ETV Bharat / international

ಮಳೆಬಿಲ್ಲಿನಂತೆ ಮಿನುಗುವ ಚಿಕ್ಕ ಪಾರದರ್ಶಕ ಮೀನು: ಕಾರಣ ಪತ್ತೆ ಹಚ್ಚಿದ ಸಂಶೋಧಕರು

author img

By

Published : Mar 14, 2023, 5:19 PM IST

ವಿಜ್ಞಾನಿಗಳು ತಮ್ಮ ಇತ್ತೀಚಿನ ಅಧ್ಯಯನವೊಂದರಲ್ಲಿ ಘೋಸ್ಟ್ ಕ್ಯಾಟ್ಫಿಶ್ ಎಂದು ಕರೆಯಲ್ಪಡುವ ಮೀನುಗಳು ತಮ್ಮ ದೇಹದಲ್ಲಿ ವರ್ಣವೈವಿಧ್ಯದ ಹೊಳಪನ್ನು ಹೇಗೆ ಸೃಷ್ಟಿಸುತ್ತವೆ ಎಂಬುದನ್ನು ಕಂಡುಹಿಡಿದಿದ್ದಾರೆ.

How this little see-through fish gets its rainbow shimmer
ಮಳೆಬಿಲ್ಲಿನಂತೆ ಮಿನುಗುವ ಚಿಕ್ಕ ಪಾರದರ್ಶಕ ಮೀನು:ಕಾರಣ ಪತ್ತೆ ಹಚ್ಚಿದ ಸಂಶೋಧಕರು

ನ್ಯೂಯಾರ್ಕ್(ಅಮೆರಿಕ): ಥೈಲ್ಯಾಂಡ್‌ನ ಈ ಚಿಕ್ಕ ಅಕ್ವೇರಿಯಂ ಮೀನಿನ ದೇಹದ ಒಳ ಭಾಗವನ್ನು ನಾವು ನೋಡಬಹುದು. ಇದರ ಚರ್ಮವು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ. ಈ ಮೀನಿನ ದೇಹದ ಮೇಲೆ ಸರಿಯಾಗಿ ಬೆಳಕು ಬಿದ್ದಾಗ ಅದರ ದೇಹವು ಕಾಮನಬಿಲ್ಲಿನ ಬಣ್ಣಗಳಿಂದ ಮಿನುಗುತ್ತದೆ. ಈಗ ವಿಜ್ಞಾನಿಗಳು ಘೋಸ್ಟ್ ಕ್ಯಾಟ್​ಫಿಶ್ ಎಂದು ಕರೆಯಲ್ಪಡುವ ಈ ಮೀನು ತನ್ನ ದೇಹದಲ್ಲಿ ವರ್ಣವೈವಿಧ್ಯದ ಹೊಳಪನ್ನು ಹೇಗೆ ಸೃಷ್ಟಿಸುತ್ತದೆ ಎಂಬುದನ್ನು ಕಂಡುಹಿಡಿದಿದ್ದಾರೆ.

