾನು ಗುಂಡು ಹಾರಿಸಿಲ್ಲ ಎಂದು ಹೇಳಿದ್ದಾನೆ.

ದಾಳಿಕೋರ ತಾನು ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದು, ಇಮ್ರಾನ್​ ಖಾನ್​ ಮೆಗಾ ರ‍್ಯಾಲಿಯನ್ನು ಘೋಷಿಸಿದ ನಂತರ ಹತ್ಯೆ ಮಾಡುವ ಆಲೋಚನೆ ಮಾಡಿದ್ದೆ. ಇಂದು ಅವರನ್ನು ಕೊಲ್ಲಲು ನಿರ್ಧರಿಸಿ ಗುಂಡು ಹಾರಿಸಿದೆ ಎಂದಿದ್ದಾನೆ.

ನಾನು ಒಂಟಿಯಾಗಿ ಈ ನಿರ್ಧಾರಕ್ಕೆ ಬಂದಿದೆ. ನನ್ನೊಂದಿಗೆ ಯಾರೂ ಇಲ್ಲ. ಮೋಟಾರು ಬೈಕ್‌ನಲ್ಲಿ ಬಂದು ಅದನ್ನು ವಜೀರಾಬಾದ್​ನಲ್ಲಿನ ಸಂಬಂಧಿಕರ ಅಂಗಡಿಯಲ್ಲಿ ಬಿಟ್ಟು ರ‍್ಯಾಲಿಯಲ್ಲಿ ಧುಮುಕಿದೆ. ರ‍್ಯಾಲಿಯಲ್ಲಿ ಜೋರಾಗಿ ಹಾಡುಗಳನ್ನು ಹಾಕಿದ್ದಾಗ ಗುಂಡು ಹಾರಿಸಿದೆ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಓದಿ: ಭಾರತ ಹೊಗಳಿದ್ದ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.