ETV Bharat / international

ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಉಯಿಘರ್​ ಮುಸ್ಲಿಮರ ಮೇಲೆ ದೌರ್ಜನ್ಯ: ವಿಶ್ವಸಂಸ್ಥೆ - ಯುಎನ್ ಹೈ ಕಮಿಷನರ್ ಮಿಚೆಲ್ ಬ್ಯಾಚೆಲೆಟ್

ವಿಶ್ವಸಂಸ್ಥೆ ವರದಿ ಬಿಡುಗಡೆಗೂ ಮುನ್ನವೇ ಮಾತನಾಡಿದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಚೀನಾದ ರಾಯಭಾರಿ ಜಾಂಗ್ ಜುನ್, ಚೀನಾಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎಂದು ದೂರಿದ್ದಾರೆ.

UN High Commissioner Michelle Bachelet
ಯುಎನ್ ಹೈ ಕಮಿಷನರ್ ಮಿಚೆಲ್ ಬ್ಯಾಚೆಲೆಟ್
author img

By

Published : Sep 1, 2022, 11:45 AM IST

Updated : Sep 1, 2022, 12:00 PM IST

ಜಿನೇವಾ: ಕ್ಸಿನ್​ಜಿಯಾಂಗ್​ ಪ್ರದೇಶದಲ್ಲಿ ಉಯಿಘರ್​ ಮುಸ್ಲಿಮರ ಮೇಲೆ ಚೀನಾ ಸರ್ಕಾರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವುದರ ಕುರಿತು ವಿಶ್ವಸಂಸ್ಥೆ​ ಹೊಸ ವರದಿ ಬಹಿರಂಗಪಡಿಸಿದೆ. ಮೇ ತಿಂಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ್ದ ಮಾನವ ಹಕ್ಕುಗಳ ಯುಎನ್ ಹೈ ಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಅವರು ತಮ್ಮ ನಾಲ್ಕು ವರ್ಷಗಳ ಅಧಿಕಾರವಧಿ ಕೊನೆಗೊಳ್ಳುವ ಕೆಲವೇ ನಿಮಿಷಗಳ ಮೊದಲು ಬುಧವಾರ ವರದಿ ಬಿಡುಗಡೆ ಮಾಡಿದ್ದಾರೆ.

ಚೀನಾ ಬಗ್ಗೆ ತುಂಬಾ ಮೃದು ಧೋರಣೆ ಹೊಂದಿರುವುದಕ್ಕಾಗಿ ಮಿಚೆಲ್ ಬ್ಯಾಚೆಲೆಟ್ ಕೆಲವು ರಾಜತಾಂತ್ರಿಕರು ಮತ್ತು ಹಕ್ಕುಗಳ ಗುಂಪುಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ನಂತರದ ಮಹತ್ವದ ಬೆಳವಣಿಗೆಯಲ್ಲಿ ವರದಿ ಸಲ್ಲಿಸಿರುವ ಅವರು, ಕ್ಸಿನ್​ಜಿಯಾಂಗ್​ನಲ್ಲಿ ಗಂಭೀರ ಮಾನಹಕ್ಕುಗಳ ಉಲ್ಲಂಘನೆಯಾಗಿದೆ. ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ ಘಟನೆಗಳು ವರದಿಯಾಗಿವೆ ಎಂದು ವರದಿ ಪ್ರಕಟಿಸಿದ್ದು, ಸರ್ಕಾರದ ಭಯೋತ್ಪಾದನೆ ಮತ್ತು ಪ್ರತಿ ಉಗ್ರವಾದ ತಂತ್ರಗಳನ್ನೂ ಅವರು ಉಲ್ಲೇಖಿಸಿದ್ದಾರೆ.

ಬಲವಂತದ ವೈದ್ಯಕೀಯ ಚಿಕಿತ್ಸೆ, ಕುಟುಂಬ ಯೋಜನೆ ಮತ್ತು ಜನನ ನಿಯಂತ್ರಣ ನೀತಿಗಳನ್ನು ಚೀನಾ ಜಾರಿ ಮಾಡುತ್ತಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರ್ಬಂಧಿಸಲು ಅಸ್ಪಷ್ಟ ರಾಷ್ಟ್ರೀಯ ಭದ್ರತಾ ಕಾನೂನುಗಳನ್ನು ಬಳಸುತ್ತಿದೆ. ತನಿಖಾಧಿಕಾರಿಗಳು ಚೀನಾ ವಿರೋಧದ ನಡುವೆಯೂ ಅಲ್ಲಿನ ಅಪರಾಧಗಳ ಕುರಿತು ವಿಶ್ವಾಸಾರ್ಹ ಪುರಾವೆಗಳನ್ನು ಬಹಿರಂಗಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುದೀರ್ಘವಾದ ವರದಿಯನ್ನು ಪ್ರಕಟಿಸಿರುವ ಮಿಚೆಲ್ ಬ್ಯಾಚೆಲೆಟ್, ತರಬೇತಿ ಕೇಂದ್ರಗಳು, ಜೈಲುಗಳಲ್ಲಿ ಬಂಧಿತರಾಗಿರುವ ಎಲ್ಲರನ್ನು ಬಿಡುಗಡೆ ಮಾಡಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಚೀನಾ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

ಹಸ್ತಕ್ಷೇಪ ಬೇಡ- ಚೀನಾ ಗರಂ: ಈ ವರದಿಯನ್ನು ಮೊದಲೇ ನೋಡಿರುವ ಚೀನಾ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದೆ. ವರದಿಯ ಬಿಡುಗಡೆಗೂ ಮುನ್ನ ಮಾತನಾಡಿದ ವಿಶ್ವಸಂಸ್ಥೆಯ ಚೀನಾದ ರಾಯಭಾರಿ ಜಾಂಗ್ ಜುನ್, ಚೀನಾದ ವಿರುದ್ಧ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.

ಕ್ಸಿನ್​ಜಿಯಾಂಗ್​ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವ ಸುದ್ದಿ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾದ ಸುಳ್ಳು ಎಂಬುದು ಎಲ್ಲರಿಗೂ ಗೊತ್ತಿದೆ. ಚೀನಾದ ಸ್ಥಿರತೆ ದುರ್ಬಲಗೊಳಿಸುವುದು ಮತ್ತು ಚೀನಾದ ಅಭಿವೃದ್ಧಿಯನ್ನು ತಡೆಯುವುದು ಇದರ ಉದ್ದೇಶ ಎಂದು ಜಾಂಗ್​ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ.

ಇದನ್ನೂ ಓದಿ : ಆಫ್ಘನ್​ಗೆ 40 ಸಾವಿರ ಮೆಟ್ರಿನ್​ ಟನ್​ ಗೋಧಿ, 32 ಟನ್​ ವೈದ್ಯಕೀಯ ನೆರವು: ವಿಶ್ವಸಂಸ್ಥೆಗೆ ಭಾರತ ಮಾಹಿತಿ

Last Updated : Sep 1, 2022, 12:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.