ಥೈಲ್ಯಾಂಡ್‌ನ ನದಿಗಳಲ್ಲಿ ಕಂಡುಬರುವ ಘೋಸ್ಟ್ ಕ್ಯಾಟ್​ಫಿಶ್​​: ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್ ಜರ್ನಲ್‌ನಲ್ಲಿ ಸೋಮವಾರ ಪ್ರಕಟವಾದ ಅಧ್ಯಯನದ ಪ್ರಕಾರ ಆ ಹೊಳಪು ಒಳಗಿನಿಂದ ಬರುತ್ತದೆ. ಮೀನಿನ ಚರ್ಮದ ಮೂಲಕ ಬೆಳಕು ಹಾದುಹೋಗುವಾಗ, ಸ್ನಾಯುಗಳಲ್ಲಿನ ಸಣ್ಣ ರಚನೆಗಳಿಗೆ ಬೆಳಕು ಅಪ್ಪಳಿಸುತ್ತದೆ. ನಂತರ ಅವು ಬೆಳಕನ್ನು ವರ್ಣರಂಜಿತ ವರ್ಣಪಟಲವಾಗಿ ಪರಿವರ್ತಿಸುತ್ತವೆ. ಈ ಘೋಸ್ಟ್ ಕ್ಯಾಟ್​ಫಿಶ್​​ಗಳನ್ನು, ಗ್ಲಾಸ್​ ಕ್ಯಾಟ್​ಫಿಶ್ ಎಂದು ಕರೆಯಲಾಗುತ್ತದೆ. ಈ ಮೀನುಗಳು ಥೈಲ್ಯಾಂಡ್‌ನ ನದಿಗಳಲ್ಲಿ ಕಂಡುಬರುವ ಸ್ಥಳೀಯವಾದ ಸಣ್ಣ ಜಾತಿಯ ಮೀನುಗಳಾಗಿವೆ. ಇವು ಸರಾಸರಿ ಕೆಲವು ಇಂಚುಗಳು (ಸೆಂಟಿಮೀಟರ್‌ಗಳು) ಉದ್ದವಿರುತ್ತವೆ. ಈ ಮೀನುಗಳನ್ನು ಪ್ರಪಂಚದಾದ್ಯಂತ ಅಕ್ವೇರಿಯಂ ಮೀನು ಎಂದು ಮಾರಾಟ ಮಾಡಲಾಗುತ್ತದೆ.

ಪ್ರಪಂಚದಲ್ಲಿ ಇತರ ಜೀವಿಗಳು ಸಹ ವರ್ಣವೈವಿಧ್ಯವನ್ನು ಹೊಂದಿದ್ದು, ನೀವು ಚಲಿಸುವಾಗ ಬಣ್ಣಗಳು ಬದಲಾಗುವ ಮಿನುಗುವ ಮಳೆಬಿಲ್ಲಿನ ಪರಿಣಾಮವನ್ನು ಸೃಷ್ಟಿಸುತ್ತವೆ. ಸಾಮಾನ್ಯವಾಗಿ, ಅವುಗಳು ಬೆಳಕನ್ನು ಪ್ರತಿಬಿಂಬಿಸುವ ಹೊಳೆಯುವ ಹೊರ ಮೇಲ್ಮೈಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಹಮ್ಮಿಂಗ್ ಹಕ್ಕಿಯ ಗರಿಗಳು ಅಥವಾ ಚಿಟ್ಟೆಯ ರೆಕ್ಕೆಗಳಂತೆ ಎಂದು ಸಂಶೋಧನೆಯಲ್ಲಿ ಭಾಗಿಯಾದ ಅರಿಜೋನಾ ಸ್ಟೇಟ್ ಯೂನಿವರ್ಸಿಟಿ ಜೀವಶಾಸ್ತ್ರಜ್ಞ ರಾನ್ ರುಟೊವ್ಸ್ಕಿ ವಿವರಿಸಿದರು.

ಗೋಸ್ಟ್ ಕ್ಯಾಟ್‌ಫಿಶ್‌ ಬೆಳಕನ್ನು ಮಳೆಬಿಲ್ಲಿನ ವರ್ಣಗಳಾಗಿ ಪರಿವರ್ತಿಸುತ್ತದೆ: ಘೋಸ್ಟ್ ಕ್ಯಾಟ್‌ಫಿಶ್‌ಗೆ ಯಾವುದೇ ಮಾಪಕಗಳಿಲ್ಲ ಎಂದು ಚೀನಾದ ಶಾಂಘೈ ಜಿಯಾವೊ ಟಾಂಗ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರಜ್ಞ, ಹಿರಿಯ ಲೇಖಕ ಕ್ವಿಬಿನ್ ಝಾವೋ ಹೇಳಿದ್ದಾರೆ. ಅವರು ಈ ಮೀನುಗಳನ್ನು ಅಕ್ವೇರಿಯಂ ಅಂಗಡಿಯಲ್ಲಿ ನೋಡಿದ ನಂತರ ಆಕರ್ಷಿತರಾಗಿದ್ದರು. ಈ ಮೀನುಗಳು ಸ್ನಾಯುಗಳಲ್ಲಿ ಬಿಗಿಯಾಗಿ ಪ್ಯಾಕ್ ಮಾಡಲಾದ ರಚನೆಗಳನ್ನು ಹೊಂದಿವೆ. ಅವು ಬೆಳಕನ್ನು ಮಳೆಬಿಲ್ಲಿನ ವರ್ಣಗಳಾಗಿ ಪರಿವರ್ತಿಸುತ್ತವೆ. ಪ್ರಯೋಗಾಲಯದಲ್ಲಿ ಅದರ ದೇಹದ ಮೇಲೆ ವಿವಿಧ ಬಣ್ಣಗಳ ದೀಪಗಳು ಮತ್ತು ಲೇಸರ್‌ಗಳನ್ನು ಹಾಯಿಸಿದ ನಂತರ ಸಂಶೋಧಕರು ಈ ಅಂಶವನ್ನು ಪತ್ತೆ ಮಾಡಿದ್ದಾರೆ. ಘೋಸ್ಟ್ ಕ್ಯಾಟ್​ಫಿಶ್ ಈಜುವಾಗ, ಅದರ ಸ್ನಾಯುಗಳು ವಿಶ್ರಾಂತಿ ಮತ್ತು ಬಿಗಿಗೊಳಿಸುತ್ತವೆ. ಇದರಿಂದ ಬಣ್ಣಗಳ ಹೊಳೆಯುವ ಶ್ರೇಣಿಯನ್ನು ಹೊರಹೊಮ್ಮಿಸುತ್ತವೆ.

"ಮೀನಿನ ಚರ್ಮವು ಅಷ್ಟು ಪಾರದರ್ಶಕವಾಗಿಲ್ಲದಿದ್ದರೆ ನಾವು ಬಣ್ಣಗಳನ್ನು ನೋಡಲು ಸಾಧ್ಯವಾಗುವುದಿಲ್ಲ" ಎಂದು ವಿಜ್ಞಾನಿ ಜಾವೋ ತಮ್ಮ ಇಮೇಲ್​ನಲ್ಲಿ ತಿಳಿಸಿದ್ದಾರೆ. ಕೆಲವು ಪ್ರಭೇದಗಳು ಸಂಗಾತಿಗಳನ್ನು ಆಕರ್ಷಿಸಲು ಅಥವಾ ಎಚ್ಚರಿಕೆ ಸಂಕೇತಗಳನ್ನು ನೀಡಲು ತಮ್ಮ ವರ್ಣವೈವಿಧ್ಯವನ್ನು ಅನ್ನು ಬಳಸುತ್ತವೆ. ಆದರೆ ಘೋಸ್ಟ್ ಕ್ಯಾಟ್​ಫಿಶ್​ಗಳು ಬಣ್ಣಗಳನ್ನು ಯಾವ ಉದ್ದೇಶಕ್ಕೆ ಹೊರಹೊಮ್ಮಿಸುತ್ತವೆ ಎಂಬುದು ಸ್ಪಷ್ಟವಾಗಿಲ್ಲ ಎಂದು ರುಟೋವ್ಸ್ಕಿ ಹೇಳಿದರು.

ಇದನ್ನೂ ಓದಿ:ಬಂಜೆತನಕ್ಕೆ ಕಾರಣ ಸೊಸೆಯೋ, ಅತ್ತೆಯೋ?: ಹೊಸ ವಿಷಯ ಬಹಿರಂಗ ಪಡಿಸಿದ ವಿಜ್ಞಾನಿಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.